ಒಂದು ಲಾಗ್ ಇನ್ ಗೆ ಒಂದೇ ರೈಲ್ವೆ ಟಿಕೆಟ್
ನವದೆಹಲಿ, ಮಾ. 24 : ಇನ್ನು ಮುಂದೆ ರೈಲ್ವೆ ಇಲಾಖೆ ವೆಬ್ ಸೈಟ್ ಗೆ ಲಾಗ್ ಇನ್ ಆಗಿ ಮನಸೋ ಇಚ್ಛೆ ಬೇಕಾದಷ್ಟು ಟಿಕೆಟ್ ಖರೀದಿ ಮಾಡುವಂತಿಲ್ಲ. ಒಂದು ಬಾರಿ ಲಾಗ್ ಇನ್ ಗೆ ಒಂದೇ ಟಿಕೆಟ್ ಎಂಬ ನಿಯಮವನ್ನು ರೈಲ್ವೆ ಇಲಾಖೆ ಜಾರಿ ಮಾಡಲು ಹೊರಟಿದೆ.
ಒಂದು ಬಾರಿ ಆನ್ ಲೈನ್ ನಲ್ಲಿ ಲಾಗ್ ಇನ್ ಆದರೆ ಒಂದೆ ಟಿಕೆಟ್ ಖರೀದಿಸಬಹುದು(ಒಟ್ಟು ಆರು ಜನರ ಪ್ರಯಾಣಕ್ಕೆ ಸಂಬಂಧಿಸಿದ ಒಂದೇ ಟಿಕೆಟ್ ಪಡೆಯಲು ಸಾಧ್ಯವಿದೆ) ಎಂಬ ನೀತಿಯನ್ನು ತರಲು ರೈಲ್ವೆ ಇಲಾಖೆ ಮುಂದಾಗಿದೆ. ಒಮ್ಮೆಲೇ ಹಲವು ಇ-ಟಿಕೆಟ್‌ಗಳ ಖರೀದಿಯನ್ನು ತಡೆ ಗಟ್ಟಲು ರೈಲ್ವೆ ಇಲಾಖೆ ಇಂಥ ಉಪಾಯ ಮಾಡಿದೆ.[ಇನ್ನೂ 4 ತಿಂಗಳ ಮೊದಲೇ ರೈಲ್ವೆ ಟಿಕೆಟ್ ಬುಕ್ ಮಾಡಿ]

ಐಆರ್‌ಸಿಟಿಸಿಗೆ ಒಮ್ಮೆ ಲಾಗ್‌ಇನ್ ಆದ ಬಳಕೆದಾರರು ಒಂದು ಬಾರಿಗೆ ಒಂದು ಟಿಕೆಟ್ ಮಾತ್ರ ಖರೀದಿಸಲು ಸಾಧ್ಯ. ಹೆಚ್ಚು ಟಿಕೆಟ್ ಖರೀದಿಸಲು ಪ್ರಯತ್ನಿಸಿದರೆ ಬಳಕೆದಾರರ ಖಾತೆ ಸ್ವಯಂಚಾಲಿತವಾಗಿ ಲಾಗ್‌ಔಟ್ ಆಗುತ್ತದೆ ಎಂದ ರೈಲ್ವೆ ಸಚಿವಾಲಯದ ತಿಳಿಸಿದೆ.
ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ರವರೆಗೆ ಮಾತ್ರ ಈ ಮಿತಿ ಅನ್ವಯ ವಾಗುತ್ತದೆ. ಆದರೆ ಹೋಗುವ ಮತ್ತು ಬರುವ ಟಿಕೆಟ್‌ಗಳನ್ನು ಒಟ್ಟಿಗೆ ಖರೀದಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಮಿತಿ ಐಆರ್‌ಸಿಟಿಸಿ (ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್) ಏಜೆಂಟ್ ಗಳಿಗೂ ಅನ್ವಯಿಸುತ್ತದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಸೈನಿಕರಿಗೆ ಮಾತ್ರ ಈ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ. [30 ಸೆಕೆಂಡ್ ನಲ್ಲಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಹೇಗೆ?]
ಪ್ಲಾಟ್‌ಫಾರ್ಮ್ ಟಿಕೆಟ್ ದರ ಏರಿಕೆ
ರೈಲ್ವೆ ಪ್ಲಾಟ್‌ಫಾರ್ಮ್ ಟಿಕೆಟ್ ದರವನ್ನು 10 ರೂ.ಗೆ ಏರಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. 5 ರೂ. ಇರುವ ದರ ಪರಿಷ್ಕರಣೆಗೆ ಒಳಗಾಗಲಿದ್ದು ಹೊಸ ದರ ಏಪ್ರಿಲ್ ಒಂದರಿಂದ ಜಾರಿಗೆ ಬರಲಿದೆ.
ರೈಲ್ವೆ ಪ್ಲಾಟ್‌ಫಾರ್ಮ್‌ಗಳಲ್ಲಿ ಹೆಚ್ಚಿನ ಜನ ಸಂದಣಿ ಉಂಟಾಗುವ ವಿಶೇಷ ಸಂದರ್ಭಗಳಲ್ಲಿ ಅದನ್ನು ನಿಯಂತ್ರಿಸಲು ಟಿಕೆಟ್ ದರವನ್ನು ಇನ್ನಷ್ಟು ಹೆಚ್ಚಿಸುವ ಅಧಿಕಾರವನ್ನು ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ ನೀಡಲಾಗುತ್ತಿದೆ.











Click it and Unblock the Notifications