ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಯಾಣಿಕರ ಪರದಾಟ ತಪ್ಪಿಸಿದ ಸುವಿಧ ರೈಲು

By Vanitha
|
Google Oneindia Kannada News

ನವದೆಹಲಿ, ಜೂ.20 : ರಜಾ ಮತ್ತು ಹಬ್ಬದ ದಿನಗಳಲ್ಲಿ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಿಹಿಸುದ್ದಿ. 'ಸುವಿಧ' ಎಂಬ ರೈಲು ಸೇವೆಯನ್ನು ಇಲಾಖೆ ಆರಂಭಿಸುತ್ತಿದೆ. ಇದು ಕನ್‌ಫರ್ಮ್ ಟಿಕೆಟ್ ಗಳನ್ನು ಮಾತ್ರ ಪ್ರಯಾಣಿಕರಿಗೆ ನೀಡಲಿದೆ. ಇದರಿಂದ ಪ್ರಯಾಣಿಕರು ಟಿಕೆಟ್ ಪಡೆಯಲು ಕಾಯುವುದು ತಪ್ಪಲಿದ್ದು, ಜುಲೈನಲ್ಲಿ ಈ ರೈಲಿನ ಸಂಚಾರ ಆರಂಭವಾಗಲಿದೆ.

ಬೇಸಿಗೆ ರಜೆ, ದಸರಾ, ಹೋಳಿ, ದೀಪಾವಳಿ ಮುಂತಾದ ಸಂದರ್ಭದಲ್ಲಿ ರೈಲು ಪ್ರಯಾಣಿಕರಿಂದ ತುಂಬಿ ತುಳುಕುತ್ತಿರುತ್ತದೆ. ಈ ಸಮಯದಲ್ಲಿ ಟಿಕೆಟ್ ಪಡೆಯಲು ಸಾಕಷ್ಟು ಹರಸಾಹಸ ಪಡಬೇಕಾಗುತ್ತದೆ. ಪ್ರಯಾಣಿಕರ ಈ ತೊಂದರೆ ನಿವಾರಿಸಲು ರೈಲ್ವೆ ಇಲಾಖೆಯು 'ಸುವಿಧ' ಎಂಬ ಸೇವೆ ಆರಂಭಿಸುತ್ತಿದೆ. ಈ ರೈಲಿನಲ್ಲಿ ಕನ್ ಫರ್ಮ್ ಟಿಕೇಟ್‌ಗಳನ್ನು ನೀಡಲಾಗುತ್ತದೆ.

ಆದರೆ, ಪ್ರಥಮ ದರ್ಜೆಯ ಎಸಿ ಹೊರತು ಪಡಿಸಿ ಉಳಿದ ದರ್ಜೆಗಳಿಗೆ ಈ ನಿಯಮ ಅನ್ವಯವಾಗಲಿದೆ. ಪ್ರಾಯೋಗಿಕವಾಗಿ ಈ ಸೌಲಭ್ಯವನ್ನು ಆರಂಭಿಸಲಾಗುತ್ತಿದ್ದು, ಯೋಜನೆ ಯಶಸ್ವಿಯಾದರೆ ಎಲ್ಲಾ ರೈಲುಗಳಲ್ಲೂ ಈ ನಿಯಮ ಜಾರಿಗೆ ತರುವ ಚಿಂತನೆ ಇದೆ.

Railways to give passengers only confirm tickets now

ಏನಿದು ಸುವಿಧ ರೈಲು? : ಜುಲೈನಲ್ಲಿ ಸಂಚಾರ ಆರಂಭಿಸುರವ ಸುವಿಧ ರೈಲು ರಾಜಧಾನಿ, ದುರೊಂಟೊ ಮತ್ತು ಮೇಲ್ ಆಂಡ್ ಎಕ್ಸ್ ಪ್ರೆಸ್ ಟ್ರೈನ್ಸ್ ಎಂಬ ಮೂರು ವಿಭಿನ್ನ ಹೆಸರಿನಲ್ಲಿ ತನ್ನ ಸಂಚಾರ ಆರಂಭಿಸಲಿದೆ. ಈ ರೈಲುಗಳಲ್ಲಿ ಪ್ರಯಾಣಿಸಲು ಗರಿಷ್ಠ 30 ದಿನ ಅಥವಾ ಕನಿಷ್ಠ 10 ದಿನದ ಮುಂಚಿತವಾಗಿಯೇ ಟಿಕೆಟ್ ಬುಕ್ ಮಾಡಬೇಕು. ಖಚಿತವಾಗಿ ಸೀಟ್ ಸಿಕ್ಕರೆ ಮಾತ್ರ ಪ್ರಯಾಣ ಮಾಡಬಹುದಾಗಿದೆ.

English summary
Railways will give only confirmed tickets to passengers in 'Suvidha trains. These trains will come into force in the first week of July. Suppose someone will take a ticket of the first AC and it will not be confirmed, then the Railways will arrange him a confirmed ticket in other classes like AC second one
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X