ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಗಡ ಟಿಕೆಟ್ ಬುಕ್ಕಿಂಗ್; ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 07: ಭಾರತೀಯ ರೈಲ್ವೆ ಮುಂಗಡ ಟಿಕೆಟ್ ಬುಕ್ ಮಾಡುವವರಿಗೆ ಸಿಹಿ ಸುದ್ದಿಯನ್ನು ನೀಡಿದೆ. ಈ ಹಿಂದಿನ ಪದ್ಧತಿಯಂತೆ ಅಕ್ಟೋಬರ್ 10 ರಿಂದ 2ನೇ ಮುಂಗಡ ಟಿಕೆಟ್ ಬುಕ್ಕಿಂಗ್ ಲಿಸ್ಟ್‌ ಅನ್ನು ತಯಾರು ಮಾಡಲಿದೆ.

ರೈಲ್ವೆ ಈ ಕುರಿತು ಆದೇಶವನ್ನು ಹೊರಡಿಸಿದೆ. ಈ ಹಿಂದೆ ಇದ್ಧ ಪದ್ಧತಿಯಂತೆ ರೈಲು ಹೊರಡುವ 30 ನಿಮಿಷಗಳ ಮುಂಚೆ ಎರಡನೇ ಮುಂಗಡ ಟಿಕೆಟ್ ಪಟ್ಟಿ ಸಿದ್ಧವಾಗಲಿದೆ. ಆನ್‌ಲೈನ್, ಪಿಆರ್‌ಎಸ್ ಟಿಕೆಟ್ ಕೌಂಟರ್ ಮೂಲಕ ಟಿಕೆಟ್ ಬುಕ್ ಮಾಡಿದವರಿಗೆ 2ನೇ ಪಟ್ಟಿಯಲ್ಲಿ ಅವಕಾಶ ನೀಡಲಾಗುತ್ತದೆ.

ಬೆಂಗಳೂರು-ಮಂಗಳೂರು ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ಬೆಂಗಳೂರು-ಮಂಗಳೂರು ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ

ರೈಲು ಹೊರಡುವುದಕ್ಕೆ 4 ಗಂಟೆಗಳ ಮೊದಲು ಮೊದಲ ಮುಂಗಡ ಟಿಕೆಟ್ ಬುಕ್ಕಿಂಗ್ ಪಟ್ಟಿ ಸಿದ್ಧವಾಗುತ್ತದೆ. ರೈಲಿನಲ್ಲಿ ಲಭ್ಯವಿರುವ ಆಸನಗಳನ್ನು ನೋಡಿಕೊಂಡು 30 ನಿಮಿಷಗಳ ಮೊದಲು 2ನೇ ಪಟ್ಟಿ ಸಿದ್ಧಪಡಿಸಲಾಗುತ್ತದೆ.

ಹಬ್ಬಕ್ಕೆ ಬಂಪರ್: ಭಾರತೀಯ ರೈಲ್ವೆಯಿಂದ 200 ಹೊಸ ರೈಲು ಸಂಚಾರಹಬ್ಬಕ್ಕೆ ಬಂಪರ್: ಭಾರತೀಯ ರೈಲ್ವೆಯಿಂದ 200 ಹೊಸ ರೈಲು ಸಂಚಾರ

Railways Decided To Restore Preparation Of Second Reservation Charts

ಪಿಆರ್‌ಎಸ್ ಕೌಂಟರ್, ಆನ್‌ಲೈನ್ ಮೂಲಕ ಬುಕ್ ಮಾಡಿದವರಿಗೆ ಮೊದಲು ಬಂದವರಿಗೆ ಆದ್ಯತೆ ನಿಯಮಗಳ ಅನ್ವಯ 2ನೇ ಪಟ್ಟಿಯಲ್ಲಿ ಅವಕಾಶ ನೀಡಲಾಗುತ್ತದೆ. ಈ ಅವಧಿಯಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದರೂ ಸಹ ಹಣವನ್ನು ವಾಪಸ್ ನೀಡಲಾಗುತ್ತದೆ.

ಬೆಂ-ಮಂಗಳೂರು ರೈಲು ಸಂಚಾರದಲ್ಲಿ ಭಾರಿ ಬದಲಾವಣೆ ಬೆಂ-ಮಂಗಳೂರು ರೈಲು ಸಂಚಾರದಲ್ಲಿ ಭಾರಿ ಬದಲಾವಣೆ

ವಿವಿಧ ರೈಲ್ವೆ ವಲಯಗಳು ಮಾಡಿದ ಮನವಿಯನ್ನು ಪರಿಗಣಿಸಿ ಈ ವ್ಯವಸ್ಥೆಯನ್ನು ಆಳವಡಿಕೆ ಮಾಡಲು ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. ಇದರಿಂದಾಗಿ ಯಾರಾದರೂ ಮುಂಗಡ ಟಿಕೆಟ್ ರದ್ದು ಮಾಡಿದರೆ, ಬೇರೆಯವರಿಗೆ ಸಂಚಾರ ನಡೆಸಲು ಅವಕಾಶ ಸಿಗಲಿದೆ.

English summary
Indian railways decided to restore earlier system of preparation of second reservation charts. Charts to be issued 30 minutes before the scheduled train departure time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X