ಮನನೊಂದು ರಾಜೀನಾಮೆಗೆ ಮುಂದಾಗಿದ್ದ ರೈಲ್ವೆ ಸಚಿವ ಪ್ರಭು

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 23: ಸಾಲು ಸಾಲು ರೈಲು ದುರಂತಗಳನ್ನು ಕಂಡು ಮನನೊಂದು ರಾಜೀನಾಮೆ ನೀಡಲು ಸಚಿವ ಸುರೇಶ್ ಪ್ರಭು ಮುಂದಾಗಿದ್ದರು.ಈ ಬಗ್ಗೆ ಸರಣಿ ಟ್ವೀಟ್ ಮಾಡಿದ್ದ ಪ್ರಭು ಅವರನ್ನು ಪ್ರಧಾನಿ ಮೋದಿ ಅವರು ಕರೆಸಿಕೊಂಡು ಮಾತನಾಡಿಸಿದ್ದಾರೆ.

ನಂತರ, ಸುರೇಶ್ ಪ್ರಭು ಅವರು ತಮ್ಮ ನಿರ್ಧಾರದಿಂದ ಪ್ರಭು ಅವರು ಹಿಂದೆ ಸರಿದಿದ್ದಾರೆ. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲು ನಾನು ಮುಂದಾಗಿದ್ದೆ, ಆದರೆ, ಮೋದಿ ಅವರು ನನ್ನನ್ನು ತಡೆದರು ಎಂದು ಪ್ರಭು ಹೇಳಿದ್ದಾರೆ.

Railway Minister Suresh Prabhu offers to Resign

ಇದಕ್ಕೂ ಮುನ್ನ ರೈಲ್ವೆ ಬೋರ್ಡಿನ ಚೇರ್ಮನ್ ಅಶೋಕ್ ಮಿತ್ತಲ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ಅಂಗೀಕಾರವೂ ಆಗಿದೆ. ಕಳೆದ ಮೂರು ವರ್ಷಗಳಲ್ಲಿ 27ಕ್ಕೂ ಅಧಿಕ ಅಪಘಾತಗಳಾಗಿವೆ, ಕಳೆದ ವಾರದಲ್ಲೇ ಮೂರು ಬಾರಿ ರೈಲ್ವೆ ಹಳಿ ತಪ್ಪಿದ ಘಟನೆಗಳು ಸಂಭವಿಸಿದೆ.


2014ರಿಂದ ರೈಲ್ವೇ ಬೋರ್ಡ್ ಚೇರ್ಮನ್ ಆಗಿದ್ದ ಅಶೋಕ್ ಅವರು, ಮುಜಾಫರ್ ನಗರದ ದುರಂತದ ಬಳಿಕ ಇಲಾಖೆ ಕೈಗೊಂಡ ಕ್ರಮಗಳ ಬಗ್ಗೆ ಸಮ್ಮತಿ ಇಲ್ಲದೆ ರಾಜೀನಾಮೆ ನೀಡಿದ್ದಾರೆ.
Railway Minister Suresh Prabhu offers to Resign

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Railway Minister Suresh Prabhu on Wednesday offered to resign after two derailment incidents. He said Prime Minister Narendra Modi told me to be patient and work for the betterment of the railway network

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X