92 ಪೈಸೆ ರೈಲ್ವೆ ವಿಮೆ, ನಾಮಿನಿ ಮಾಡಬೇಕಾದ ಜರೂರು

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ನವೆಂಬರ್ 22: ಆನ್ ಲೈನ್ ಮೂಲಕ ರೈಲು ಟಿಕೆಟ್ ಖರೀದಿಸುವಾಗ ಮತ್ತು ಇನ್ಷೂರೆನ್ಸ್ ಅಯ್ಕೆ ಮಾಡಿಕೊಳ್ಳುವಾಗ ತಪ್ಪದೆ ನಾಮಿನಿ (ನಾಮ ನಿರ್ದೇಶನ)ಯನ್ನು ಹೆಸರಿಸಿ. ಈ ಇನ್ಷೂರೆನ್ಸ್ ಗೆ ನೀವು ನೀಡುವುದು 92 ಪೈಸೆ ಮಾತ್ರ. ನಾಮಿನಿ ಮಾಡಲಿಲ್ಲ ಅಂದರೆ ಹಣ ನಿಮ್ಮ ಹತ್ತಿರದವರಿಗೆ ಸಿಗಲ್ಲ ಅಂತೇನೂ ಅಲ್ಲ.

ಅದರೆ, ಅದಕ್ಕಾಗಿ ತುಂಬ ಸಮಯ ತೆಗೆದುಕೊಳ್ಳುತ್ತದೆ. ನಿಮ್ಮ ಸಂಬಂಧಿ ಎಂಬುದನ್ನು ಸಾಬೀತು ಪಡಿಸಲು ಅಧಿಕೃತ ದಾಖಲೆಗಳನ್ನು ನೀಡಬೇಕಾಗುತ್ತದೆ. ಅಂಥ ವೇಳೆ ವಿಳಂಬ ಆಗುತ್ತದೆ. ಭಾನುವಾರ ನಡೆದ ರೈಲು ಅಪಘಾತದಲ್ಲಿ ನೂರಾ ನಲವತ್ತು ಮಂದಿ ಸಾವನ್ನಪ್ಪಿದ್ದಾರೆ. ನೂರರಷ್ಟು ಮಂದಿ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಿದವರು ಇನ್ಷೂರೆನ್ಸ್ ಮಾಡಿಸಿದ್ದಾರೆ.[ಶೀಘ್ರದಲ್ಲೇ, ರೈಲು ಟಿಕೆಟ್ ಕೊಳ್ಳಲು ಆಧಾರ್ ಕಡ್ಡಾಯ!]

Railway insurance premium at 92 paise: Why you must appoint a nominee

ಈ ರೀತಿ ಪ್ರಯಾಣ ವಿಮೆಯನ್ನು ಸೆಪ್ಟೆಂಬರ್ 1, 2016ರಿಂದ ಪರಿಚಯಿಸಲಾಗಿದೆ. 92 ಪೈಸೆ ಪಾವತಿಸುವ ಮೂಲಕ ಅದರ ಪ್ರಯೋಜನ ಪಡೆಯಬಹುದು. ಅದರೆ ಬಹುತೇಕ ಪ್ರಯಾಣಿಕರು ನಾಮಿನಿ ಮಾಡುವುದನ್ನು ಮರೆಯುತ್ತಾರೆ. ಮೊದಲನೇದಾಗಿ 92 ಪೈಸೆ ವಿಮೆ ಏನು ಮಹಾ ಎಂಬ ಧೋರಣೆ, ಎರಡನೇದು ಪ್ರಯಾಣ ಸುರಕ್ಷತೆಯನ್ನು ಗಂಭೀರವಾಗಿ ಪರಿಗಣಿಸದೆ ನಾಮಿನಿ ಮಾಡಿಸೋದಿಲ್ಲ.[ಯಶವಂತಪುರ-ಶಿವಮೊಗ್ಗ ರೈಲು ವಾರದಲ್ಲಿ 3 ದಿನ ಸಂಚಾರ]

ಯಾರು ನಾಮಿನಿ ಮಾಡಿರೋದಿಲ್ಲವೋ ಇ ಮೇಲ್, ಮೆಸೇಜ್ ಮೂಲಕ ನೆನಪಿಸಲಾಗುತ್ತದೆ. ಆದರೆ ಅದನ್ನು ಗಂಭೀರವಾಗಿ ಪರಿಗಣಿಸಲ್ಲ. ಅನಾಹುತ ಸಂಭವಿಸಿದಲ್ಲಿ ಯಾರಿಗೆ ಪರಿಹಾರ ನೀಡಬೇಕು ಎಂಬುದು ಇನ್ಷೂರೆನ್ಸ್ ಕಂಪನಿಗಳಿಗೆ ತಿಳಿಯುವುದೇ ಕಷ್ಟವಾಗಿದೆ.

ಸಂಬಂಧಪಟ್ಟವರ ವಿಳಾಸಕ್ಕೆ ಜ್ಞಾಪನಾ ಪತ್ರಗಳನ್ನು ಕಳಿಸಬೇಕು. ತೊಂದರೆಗೊಳಗಾದ ವ್ಯಕ್ತಿಯ ಹತ್ತಿರದ ಸಂಬಂಧಿ ಎಂದು ಸಾಬೀತಾದ ನಂತರವೇ ಪರಿಹಾರ ನೀಡಬೇಕು. ಒಂದು ವೇಳೆ ನಾಮಿನಿ ಎಂದು ಕೊಟ್ಟುಬಿಟ್ಟಿದ್ದರೆ ಸಲೀಸಾಗುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
When you purchase a train ticket online and opt for insurance, make sure you appoint a nominee. With the insurance premium being just 92 paise, many do not bother appointing a nominee.
Please Wait while comments are loading...