Railway Budget 2024: ಭಾರತೀಯ ರೈಲ್ವೆ ಬಜೆಟ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖಾಂಶಗಳು
ನವದೆಹಲಿ, ಜನವರಿ, 31: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು ಮಧ್ಯಂತರ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದು, ಇದರಲ್ಲಿ ರೈಲ್ವೆಗೆ ಏನೆಲ್ಲ ವಿಶೇಷ ಘೋಷಣೆಗಳನ್ನು ಮಾಡಬಹುದು ಎಂದು ಭಾರತೀಯ ರೈಲ್ವೆ ಇಲಾಖೆ ಕಾಯುತ್ತಿದೆ. ಹಾಗಾದರೆ ರೈಲ್ವೆ ಬಜೆಟ್‌ನ ಪ್ರಮುಖಾಂಶಗಳನ್ನು ಇಲ್ಲಿ ಗಮನಿಸಬಹುದಾಗಿದೆ.
* 2017-18ರ ಹಣಕಾಸು ವರ್ಷಕ್ಕೆ ಆಗಿನ ಹಣಕಾಸು ಸಚಿವರಾಗಿದ್ದ ದಿವಂಗತ ಅರುಣ್ ಜೇಟ್ಲಿ ಅವರು ಮೊದಲ ಸಂಯೋಜಿತ ಬಜೆಟ್ ಅನ್ನು ಮಂಡಿಸಿದಾಗ, ಸರ್ಕಾರವು 2016ರಲ್ಲಿ ರೈಲ್ವೆ ಬಜೆಟ್ ಅನ್ನು ಕೇಂದ್ರ ಬಜೆಟ್‌ನೊಂದಿಗೆ ವಿಲೀನಗೊಳಿಸಲು ನಿರ್ಧರಿಸಿತು.

* 2017ರ ಮೊದಲು, ಕೇಂದ್ರ ಬಜೆಟ್‌ಗಿಂತ ಕೆಲವು ದಿನಗಳ ಮೊದಲು ರೈಲ್ವೆ ಬಜೆಟ್ ಅನ್ನು ಪ್ರತ್ಯೇಕವಾಗಿ ಮಂಡಿಸಲಾಗುತ್ತಿತ್ತು. ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು 2017-18ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸಿದಾಗ ಈ ಪದ್ಧತಿ ಕೊನೆಗೊಂಡಿತು. ಈ ಪದ್ಧತಿಯನ್ನು ನಂತರದ ಸರ್ಕಾರಗಳು ಅನುಸರಿಸಿವೆ.
* ಭಾರತೀಯ ರೈಲ್ವೇಯು ಏಪ್ರಿಲ್ 1, 2023ರಿಂದ ಡಿಸೆಂಬರ್ 31, 2023 ರವರೆಗೆ ದಾಖಲೆಯ ಬಂಡವಾಳ ವೆಚ್ಚವನ್ನು ಖರ್ಚು ಮಾಡಿದೆ. ಇದು ಒಂಬತ್ತು ತಿಂಗಳಲ್ಲಿ ಅತಿ ಹೆಚ್ಚು ಬಳಕೆಯಾದ ವೆಚ್ಚವಾಗಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
* ಹಣಕಾಸು ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಭಾರತೀಯ ರೈಲ್ವೇಯು ನಿಗದಿಪಡಿಸಿದ ವೆಚ್ಚದ ಬಜೆಟ್‌ನ 75% ಅನ್ನು ಬಳಸಿದೆ ಎಂದು ಡೇಟಾ ತೋರಿಸಿದೆ.
* ಈ ಅವಧಿಯಲ್ಲಿ ಭಾರತೀಯ ರೈಲ್ವೇಗಳು ಮಾಡಿದ ಒಟ್ಟು ವೆಚ್ಚವು ₹1,95,929.97 ಕೋಟಿಗಳಷ್ಟಿದೆ, ಇದು ಒಟ್ಟಾರೆ ವೆಚ್ಚ ಬಜೆಟ್‌ನ ₹2.62 ಲಕ್ಷ ಕೋಟಿಗಳ ಸರಿಸುಮಾರು 75% ಅನ್ನು ಪ್ರತಿನಿಧಿಸುತ್ತದೆ.
* ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ 2023 ಭಾಷಣದಲ್ಲಿ ಈ ಹಂಚಿಕೆಯು 2013-14ರ ಹಣಕಾಸು ವರ್ಷದಲ್ಲಿ ನಿಗದಿಪಡಿಸಿದ ಮೊತ್ತಕ್ಕಿಂತ ಒಂಬತ್ತು ಪಟ್ಟು ಹೆಚ್ಚು ಎಂದು ಉಲ್ಲೇಖಿಸಿದ್ದಾರೆ.
ಈ ಬಾರಿಯ ಆಯವ್ಯಯದಲ್ಲಿ ಭಾರತೀಯ ರೈಲ್ವೆಯು ಬಂಡವಾಳ ಹೂಡಿಕೆ ಮೇಲೆ ಹೆಚ್ಚಿನ ಒತ್ತು ಸಿಗಬಹುದು ಎನ್ನುವ ನಿರೀಕ್ಷೆ ಇಟ್ಟುಕೊಂಡಿದೆ. ಹೊಸ ರೈಲ್ವೆ ಯೋಜನೆಗಳ ಜತೆಗೆ ಈಗಾಗಲೇ ಜಾರಿಯಲ್ಲಿರುವ ಯೋಜನಗಳಿಗೂ ಹೆಚ್ಚಿನ ಆರ್ಥಿಕ ನೆರವು ಸಿಗುವ ಸಾಧ್ಯೆತೆಗಳಿವೆ. ಕಳೆದ ವರ್ಷ ರೈಲ್ವೆ ಆಯವ್ಯಯ 2.4 ಲಕ್ಷ ಕೋಟಿ ರೂಪಾಯಿ ಇತ್ತು. ಈ ಬಾರಿ ಬಜೆಟ್‌ನಲ್ಲಿ 3 ಲಕ್ಷ ಕೋಟಿ ರೂಪಾಯಿವರೆಗೂ ತಲುಪಬಹುದು ಎಂದು ಅಂದಾಜಿಸಲಾಗಿದೆ.
ರೈಲ್ವೆ ವಿಶ್ಲೇಷಕರ ಪ್ರಕಾರ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದಲ್ಲಿ ಅತಿ ವೇಗದ ರೈಲುಗಳ ಪ್ರಮಾಣವನ್ನು ಇನ್ನಷ್ಟು ಹಚ್ಚಿಸುವುದು ಹಾಗೂ ರೈಲ್ವೆ ಸುರಕ್ಷತಾ ಕ್ರಮಗಳಿಗೆ ಹೆಚ್ಚಿನ ಒತ್ತು ನೀಡುವ ಸಾಧ್ಯೆತೆಯಿದೆ. ರೈಲ್ವೆಯು ಪ್ರಮುಖ ರಾಷ್ಟ್ರೀಯ ಸಾರಿಗೆ ವ್ಯವಸ್ಥೆಯಾಗಿ ರೂಪುಗೊಂಡಿದ್ದು, ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಮಟ್ಟದಲ್ಲಿ ಆರ್ಥಿಕತೆಯಲ್ಲಿ ಬೆಳೆಯುತ್ತಿದೆ. ಈ ಕಾರಣದಿಂದಲೇ ರೈಲ್ವೆ ಸುಧಾರಣೆಗೆ ಮತ್ತಷ್ಟು ಬಲ ತುಂಬುವ ಕಾರ್ಯಗಳು ಆಗುವ ನಿರೀಕ್ಷೆಯಿದೆ.
ಭಾರತೀಯ ರೈಲ್ವೆ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಅನುದಾನವನ್ನು ಬಜೆಟ್ ಮೂಲಕ ಪಡೆಯುತ್ತಲೇ ಇದೆ. ಹಿಂದಿನ ಆಯವ್ಯಯಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಶೇಕಡಾ 15ರಷ್ಟಾದರೂ ಏರಿಕೆಯಾಗಬಹುದು. ರೈಲ್ವೆ ಉನ್ನತೀಕರಣಕ್ಕೆ ಇಷ್ಟು ಪ್ರಮಾಣದ ಅನುದಾನ ಏರಿಕೆ ಒಳ್ಳೆಯ ಬೆಳವಣಿಗೆಯೂ ಹೌದು ಎನ್ನುವುದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ.
ಇತ್ತೀಚಿನ ವರ್ಷಗಳಲ್ಲಿ ರಸ್ತೆ, ಹೆದ್ದಾರಿಗಳು, ರೈಲ್ವೆ, ರಕ್ಷಣಾ ವಲಯಕ್ಕೆ ಆದ್ಯೆ ನೀಡಲಾಗಿದೆ. ಈ ಬಾರಿಯೂ ಹೆದ್ದಾರಿಗಳು, ರೈಲ್ವೆ ಪ್ರಗತಿಗೆ ಆದ್ಯತೆ ದೊರಕಬಹುದು. ತಂತ್ರಜ್ಞಾನ ಬಳಸಿ ಹೆಚ್ಚಿಸಿ ರೈಲ್ವೆ ವಲಯದಲ್ಲೂ ಸಾಕಷ್ಟು ಪ್ರಗತಿಗೆ ಅವಕಾಶಗಳಿವೆ. ಅದನ್ನೂ ನಿರೀಕ್ಷಿಸಬಹುದು ಎನ್ನುವುದು ಇಕ್ರಾ ಸಂಸ್ಥೆ ಅಭಿಪ್ರಾಯಯಾವಗಿದೆ.
ಭಾರತೀಯ ರೈಲ್ವೆಯು ಮಾರ್ಗಗಳ ವಿದ್ಯುದೀಕರಣ, ಸರಕು ಸಾಗಣೆ ಕಾರಿಡಾರ್‌ಗಳನ್ನು ರೂಪಿಸುವುದು, ಹೈ ಸ್ಪೀಡ್ ರೈಲುಗಳ ಸಂಖ್ಯೆ ಹೆಚ್ಚಿಸುವುದು ಸೇರಿದಂತೆ ಹಲವು ಯೋಜನೆ ರೂಪಿಸಿದೆ. ವಂದೇ ಭಾರತ್ ರೈಲುಗಳ ಮೂಲಕ ಬದಲಾವಣೆಗೂ ನಾಂದಿ ಹಾಡಿದೆ. ದೇಶದಲ್ಲಿ ಸದ್ಯ 41 ವಂದೇ ಭಾರತ್ ರೈಲುಗಳ ಸಂಚಾರ ಇದ್ದು, ಇದನ್ನು ಇನ್ನೂ ಹೆಚ್ಚಿಸುವ ಯೋಜನೆಯೂ ರೈಲ್ವೆ ಇಲಾಖೆ ಮುಂದಿದೆ. ಇದನ್ನೂ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಬಹುದು.
ಕಳೆದ ವರ್ಷ ರೈಲು ಹೊಸ ಮಾರ್ಗಗಳಿಗೆಂದೇ 35,000 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿತ್ತು. ರೈಲ್ವೆ ಸುರಕ್ಷತಾ ನಿಧಿಯಾಗಿ 45,000 ಕೋಟಿ ರೂಪಾಗಳನ್ನು ತೆಗೆದಿಟ್ಟಿತ್ತು. ಇನ್ನು 10,000 ಕೋಟಿ ರೂಪಾಯಿಗಳನ್ನು ರಾಷ್ಟ್ರೀಯ ರೈಲು ಸಂರಕ್ಷಣಾ ಕೋಶಕ್ಕೆಂದು ಮೀಸಲಿಟ್ಟಿತ್ತು. ಈ ಬಾರಿಯೂ ನಾನಾ ರೂಪದಲ್ಲಿ ರೈಲ್ವೆಗೆ ಅನುದಾನ ಹರಿದುಬರುವ ಸಾಧ್ಯೆಯಿದೆ. ವಂದೇ ಭಾರತ್ ರೈಲುಗಳ ಸಂಖ್ಯೆಯನ್ನು ಹೆಚ್ಚಿಸಲು ಇದು ಅವಕಾಶ ಮಾಡಿಕೊಡಬಹುದು ಎನ್ನಲಾಗುತ್ತಿದೆ.
ಈಗಾಗಲೇ ಹಲವು ಕಡೆಗಳಲ್ಲಿ ಅಮೃತ ಭಾರತ್ ರೈಲ್ವೆನಿಲ್ದಾಣ ಯೋಜನೆಯೂ ಜಾರಿ ಆಗಿದ್ದು, ಈ ಯೋಜನೆಯಡಿ ಹಲವು ರೈಲ್ವೆ ನಿಲ್ದಾಣಗಳನ್ನು ಅಭಿವೃದ್ದಿಪಡಿಸಲಾಗುತ್ತಿದೆ. 3ನೇ ಹಂತದ ಪಟ್ಟಣಗಳ ರೈಲ್ವೆ ನಿಲ್ದಾಣಗಳನ್ನು ಹೆಚ್ಚಿನ ಅನುದಾನ ಒದಗಿಸಿ ಇದೇ ಯೋಜನೆಯಡಿ ತೆಗೆದುಕೊಳ್ಳಬಹುದು ಎನ್ನಲಾಗುತ್ತಿದೆ.
ಎರಡು ವರ್ಷದಿಂದ ರೈಲ್ವೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಎರಡು ವರ್ಷವೂ ತಲಾ 11,000 ಕೋಟಿ ರೂಪಾಯಿಗಳನ್ನು ನೀಡುತ್ತಾ ಬಂದಿದೆ. ಈ ಬಾರಿಯೂ ಇಷ್ಟೇ ಮೊತ್ತವನ್ನು ಮೀಸಲಿಡಬಹುದು ಇಲ್ಲವೇ ಹೆಚ್ಚಿಸಬಹುದು ಎನ್ನುವ ನಿರೀಕ್ಷೆಯನ್ನು ಹೊಂದಲಾಗಿದೆ.












Click it and Unblock the Notifications