ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Railway Budget 2023; ರೈಲ್ವೆ ಇಲಾಖೆಗೆ ದಾಖಲೆಯ ಅನುದಾನ ಹಂಚಿಕೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ ಭಾಷಣದಲ್ಲಿ ಭಾರತೀಯ ರೈಲ್ವೆಗೆ ದೊಡ್ಡ ಮೊತ್ತದ ಕೊಡುಗೆ ನೀಡಿದ್ದಾರೆ. ರೈಲ್ವೆ ಮೂಲ ಸೌಕರ್ಯ ವಲಯದಲ್ಲಿ ಮುಂದಿನ ದಿನಗಳಲ್ಲಿ ಭಾರೀ ಬದಲಾವಣೆ ನಿರೀಕ್ಷಿಸಬಹುದು.

|
Google Oneindia Kannada News

ನವದೆಹಲಿ, ಫೆಬ್ರವರಿ 01; ಲೋಕಸಭೆಯಲ್ಲಿ ಬುಧವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-24ನೇ ಸಾಲಿನ ಬಜೆಟ್ ಮಂಡಿಸಿದರು. ಈ ಬಾರಿಯ ಬಜೆಟ್‌ನಲ್ಲಿ ರೈಲ್ವೆ ವಲಯಕ್ಕೆ ದೊಡ್ಡ ಮೊತ್ತದ ಅನುದಾನ ಹಂಚಿಕೆ ಮಾಡಲಾಗಿದೆ.

ಸಾಮಾನ್ಯ ಬಜೆಟ್ ಜೊತೆ ರೈಲ್ವೆ ಬಜೆಟ್ ವಿಲೀನಗೊಂಡಿದೆ. ನಿರ್ಮಲಾ ಸೀತಾರಾಮನ್ ಬಜೆಟ್‌ ಭಾಷಣದಲ್ಲಿ ರೈಲ್ವೆ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಈ ಮೂಲಕ ದೇಶದ ಜನರ ಸಂಚಾರದ ಜೀವನಾಡಿಯಾದ ರೈಲ್ವೆಯಲ್ಲಿ ಮುಂದಿನ ದಿನಗಳಲ್ಲಿ ಹಲವು ಬದಲಾವಣೆಗಳನ್ನು ನಿರೀಕ್ಷೆ ಮಾಡಬಹುದಾಗಿದೆ.

Vande Bharat Express : ಬೆಂಗಳೂರು-ಧಾರವಾಡ ರೈಲಿಗೆ 8 ಬೋಗಿ, 5 ಗಂಟೆ ಪ್ರಯಾಣ!Vande Bharat Express : ಬೆಂಗಳೂರು-ಧಾರವಾಡ ರೈಲಿಗೆ 8 ಬೋಗಿ, 5 ಗಂಟೆ ಪ್ರಯಾಣ!

2023-24ನೇ ಬಜೆಟ್‌ನಲ್ಲಿ ರೈಲ್ವೆ ವಲಯಕ್ಕೆ 2.40 ಲಕ್ಷ ಕೋಟಿ ರೂ. ಅನುದಾನ ನೀಡಲಾಗಿದೆ. ರೈಲ್ವೆ ವಲಯಕ್ಕೆ ನೀಡಿರುವ ದಾಖಲೆಯ ಮೊತ್ತದ ಅನುದಾನ ಇದಾಗಿದೆ.

Vande Bharat Express: ಮಕರ ಸಂಕ್ರಾಂತಿಯಂದು ತೆಲಂಗಾಣ, ಆಂಧ್ರಕ್ಕೆ ಹೊಸ ವಂದೇ ಭಾರತ್ ಉಡುಗೊರೆ Vande Bharat Express: ಮಕರ ಸಂಕ್ರಾಂತಿಯಂದು ತೆಲಂಗಾಣ, ಆಂಧ್ರಕ್ಕೆ ಹೊಸ ವಂದೇ ಭಾರತ್ ಉಡುಗೊರೆ

Railway Budget 2023-24 Highlights : Key Takeways and Important Points in Kannada

2013-14ನೇ ಸಾಲಿನ ಬಜೆಟ್‌ನಲ್ಲಿ ನೀಡಿದ್ದ ಅನುದಾನಕ್ಕಿಂತ 9 ಪಟ್ಟು ಹೆಚ್ಚು ಅನುದಾನ ನೀಡಲಾಗಿದೆ. 2016ರಲ್ಲಿ ರೈಲ್ವೆ ಬಜೆಟ್‌ ಅನ್ನು ಸಾಮಾನ್ಯ ಬಜೆಟ್‌ ಜೊತೆಗೆ ವಿಲೀನಗೊಳಿಸಿ ಮಂಡಿಸಲು ಆರಂಭಿಸಲಾಯಿತು. ಅದಕ್ಕೂ ಮೊದಲು ರೈಲ್ವೆ ಬಜೆಟ್ ಪ್ರತ್ಯೇಕವಾಗಿ ಮಂಡನೆ ಮಾಡಲಾಗುತ್ತಿತ್ತು.

Vande Bharat; ಬೆಂಗಳೂರು-ಹುಬ್ಬಳ್ಳಿ ಮಾರ್ಗದ ಅಪ್‌ಡೇಟ್ ಕೊಟ್ಟ ಜೋಶಿ Vande Bharat; ಬೆಂಗಳೂರು-ಹುಬ್ಬಳ್ಳಿ ಮಾರ್ಗದ ಅಪ್‌ಡೇಟ್ ಕೊಟ್ಟ ಜೋಶಿ

ಈ ಬಾರಿಯ ಬಜೆಟ್‌ ಭಾಷಣದಲ್ಲಿ ವಂದೇ ಭಾರತ್ ರೈಲುಗಳಿಗೆ ಆದ್ಯತೆ ನೀಡಲಾಗಿದೆ. 2023ರ ಆಗಸ್ಟ್‌ವೊಳಗೆ 75 ವಂದೇ ಭಾರತ್ ರೈಲುಗಳನ್ನು ಓಡಿಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ 2022ರ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಕೆಂಪುಕೋಟೆ ಮೇಲಿನಿಂದ ಘೋಷಣೆ ಮಾಡಿದ್ದರು.

200 ವಂದೇ ಭಾರತ್ ಸ್ಲೀಪರ್ ರೈಲುಗಳ ತಯಾರಿಕೆಗೆ ಶೀಘ್ರದಲ್ಲಿಯೇ ಚಾಲನೆ ಸಿಗುವ ನಿರೀಕ್ಷೆ ಇದೆ. ಭಾರತೀಯ ರೈಲ್ವೆಯ ಜಾಲದಲ್ಲಿ ಹಂತ-ಹಂತವಾಗಿ ಶತಾಬ್ದಿ ರೈಲನ್ನು ಕಡಿತಗೊಳಿಸಿ ವಂದೇ ಭಾರತ್ ಪರಿಚಯಿಸುವ ಚಿಂತನೆಯಲ್ಲಿ ಹೆಚ್ಚಿನ ಅನುದಾನವನ್ನು ನೀಡಲಾಗಿದೆ.

vande-bharat

ಸ್ಲೀಪರ್ ವಂದೇ ಭಾರತ್ ರೈಲುಗಳು ರಾಜಧಾನಿ ಎಕ್ಸ್‌ಪ್ರೆಸ್‌ಗೆ ಪರ್ಯಾಯವಾಗಿವೆ. ಈ ವಂದೇ ಭಾರತ್, ಮಿನಿ ವಂದೇ ಭಾರತ್, ಸ್ಲೀಪರ್ ವಂದೇ ಭಾರತ್ ರೈಲುಗಳ ತಯಾರಿಕೆ ಗಮನದಲ್ಲಿಟ್ಟುಕೊಂಡು ರೈಲ್ವೆ ವಲಯಕ್ಕೆ ನೀಡುವ ಅನುದಾನವನ್ನು ಏರಿಕೆ ಮಾಡಲಾಗಿದೆ.

ಕಳೆದ ಬಜೆಟ್; ಕಳೆದ ಬಾರಿಯ ಬಜೆಟ್‌ನಲ್ಲಿ ಹಣಕಾಸು ಸಚಿವರು 1,40,367.13 ಕೋಟಿ ರೂ. ಅನುದಾನವನ್ನು ರೈಲ್ವೆ ವಲಯಕ್ಕೆ ಘೋಷಣೆ ಮಾಡಿದ್ದರು. ಈ ಬಾರಿ ದಾಖಲೆಯ ಅನುದಾನ ನೀಡಲಾಗಿದೆ.

500 ವಂದೇ ಭಾರತ್ ರೈಲುಗಳನ್ನು ನಿರ್ಮಾಣ ಮಾಡುವ ಗುರಿಯೊಂದಿಗೆ ಮತ್ತು ರೈಲ್ವೆ ಮಾರ್ಗದ ಸಂಪೂರ್ಣ ವಿದ್ಯುದೀಕರಣಕ್ಕೆ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ಮಾಲಿನ್ಯ ತಡೆಗಟ್ಟಲು 35 ಹೈಡ್ರೋಜನ್ ಮೂಲಕ ಸಂಚಾರ ನಡೆಸುವ ರೈಲುಗಳನ್ನು ಪರಿಚಯಿಸಲಾಗುತ್ತದೆ.

ಇಲಾಖೆಗೆ ನೀಡಿರುವ ಅನುದಾನ ಹಂಚಿಕೆಯನ್ನು ಗಮನಿಸಿದಾಗ ನೂತನ ವಿನ್ಯಾಸದ 4,500 ಕೋಚ್‌ಗಳು, 5 ಸಾವಿರ ಎಲ್‌ಬಿಹೆಚ್‌ ಕೋಚ್‌ಗಳು ಮತ್ತು 58,000 ವ್ಯಾಗನ್‌ಗಳ ನಿರ್ಮಾಣಕ್ಕೂ ಆದ್ಯತೆ ದೊರೆಯಲಿದೆ.

ಯಾವುದಕ್ಕೆ ಹೂಡಿಕೆ?; ಬಜೆಟ್‌ನಲ್ಲಿನ ಅನುದಾನ ಹಂಚಿಕೆ ನೋಡಿದ ಬಳಿಕ ಗತಿಶಕ್ತಿ ಬಹುಮಾದರಿ ಕಾರ್ಗೋ ಟರ್ಮಿನಲ್‌ಗಳ ನಿರ್ಮಾಣ, ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು ಯೋಜನೆಗಳಿಗೆ ಹೆಚ್ಚಿನ ಹೂಡಿಕೆ ನಿರೀಕ್ಷೆ ಮಾಡಲಾಗಿದೆ.

ಮಂಗಳವಾರ ಲೋಕಸಭೆಯಲ್ಲಿ ಮಂಡಿಸಲಾದ 2023ರ ಆರ್ಥಿಕ ಸಮೀಕ್ಷೆಯಲ್ಲಿಯೂ ವಂದೇ ಭಾರತ್ ಮಾದರಿ ರೈಲುಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿತ್ತು. ಇದು ದೇಶದ ಭವಿಷ್ಯದ ಸಂಚಾರದ ದೃಷ್ಟಿಯಿಂದ ಅಗತ್ಯವಾಗಿದೆ ಎಂದು ಉಲ್ಲೇಖಿಸಿತ್ತು.

ಆತ್ಮ ನಿರ್ಭರ್ ಭಾರತ್ ಯೋಜನೆಯಡಿ ಚೆನ್ನೈನ ಕೋಚ್‌ ಫ್ಯಾಕ್ಟರಿಯಲ್ಲಿ ವಂದೇ ಭಾರತ್ ರೈಲುಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಗಂಟೆಗೆ 160 ಕಿ. ಮೀ. ವೇಗದಲ್ಲಿ ಚಲಿಸುವಂತೆ ರೈಲನ್ನು ವಿನ್ಯಾಸಗೊಳಿಸಲಾಗಿದೆ.

English summary
Budget 2023 for Railways: In a Budget 2023-24 Nirmala Sitharaman announced record allocation for Indian Railways. Rs 2.4 trillion announced major boost in coming days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X