ಚುನಾವಣೆಗೂ ಮುನ್ನವೇ ಶಸ್ತ್ರತ್ಯಾಗ, ರಾಹುಲ್ ಆಪ್ತನ ರಾಜೀನಾಮೆ

By: ಅನುಷಾ ರವಿ
Subscribe to Oneindia Kannada

ನವದೆಹಲಿ, ಆಗಸ್ಟ್ 18: ಗುಜರಾತ್ ಹಾಗೂ ಕರ್ನಾಟಕ ವಿಧಾನಸಭೆ ಚುನಾವಣೆಗೆ ತಯಾರಿ ನಡೆಸಿರುವ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಹೊಡೆತ ಬಿದ್ದಿದೆ. ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಆಪ್ತವಲಯದ ಪ್ರಮುಖ ವ್ಯಕ್ತಿ, ಚುನಾವಣೆಗೂ ಮುನ್ನವೇ ಶಸ್ತ್ರತ್ಯಾಗ ಮಾಡಿ ರಣಭೂಮಿಯಿಂದ ಹಿಂದಕ್ಕೆ ಸರಿದಿದ್ದಾರೆ.

ಯುದ್ಧಕಾಲದಲ್ಲಿ ತಂತ್ರ ಹೆಣೆಯಲು ನೆರವಾಗುತ್ತಿದ್ದ ಆಶೀಶ್ ಕುಲಕರ್ಣಿ ಅವರು ರಾಜೀನಾಮೆ ನೀಡಿ ಹೊರನಡೆದಿದ್ದಾರೆ. ಅಷ್ಟೇ ಅಲ್ಲ, ತಮ್ಮ ರಾಜೀನಾಮೆ ಪತ್ರದಲ್ಲಿ ಕಾಂಗ್ರೆಸ್ಸಿನ ಇಬ್ಬಗೆ ನೀತಿಯ ಬಗ್ಗೆ ಕಟು ಶಬ್ದಗಳಿಂದ ಟೀಕಿಸಿದ್ದಾರೆ.

ಕಾಶ್ಮೀರ ಪ್ರತ್ಯೇಕತಾವಾದಿಗಳು, ಜೆಎನ್ ಯು ಪ್ರತಿಭಟನೆ, ಅಲ್ಪಸಂಖ್ಯಾತರ ಓಲೈಕೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಕಾಂಗ್ರೆಸ್ ತೆಗೆದುಕೊಂಡ ನಿಲುವಿನ ಬಗ್ಗೆ ಆಶೀಶ್ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Rahul's war room strategist Ashish Kulkarni resigns, cites disarray in Congress

2009ರಿಂದ ರಾಹುಲ್ ಅವರ ಆಪ್ತ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಶೀಶ್ ಅವರು ರಾಹುಲ್ ಅವರ ಕಷ್ಟಕಾಲದಲ್ಲೂ ಕೈ ಕೊಡದೆ ಜೊತೆಗಿದ್ದವರು. ಪಕ್ಷದ ಕಾರ್ಯಕರ್ತರಲ್ಲಿ ಮೂಡಿರುವ ಅನೇಕ ಪ್ರಶ್ನೆಗಳಿಗೆ ನಮ್ಮಲ್ಲಿ ಸರಿಯುತ್ತರಗಳಿಲ್ಲ. ಪಕ್ಷದ ಸಂಘಟನೆ, ಬಲವರ್ಧನೆಗೆ ಸೂಕ್ತ ವ್ಯವಸ್ಥೆಯಂತೂ ಇನ್ನೂ ಕಂಡುಕೊಂಡಿಲ್ಲ ಎಂದು ಆಶೀಶ್ ಹೇಳಿದ್ದಾರೆ.

ಮಹಾರಾಷ್ಟ್ರ, ಗೋವಾ, ಅಸ್ಸಾಂ, ಉತ್ತರಾಖಂಡ್, ಅರುಣಾಚಲ ಪ್ರದೇಶದ ನಂತರ ಹಿಮಾಚಲ ಹಾಗೂ ಗುಜರಾತಿನಲ್ಲೂ ಕಾಂಗ್ರೆಸ್ ತನ್ನ ಪ್ರಭುತ್ವ ಸ್ಥಾಪಿಸಲು ಹೆಣಗಾಡಲಿದೆ.

ತೃಣಮೂಲ ಕಾಂಗ್ರೆಸ್ ಹಾಗೂ ಕಮ್ಯೂನಿಸ್ಟ್ ಪಕ್ಷದಂತೆ ಹಿಂದೂ ವಿರೋಧಿ ಕ್ರಮಗಳನ್ನು ಕೈಗೊಂಡಿರುವುದು ಮಾರಕವಾಗಲಿದೆ ಎಂದು ಅಶೀಶ್ ಅಭಿಪ್ರಾಯ ಪಟ್ಟಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ashish Kulkarni, a key war room strategist for the Congress and Rahul Gandhi's aide has resigned from the party citing mismanagement.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ