Manipura: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿಯನ್ನು ಪ್ರಶಂಸಿಸಿದ ಬಿಜೆಪಿ ರಾಜ್ಯಾಧ್ಯಕ್ಷೆ
ಇಂಫಾಲ, ಜುಲೈ 01: ಹಿಂಸಾಪೀಡಿತ ಮಣಿಪುರಕ್ಕೆ ಎರಡು ದಿನಗಳ ಕಾಲ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಮಣಿಪುರ ಬಿಜೆಪಿ ಘಟಕದ ಅಧ್ಯಕ್ಷೆ ಶಾರದಾದೇವಿ, ಸದ್ಯದ ಪರಿಸ್ಥಿತಿಯಲ್ಲಿ ರಾಹುಲ್ ಗಾಂಧಿ ಅವರ ರಾಜ್ಯ ಭೇಟಿಯನ್ನು ನಾನು ಪ್ರಶಂಸಿಸುತ್ತೇನೆ ಎಂದು ಹೇಳಿದ್ದಾರೆ.
ಈ ವಿಚಾರವಾಗಿ ಸುದ್ದಿಸಂಸ್ಥೆ 'ಎಎನ್‌ಐ' ಜೊತೆ ಮಾತನಾಡಿರುವ ಅವರು, 'ಸದ್ಯದ ಪರಿಸ್ಥಿತಿಯಲ್ಲಿ ರಾಹುಲ್ ಗಾಂಧಿ ಅವರ ರಾಜ್ಯ ಭೇಟಿಯನ್ನು ನಾನು ಪ್ರಶಂಸಿಸುತ್ತೇನೆ. ಆದಾಗ್ಯೂ, ಪರಿಸ್ಥಿತಿಯನ್ನು ಪರಿಹರಿಸಲು ಮತ್ತು ಶಾಂತಿಯನ್ನು ಮರಳಿ ತರುವತ್ತ ನಾವು ಗಮನ ಹರಿಸಬೇಕು. ಈ ವಿಚಾರವನ್ನು ರಾಜಕೀಯಗೊಳಿಸಬಾರದು' ಹೇಳಿದ್ದಾರೆ.

'ಪರಿಸ್ಥಿತಿ ಸುಧಾರಿಸುತ್ತದೆ ಎಂಬ ನಂಬಿಕೆಯಿಂದ ಜನರು ಮುಖ್ಯಮಂತ್ರಿಯನ್ನು ಬೆಂಬಲಿಸಲು ಮುಂದಾಗಿದ್ದಾರೆ. ಈ ಬಾರಿ ಪರಿಸ್ಥಿತಿ ಹತೋಟಿಗೆ ಬರದಿದ್ದರೆ ಪರಿಸ್ಥಿತಿ ಕೈ ಮೀರುವ ಸಾಧ್ಯತೆ ಇದೆ ಎಂಬುದು ಜನರ ನಂಬಿಕೆ. ರಾಜ್ಯದಲ್ಲಿ ಸದ್ಯದ ಈ ರೀತಿಯ ವಾತವರಣ ನಿರ್ಮಾಣವಾಗಿದ್ದು, ಹಿಂದಿನ ಸರಕಾರದ ಕಾರ್ಯವೈಖರಿಯಿಂದ. ಸಿಎಂ ಬಿರೇನ್ ಸರ್ಕಾರದ ಮೇಲೆ ಸಾರ್ವಜನಿಕರಿಗೆ ಸಂಪೂರ್ಣ ನಂಬಿಕೆ ಇದೆ' ಎಂದು ಅವರು ತಿಳಿಸಿದ್ದಾರೆ.
ಸುಮಾರು ಎರಡು ತಿಂಗಳಿನಿಂದ ಜನಾಂಗೀಯ ಹಿಂಸಾಚಾರಕ್ಕೆ ತುತ್ತಾಗಿರುವ ಮಣಿಪುರಕ್ಕೆ ಎರಡು ದಿನಗಳ ಭೇಟಿಗಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೆರಳಿದ್ದರು. ಇದನ್ನು ಮುಕ್ತಾಯಗೊಳಿ ನಂತರ ಮಾತನಾಡಿದ ಅವರು, ಹಿಂಸಾಚಾರದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಮಣಿಪುರದ ಜನರನ್ನು ಶಾಂತಿಯತ್ತ ಸಾಗುವಂತೆ ಒತ್ತಾಯಿಸಿದರು.

ಶುಕ್ರವಾರ ಬೆಳಿಗ್ಗೆ, ಗಾಂಧಿಯವರು ಮೊಯಿರಾಂಗ್‌ಗೆ ಹೆಲಿಕಾಪ್ಟರ್ ಮೂಲಕ ಭೇಟಿ ನೀಡಿದರು ಮತ್ತು ಎರಡು ಪರಿಹಾರ ಶಿಬಿರಗಳಲ್ಲಿ ಜನರನ್ನು ಭೇಟಿ ಮಾಡಿದರು. ಮೈತೆ ಮತ್ತು ಕುಕಿ ಸಮುದಾಯದ ಜನರನ್ನು ಭೇಟಿ ಮಾಡಿದರು.
ರಾಹುಲ್ ಗಾಂಧಿ ಜೊತೆಗೆ ಮಣಿಪುರದ ಮಾಜಿ ಮುಖ್ಯಮಂತ್ರಿ ಒಕ್ರಾಮ್ ಇಬೋಬಿ ಸಿಂಗ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್, ಮಣಿಪುರ ಪಿಸಿಸಿ ಅಧ್ಯಕ್ಷ ಕೇಶಾಮ್ ಮೇಘಚಂದ್ರ ಸಿಂಗ್ ಮತ್ತು ಮಾಜಿ ಸಂಸದ ಅಜಯ್ ಕುಮಾರ್ ಇದ್ದರು.

ಹಿಂಸಾಚಾರದಿಂದ ಪ್ರೀತಿಪಾತ್ರರು ಮತ್ತು ಮನೆಗಳನ್ನು ಕಳೆದುಕೊಂಡವರ ದುಃಖವನ್ನು ನೋಡುವುದು ಮತ್ತು ಕೇಳುವುದು "ಹೃದಯ ವಿದ್ರಾವಕ" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
'ನಾನು ಭೇಟಿಯಾಗುವ ಪ್ರತಿಯೊಬ್ಬ ಸಹೋದರ, ಸಹೋದರಿ ಮತ್ತು ಮಗುವಿನ ಮುಖದಲ್ಲಿ ಸಹಾಯದ ಬಯಕೆ ಇದೆ. ಮಣಿಪುರಕ್ಕೆ ಈಗ ಅಗತ್ಯವಿರುವ ಪ್ರಮುಖ ವಿಷಯವೆಂದರೆ ಶಾಂತಿ. ನಮ್ಮ ಜನರ ಜೀವನ ಮತ್ತು ಜೀವನೋಪಾಯವನ್ನು ಸುರಕ್ಷಿತಗೊಳಿಸುವುದು. ಆ ಗುರಿಯತ್ತ ನಮ್ಮೆಲ್ಲರ ಪ್ರಯತ್ನಗಳು ಒಂದಾಗಬೇಕು' ಎಂದು ರಾಹುಲ್ ಹೇಳಿದ್ದಾರೆ.
ವರದಿಗಳ ಪ್ರಕಾರ, ರಾಹುಲ್ ಗಾಂಧಿಯವರು ಇಂಫಾಲ್‌ನಲ್ಲಿ ರಾಜಕೀಯ ಪಕ್ಷಗಳ ನಾಯಕರು ಮತ್ತು ನಾಗರಿಕ ಸಮಾಜದ ಸದಸ್ಯರನ್ನೂ ಭೇಟಿಯಾದರು.

ಗುರುವಾರ, ಮಾಜಿ ಕಾಂಗ್ರೆಸ್ ಮುಖ್ಯಸ್ಥರು ಚುರಚಂದಪುರಕ್ಕೆ ಹೋಗುತ್ತಿದ್ದಾಗ ಅವರ ಬೆಂಗಾವಲು ವಾಹನವನ್ನು ನಿಲ್ಲಿಸಲಾಯಿತು. ಅವರು ಅಂತಿಮವಾಗಿ ಚಾಪರ್‌ನಲ್ಲಿ ಅಲ್ಲಿಗೆ ಹಾರಿದರು.
ಮೇ ತಿಂಗಳ ಆರಂಭದಲ್ಲಿ ಈಶಾನ್ಯ ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಪ್ರಾರಂಭವಾಯಿತು. ಬಹುಸಂಖ್ಯಾತ ಮೈತೆ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನವನ್ನು ನೀಡಬೇಕು ಎಂಬ ಹೈಕೋರ್ಟ್ ಶಿಫಾರಸಿನ ಮೇಲೆ ಗಲಭೆಗಳು ಶುರುವಾದವು. ಘರ್ಷಣೆಗಳು ಸುಮಾರು 200 ಜನರ ಸಾವಿಗೆ ಕಾರಣವಾಗಿವೆ. 60,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.












Click it and Unblock the Notifications