ಒಂದೇ ಸ್ಲಾಬಿನ ಜಿಎಸ್ಟಿ ಎಂಬ ರಾಹುಲ್ ಸಲಹೆಗೆ ಜೇಟ್ಲಿ ಪ್ರತ್ಯುತ್ತರ
Recommended Video

ನವದೆಹಲಿ, ಜುಲೈ 02: ಒಂದೇ ಸ್ಲಾಬಿನ ಜೆಸ್ಟಿಯನ್ನು ಜಾರಿಗೆ ತರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಲಹೆ ದೋಷಪೂರಿತ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಜಿಎಸ್ ಟಿ(ಸರಕು ಮತ್ತು ಸೇವಾ ತೆರಿಗೆ) ಪದ್ಧತಿ ಆರಂಭವಾಗಿ ಜುಲೈ 1 ಕ್ಕೆ ಒಂದು ವರ್ಷ ಸಂದಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಒಂದೇ ಸ್ಲಾಬಿನ ಜಿಎಸ್ಟಿಯನ್ನು ಜಾರಿಗೆ ತರಬೇಕು ಎಂದಿದ್ದರು.
ಈಗಾಗಲೇ ಜಿಎಸ್ಟಿಯ ನಾಲ್ಕು ಸ್ಲಾಬುಗಳಿದ್ದು, ಶೇ.5 ರಿಂದ ಶೇ.28 ಪ್ರತಿಶತದವರೆಗೆ ಸರಕಿನ ಮೇಲೆ ತೆರಿಗೆ ಹಾಕಲಾಗುತ್ತದೆ. ಇದರ ಬದಲು ಎಲ್ಲಾ ಸರಕಿಗೂ ಒಂದೇ ರೀತಿಯ ತೆರಿಗೆಯನ್ನು ವಿಧಿಸಬೇಕೆಂಬುದು ರಾಹುಲ್ ಗಾಂಧಿ ವಿಚಾರ. ಆದರೆ ಇದು ಸರಿಯಾದ ಪದ್ಧತಿಯಲ್ಲ ಎಂದು ಜೇಟ್ಲಿ ಹೇಳಿದ್ದಾರೆ.

ಇಡೀ ದೇಶದಲ್ಲೂ ಒಂದೇ ರೀತಿಯ ಆದಾಯ ಗಳಿಕೆಯಾಗುತ್ತಿದ್ದರೆ, ಜನಸಂಖ್ಯೆಯೂ ಕಡಿಮೆ ಇದ್ದರೆ ಆಗ ಈ ಪದ್ಧತಿಯನ್ನು ಸ್ವೀಕರಿಸಬಹುದು. ಸಿಂಗಪುರದಂಥ ರಾಷ್ಟ್ರಗಳಿಗಾದರೆ ಇದು ಸರಿ. ಆದರೆ ಅತಿಯಾದ ಜನಸಂಖ್ಯೆಯಿರುವ ಮತ್ತು ವಿವಿದ ಸ್ಥರದ ಆದಾಯವನ್ನು ಹೊಂದಿರುವ ಭಾರತದಲ್ಲಿ ಅದು ಕಷ್ಟ ಎಂದು ಅವರು ಹೇಳಿದ್ದಾರೆ.
ಯುಪಿಎ ಸರ್ಕಾರದ ಆಡಳಿತಾವಧಿಯಲ್ಲೇ ಜಿಎಸ್ಟಿಯನ್ನು ಜಾರಿಗೆ ತರಲು ಚಿಂತಿಸಲಾಗಿತ್ತು. ಆದರೆ ಜಿಎಸ್ಟಿ ಕುರಿತು ಯುಪಿಎ ಸರ್ಕಾರದ ಪರಿಕಲ್ಪನೆಗಳನ್ನು ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳೇ ಒಪ್ಪಿರಲಿಲ್ಲ. ಆದ್ದರಿಂದಲೇ ಆ ಜಿಎಸ್ಟಿಯನ್ನು ಜಾರಿಗೆ ತರಲು ಸಾಧ್ಯವಾಗಿರಲಿಲ್ಲ ಎಂದು ಅವರು ಯುಪಿಎ ಸರ್ಕಾರದ ವೈಫಲ್ಯವನ್ನು ತಿಳಿಸಿದರು.











Click it and Unblock the Notifications