Get Updates
Get notified of breaking news, exclusive insights, and must-see stories!

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಬಗ್ಗೆ ರಾಹುಲ್ ಗಾಂಧಿ ಆರೋಪಗಳು ಸುಳ್ಳು: ಸತ್ಯಾಂಶ ಇಲ್ಲಿದೆ!

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು 11 ವರ್ಷವನ್ನು ಪೂರೈಸುತ್ತಿದೆ. ಭಾರತದ ಇತಿಹಾಸದಲ್ಲೇ ಪಕ್ಷವೊಂದು ಈ ರೀತಿ ಮೂರು ಬಾರಿ ಆಯ್ಕೆಯಾಗಿರುವುದು ಹಾಗೂ ವಿಶೇಷ ಯೋಜನೆಗಳನ್ನು ರೂಪಿಸಿರುವುದು ಇದೇ ಮೊದಲು. ಅದರಲ್ಲೂ ನೆರೆಯ ದೇಶಗಳ ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದು ಸಹ ಇದೇ ಮೊದಲು. ಆದರೆ ಮೋದಿ ಸರ್ಕಾರವು 11 ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ವಾಗ್ದಾಳಿ ತೀವ್ರಗೊಳಿಸಿದ್ದಾರೆ. ಕೇಂದ್ರ ಎನ್‌ಡಿಎ ಸರ್ಕಾರವು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದೆ ಮತ್ತು ಪ್ರಚಾರದ ಮೇಲೆ ಮಾತ್ರ ಗಮನಹರಿಸುತ್ತಿದೆ ಎನ್ನುವ ಗಂಭೀರ ಆರೋಪವನ್ನು ರಾಹುಲ್ ಗಾಂಧಿ ಅವರು ಮಾಡಿದ್ದಾರೆ. ಇನ್ನು ಇತ್ತೀಚೆಗಷ್ಟೇ ರಾಹುಲ್ ಗಾಂಧಿ ಅವರು ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್ ಆಗಿದೆ ಎನ್ನುವ ಆರೋಪ ಮಾಡಿದ್ದರು. ಇದು ಭಾರತೀಯ ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಹಾಗೂ ಚುನಾವಣಾ ಪ್ರಕ್ರಿಯೆಯ ನ್ಯಾಯಸಮ್ಮತತೆಯ ಬಗ್ಗೆ ಜನ ಸಾಮಾನ್ಯರಲ್ಲಿ ಅನುಮಾನಗಳನ್ನು ಹುಟ್ಟುಹಾಕುವಂತೆ ಇದೆ.

ಆದರೆ, ಅವರ ಹೇಳಿಕೆಗಳಲ್ಲಿ ಸತ್ಯವಿದೆಯೇ ಎಂದು ಪರಿಶೀಲನೆ ಮಾಡಿದರೆ ಅದರಲ್ಲಿ ಸಾಕ್ಷಿಗಳಿಗಿಂತ ಹೆಚ್ಚಾಗಿ ರಾಜಕೀಯ ಹತಾಶೆಯೇ ಹೆಚ್ಚಾಗಿರುವುದು ಎದ್ದು ಕಾಣಿಸುತ್ತಿದೆ. ರಾಹುಲ್ ಗಾಂಧಿಯ ಅವರ ಆರೋಪಗಳೇನು ಹಾಗೂ ವಾಸ್ತವವೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

Rahul Gandhi s allegations regarding Maharashtra Assembly elections are false Here is truth

1. ಆರೋಪ: ಕೇಂದ್ರ ಸರ್ಕಾರವು ಚುನಾವಣಾ ಆಯೋಗದ ನೇಮಕಾತಿಯಲ್ಲಿ ಲೋಪವೆಸಗಿದೆ
ರಾಹುಲ್ ಗಾಂಧಿಯ ಆರೋಪ: ಭಾರತದ ಮುಖ್ಯ ನ್ಯಾಯಾಧೀಶರನ್ನು ಚುನಾವಣಾ ಆಯುಕ್ತರ ನೇಮಕಾತಿ ಸಮಿತಿಯಿಂದ ಉದ್ದೇಶಪೂರ್ವಕವಾಗಿ ತೆಗೆದುಹಾಕಲಾಗಿದೆ ಎಂದು ರಾಹುಲ್ ಗಾಂಧಿ ಅವರು ಆರೋಪಿಸಿದ್ದಾರೆ. ಇದು ಚುನಾವಣಾ ಆಯೋಗದಲ್ಲಿ ಬಿಜೆಪಿ ಹೇಳುವಂತೆ ಕೇಳುವವರನ್ನು ನೇಮಿಸುವ ಉದ್ದೇಶದಿಂದ ಹಾಗೂ ಪಕ್ಷಪಾತಿ ನಿರ್ಧಾರ ಎಂದು ಅವರು ದೂರಿದ್ದಾರೆ.

ಸತ್ಯಾಂಶ: 2023ರಲ್ಲಿ ಅಂಗೀಕರಿಸಲಾದ ಹೊಸ ಕಾನೂನಿನ ಅಡಿಯಲ್ಲಿ ನೇಮಕಾತಿ ಸಮಿತಿಯಲ್ಲಿ ಪ್ರಧಾನಿ, ಗೃಹ ಸಚಿವರು ಹಾಗೂ ವಿರೋಧ ಪಕ್ಷದ ನಾಯಕರು ಇರಲಿದ್ದಾರೆ. ವಿರೋಧ ಪಕ್ಷದ ನಾಯಕರ ಸೇರ್ಪಡೆಯು ದ್ವಿಪಕ್ಷೀಯ ಪ್ರಾತಿನಿಧ್ಯವನ್ನು ಖಚಿತಪಡಿಸುತ್ತದೆ. ಮುಖ್ಯ ನ್ಯಾಯಾಧೀಶರ ಬದಲಿಗೆ ಕ್ಯಾಬಿನೆಟ್ ಮಂತ್ರಿ ಅವರನ್ನು ಸಮಿತಿಯಲ್ಲಿ ಸೇರಿಸುವುದು ಪಾರದರ್ಶಕತೆಯನ್ನು ಹಾಳುಮಾಡುವುದಿಲ್ಲ. ವಾಸ್ತವವಾಗಿ ಇದು ಚುನಾಯಿತ ಪ್ರತಿನಿಧಿಗಳು ಆಯೋಗದ ಅಧಿಕಾರಿಗಳನ್ನು ನೇಮಿಸುವ ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿದೆ.

ಅಲ್ಲದೇ ಇದರಲ್ಲಿ ರಾಜಕೀಯ ಪ್ರಭಾವವು ಕಳವಳಕಾರಿಯಾಗಿದ್ದರೆ ಇದಕ್ಕೂ ಮೊದಲು 26 ಚುನಾವಣಾ ಆಯುಕ್ತರಲ್ಲಿ 25 ಜನರನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರಗಳ ಅವಧಿಯಲ್ಲಿಯೇ ನೇಮಿಸಲಾಗಿದೆ ಎನ್ನುವುದನ್ನು ದಾಖಲೆಗಳು ಖಚಿತಪಡಿಸುತ್ತವೆ. ಕಾಂಗ್ರೆಸ್ ಆರೋಪ ಮಾಡುವಂತಾದರೆ,
ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ನಡೆದ ಚುನಾವಣೆಗಳಲ್ಲೂ ಸಹ ಅಕ್ರಮಗಳು ನಡೆದಿವೆ ಎಂದು ಅರ್ಥವೇ ?

2. ಆರೋಪ: ಮಹಾರಾಷ್ಟ್ರದಲ್ಲಿ ಮತದಾರರ ಸಂಖ್ಯೆ ಹೆಚ್ಚಳದ ಹಿಂದೆ ಮೋಸ
ರಾಹುಲ್ ಗಾಂಧಿ ಆರೋಪ: ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯಲ್ಲಿ 4.1 ಮಿಲಿಯನ್ ಹೊಸ ಮತದಾರರು ಮತದಾರರ ಪಟ್ಟಿಯಲ್ಲಿ ಏಕಾಏಕಿ ಸೇರ್ಪಡೆಯಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಇದು ಮೋಸ ಹಾಗೂ ನಕಲಿ ಮತದಾರರ ಹೆಸರು ಸೇರ್ಪಡೆ ಎನ್ನುವುದು ಸ್ಪಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.

ಸತ್ಯಾಂಶ: ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯಲ್ಲಿ 4.1 ಮಿಲಿಯನ್ ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ. ಸುಮಾರು 2.6 ಮಿಲಿಯನ್ ಮತದಾರರು ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಇವರೆಲ್ಲರೂ ಮತದಾನ ಮಾಡುವುದಕ್ಕೆ ಅಗತ್ಯವಿರುವ 18+ ಯುವ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇದು ಸಹಜ ಹಾಗೂ ಸ್ವಾಭಾವಿಕ ಹೆಚ್ಚಳವಾಗಿದೆ. ಇನ್ನು ಈ ರೀತಿ ನೋಡಿದರೆ ಇದಕ್ಕೂ ಹಿಂದಿನ ವರ್ಷಗಳಲ್ಲಿ ಮತದಾರರ ಸಂಖ್ಯೆಯು ಇನ್ನೂ ಹೆಚ್ಚಾಗಿತ್ತು. ವರ್ಷವಾರು ವಿವರ ಇಲ್ಲಿದೆ.

2004-09: 10 ಮಿಲಿಯನ್

2009-14: 7.5 ಮಿಲಿಯನ್

2014-19: 6.3 ಮಿಲಿಯನ್

ಈ ಸಂಖ್ಯೆಗಳಿಗೆ ಹೋಲಿಕೆ ಮಾಡಿ ನೋಡಿದರೆ, 2024ರಲ್ಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಸೇರ್ಪಡೆಯಾಗಿರುವ ಹೊಸ ಮತದಾರರ ಸಂಖ್ಯೆಯು ಸಾಧಾರಣವಾಗಿದೆ. ಅಲ್ಲದೇ ಜನಸಂಖ್ಯೆ ಬೆಳವಣಿಗೆ ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡುವುದಕ್ಕೆ ಕಠಿಣ ನಿಯಮಗಳನ್ನು ಅನುಸರಿಸಲಾಗಿದೆ ಎನ್ನುವುದನ್ನು ಖಚಿತಪಡಿಸುತ್ತದೆ. ಹೊಸ ಮತದಾರರ ಸೇರ್ಪಡೆಯಲ್ಲಿ ಯಾವುದೇ ಮೋಸವಾಗಿಲ್ಲ ಎನ್ನುವುದು ಈ ಮೂಲಕ ಸ್ಪಷ್ಟವಾಗುತ್ತದೆ.

3. ಆರೋಪ: ಸಂಜೆ 5 ಗಂಟೆಯ ನಂತರ ನಡೆದ ಮತದಾನದಲ್ಲಿ ಅನುಮಾನಾಸ್ಪದ ಹೆಚ್ಚಳ
ರಾಹುಲ್ ಗಾಂಧಿ ಅವರ ಆರೋಪ: ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯಲ್ಲಿ ಸಂಜೆ 5 ಗಂಟೆಯ ನಂತರ ನಡೆದ ಮತದಾನದಲ್ಲಿ ಶೇ 7.8% ರಷ್ಟು ಹೆಚ್ಚಳವಾಗಿದೆ ಎಂದು ಅವರು ದೂರಿದ್ದಾರೆ. ಅಲ್ಲದೇ ಮತದಾನ ಮುಕ್ತಾಯವಾಗುವ ಸಮಯದಲ್ಲಿ ಮತದಾನ ಮಾಡುವವರ ಪ್ರಮಾಣ ಹೆಚ್ಚಳವಾಗಿರುವುದು ಅನುಮಾನ ಮೂಡಿಸುತ್ತದೆ ಎಂದು ಅವರು ಹೇಳಿದ್ದಾರೆ.

ಸತ್ಯಾಂಶ: ಚುನಾವಣಾ ಆಯೋಗದ ನಿಯಮಾನುಸಾರ ಸಂಜೆ 5 ಗಂಟೆಯ ಒಳಗೆ ಮತದಾನ ಮಾಡುವುದಕ್ಕೆ ಸರತಿ ಸಾಲಿನಲ್ಲಿ ನಿಂತಿರುವ ಎಲ್ಲಾ ಮತದಾರರು ತಮ್ಮ ಮತ ಚಲಾಯಿಸಲು ಸ್ಪಷ್ಟವಾದ ಅವಕಾಶವನ್ನು ನೀಡಲಾಗುತ್ತದೆ. ಪ್ರಮಾಣಿತ ಪ್ರೋಟೋಕಾಲ್ ಪ್ರಕಾರ, ಮತದಾನ ಮುಗಿದ ನಂತರ ಅಂತಿಮ ಮತದಾನದ ಅಂಕಿ ಅಂಶಗಳನ್ನು ಬಿಡುಗಡೆ ಮಾಡಲಾಗುತ್ತದೆ. ಸಂಜೆ 5 ರ ನಂತರದ ಏರಿಕೆ ಅನಿಯಮಿತವಲ್ಲ - ಇದು ಮತದಾನದ ಹಾಗೂ ಚುನಾವಣೆ ಪ್ರಕ್ರಿಯೆ ಭಾಗವಾಗಿದೆ. ಇದರಲ್ಲಿ ಯಾವುದೇ ತಿರುಚುವಿಕೆಯು ಇಲ್ಲ.

4. ಆರೋಪ: ಬಿಜೆಪಿ ಪರವಾಗಿ ಫಲಿತಾಂಶ ರೂಪಿಸಲು 12,000 ಬೂತ್‌ಗಳನ್ನು ತಿರುಚಲಾಗಿದೆ
ರಾಹುಲ್ ಗಾಂಧಿ ಹೇಳಿಕೆ: ಮಹಾರಾಷ್ಟ್ರದ ಕಾಮ್ಥಿ ಕ್ಷೇತ್ರವನ್ನು ಉದಾಹರಣೆಯಾಗಿ ಉಲ್ಲೇಖಿಸಿ ಬಿಜೆಪಿ ಪರವಾಗಿ 12,000 ಬೂತ್‌ಗಳಲ್ಲಿ ಮತಗಳ ಕಳ್ಳತನ ನಡೆದಿದೆ. ಈ ಬೂತ್‌ಗಳಲ್ಲಿ ಮತದಾನವನ್ನು ತಿರುಚಲಾಗಿದೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಗಂಭೀರ ಆರೋಪವನ್ನು ಮಾಡಿದ್ದಾರೆ.

ಸತ್ಯಾಂಶ: ಇಲ್ಲಿನ ವಿಧಾನಸಭಾ ಕ್ಷೇತ್ರ ಕಾಮ್ಥಿಯಲ್ಲಿ ಬಿಜೆಪಿ ನಾಯಕ ಚಂದ್ರಶೇಖರ್ ಬವಾಂಕುಲೆ ಅವರು ಗೆದ್ದಿದ್ದಾರೆ. ಹಿಂದಿನ ಮೂರು ವಿಧಾನಸಭೆ ಚುನಾವಣೆಗಳಲ್ಲೂ ಅವರೇ ಗೆದ್ದಿದ್ದರು. ಇದನ್ನು ನೋಡಿದರೆ ಏಕಾಏಕಿ ಬದಲಾವಣೆ ಅಥವಾ ತಿರುಚಲಾಗಿದೆ ಎನ್ನುವುದು ಸುಳ್ಳು ಅಂತ ತಿಳಿಯುತ್ತದೆ.
ಹೆಚ್ಚಿದ ಮಹಿಳಾ ಮತದಾರರ ಮತದಾನ (6% ರಷ್ಟು) - ಲಡ್ಕಿ ಬಹಿನ್ ಯೋಜನೆಯಂತಹ ಯೋಜನೆಗಳಿಗೆ ಸಂಬಂಧಿಸಿದೆ ಮಹಾಯುತಿ ಮೈತ್ರಿ ಸರ್ಕಾರದ ನಿರ್ವಹಣೆ ಇಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ.

ಇದರೊಂದಿಗೆ ಹಲವು ಹೆಚ್ಚಿನ ವಿಧಾನಸಭಾ ಕ್ಷೇತ್ರಗಳಲ್ಲಿ ವಿರೋಧ ಪಕ್ಷದ ನಾಯಕರು ಗೆದ್ದಿರುವ ಉದಾಹರಣೆ ಇದೆ

ಮಾಧಾ - ಎನ್‌ಸಿಪಿ (ಎಸ್‌ಪಿ)

ವಾನಿ - ಶಿವಸೇನೆ (ಯುಬಿಟಿ)

ಶ್ರೀರಾಂಪುರ - ಕಾಂಗ್ರೆಸ್

ಇದನ್ನು ನೋಡಿದರೆ ಮತದಾನ ಹೆಚ್ಚಳದಿಂದ ಕೇವಲ ಬಿಜೆಪಿಗೆ ಲಾಭವಾಗಿದೆ ಅಥವಾ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ ಎನ್ನುವ ಆರೋಪ ಸುಳ್ಳು ಎನ್ನುವುದು ಸಾಬೀತುಪಡಿಸುತ್ತದೆ.

5. ಆರೋಪ: ಚುನಾವಣಾ ಆಯೋಗವು ಮತದಾರರ ಪಟ್ಟಿ ಮತ್ತು ಸಿಸಿಟಿವಿ ದೃಶ್ಯಗಳನ್ನು ತಡೆಹಿಡಿದಿದೆ
ರಾಹುಲ್ ಗಾಂಧಿ ಆರೋಪ: ಭಾರತೀಯ ಚುನಾವಣಾ ಆಯೋಗವು ಅಭ್ಯರ್ಥಿಗಳಿಗೆ ಮತದಾರರ ಪಟ್ಟಿ ಫೋಟೋ ಮತ್ತು ಸಿಸಿಟಿವಿ ಡೇಟಾವನ್ನು ನೀಡಲು ನಿರಾಕರಿಸಿದೆ ಎಂದು ಅವರು ಹೇಳಿದ್ದಾರೆ. ಚುನಾವಣಾ ಆಯೋಗದ ನಿಷ್ಪಕ್ಷಪಾತತೆಯನ್ನು ಪ್ರಶ್ನಿಸಿದ್ದಾರೆ.

ಸತ್ಯಾಂಶ: ಅಭ್ಯರ್ಥಿಗಳು ಮತ್ತು ಅವರ ಪ್ರತಿನಿಧಿಗಳು ಸಿಸಿಟಿವಿ ದೃಶ್ಯಗಳು ಸೇರಿದಂತೆ ಮತದಾರರ ಪಟ್ಟಿ ಮತ್ತು ಮತದಾನದ ದಾಖಲೆಗಳನ್ನು ಪರಿಶೀಲನೆ ಮಾಡುವುದಕ್ಕೆ ಕಾನೂನುಬದ್ಧವಾಗಿ ಅರ್ಹರಾಗಿದ್ದಾರೆ. ಆದಾಗ್ಯೂ ಗೌಪ್ಯತೆ ಕಾಪಾಡಿಕೊಳ್ಳುವ ಉದ್ದೇಶದಿಂದ ಫೋಟೋ-ಲಗತ್ತಿಸಲಾದ ಮತದಾರರ ಪಟ್ಟಿಯನ್ನು ಸಾಮಾನ್ಯವಾಗಿ ಬಹಿರಂಗಪಡಿಸುವುದಿಲ್ಲ. ಯಾವುದೇ ವೈಯಕ್ತಿಕ ಡೇಟಾ ರಕ್ಷಣೆ ಮಾಡುವುದು ಹಾಗೂ ದುರ್ಬಳಕೆಯನ್ನು ತಪ್ಪಿಸುವ ಉದ್ದೇಶದಿಂದ ಈ ನೀತಿಯನ್ನು ಡಿಸೆಂಬರ್ 2024 ರಲ್ಲಿ ಪುನಃ ದೃಢೀಕರಿಸಲಾಗಿದೆ.

ಸಾರಾಂಶ: ಇನ್ನು ರಾಹುಲ್ ಗಾಂಧಿ ಅವರ ಆರೋಪಗಳನ್ನು ಪರಿಶೀಲಿಸುವುದಕ್ಕೆ ಪೂರಕವಾದ ಡೇಟಾ ಇಲ್ಲ. ಮತದಾರರ ನೋಂದಣಿ, ಮತದಾನ ಮತ್ತು ಬೂತ್ ಮಟ್ಟದ ಫಲಿತಾಂಶಗಳ ಸುತ್ತಲಿನ ಅಂಕಿ -ಅಂಶಗಳು ಕಾರ್ಯವಿಧಾನದ ಸಹಜವಾಗಿಯೇ ಇದೆ. ದೃಢ ಹಾಗೂ ನಿಖರ ಸಾಕ್ಷ್ಯಾಧಾರಗಳು ಇಲ್ಲದೆ ಚುನಾವಣಾ ಆಯೋಗ ಮತ್ತು ಸಂಪೂರ್ಣ ಚುನಾವಣಾ ಪ್ರಕ್ರಿಯೆಯನ್ನು ಆರೋಪಿಸುವುದು ಸಾರ್ವಜನಿಕ ನಂಬಿಕೆಯನ್ನು ಕಳೆದುಕೊಳ್ಳುವುದಲ್ಲದೆ ಅಪಾಯಕಾರಿ ಬೆಳವಣಿಗೆ ಸಹ ಆಗಿದೆ. ಚುನಾವಣೆಯಲ್ಲಿ ಸೋಲುವುದು ಹಾಗೂ ಗೆಲ್ಲುವುದು ಪ್ರಜಾಪ್ರಭುತ್ವದ ಭಾಗವಾಗಿದೆ. ಅದನ್ನು ಸಮರ್ಥಿಸಲು ಅಲ್ಲ.

ಇನ್ನು ಪ್ರಶ್ನಿಸಲ್ಪಡುತ್ತಿರುವುದು ಕೇವಲ ಸಂಸ್ಥೆಗಳನ್ನಲ್ಲ - ಮತದಾರರ ತೀರ್ಪಿನ ಮೇಲೂ ಅಗೌರವ ತೋರಲಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+