ಉತ್ತರಾಖಂಡಕ್ಕೆ 3 ದಿನಗಳ ಆಧ್ಯಾತ್ಮಿಕ ಪ್ರವಾಸ ಕೈಗೊಂಡ ರಾಹುಲ್ ಗಾಂಧಿ

ನವದೆಹಲಿ, ನವೆಂಬರ್‌ 6: ಐದು ರಾಜ್ಯಗಳ ಚುನಾವಣೆ ಬೆಂಬಿಡದ ಕೆಲಸಗಳ ನಡುವೆ ಉತ್ತರಖಂಡಕ್ಕೆ 3 ದಿನಗಳ ಆಧ್ಯಾತ್ಮಿಕ ಪ್ರವಾಸವನ್ನು ರಾಹುಲ್‌ ಗಾಂಧಿ ಕೈಗೊಂಡಿದ್ದಾರೆ.

ಕೇದಾರನಾಥ ದೇಗುಲಕ್ಕೆ ಭೇಟಿ ನೀಡಿದ ಮೊದಲ ದಿನದಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇದಾರನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ನಂತರ ಅಲ್ಲಿದ್ದ ಅರ್ಚಕರು ಮತ್ತು ಯಾತ್ರಿಕರೊಂದಿಗೆ ಸಂವಾದ ನಡೆಸಿದರು. ಪ್ರವಾಸದ ಎರಡನೇ ದಿನವಾದ ಸೋಮವಾರ, ಅವರು ಕೇದಾರಪುರಿಯಲ್ಲಿರುವ ಭೈರವನಾಥ ಮತ್ತು ಶಂಕರಾಚಾರ್ಯ ದೇವಸ್ಥಾನದ ದರ್ಶನ ಮಾಡಿದರು.

Rahul Gandhi took a 3-day spiritual tour to Uttarakhand

ಭಾನುವಾರ ಮಧ್ಯಾಹ್ನ ಕೇದಾರಪುರಿ ತಲುಪಿದ ರಾಹುಲ್ ಮೂರು ದಿನಗಳ ಕೇದಾರನಾಥ ಪ್ರವಾಸದಲ್ಲಿದ್ದಾರೆ. ಉತ್ತರಾಖಂಡದ ಕಾಂಗ್ರೆಸ್ ಪಕ್ಷದ ಘಟಕವು ಅವರ ಭೇಟಿಯನ್ನು ಸಂಪೂರ್ಣವಾಗಿ ಆಧ್ಯಾತ್ಮಿಕ. ಅವರ ಭೇಟಿಯು ಸಂಪೂರ್ಣವಾಗಿ ಖಾಸಗಿಯಾಗಿದೆ ಎಂದು ತಿಳಿಸಿದೆ.

ರಾಹುಲ್‌ ಗಾಂಧಿ ಅವರ ಈ ಪ್ರವಾಸವು ಆಧ್ಯಾತ್ಮಿಕ ಮತ್ತು ಧಾರ್ಮಿಕ ಉದ್ದೇಶದಿಂದ ಮಾಡಲಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಪುನಶ್ಚೇತನಕ್ಕೆ ತಮ್ಮ ಕೇದಾರನಾಥ ಭೇಟಿ ಉತ್ತಮ ಸಂಕೇತವಾಗಿದೆ ಎಂದು ಉತ್ತರಾಖಂಡ ಕಾಂಗ್ರೆಸ್ ಪಕ್ಷದ ವಕ್ತಾರ ಮಥುರಾ ದತ್ತಾ ಜೋಶಿ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ ಮತ್ತು ಛತ್ತೀಸ್‌ಗಢದಲ್ಲಿ ವಿಧಾನಸಭಾ ಚುನಾವಣೆಗಳು ರಂಗೇರುತ್ತಿರುವ ಸಂದರ್ಭದಲ್ಲಿ ರಾಹುಲ್ ಕೇದಾರನಾಥಕ್ಕೆ ಭೇಟಿ ನೀಡಿದ್ದಾರೆ. ಕೇದಾರನಾಥದಲ್ಲಿರುವ ಗರ್ವಾಲ್ ಮಂಡಲ್ ವಿಕಾಸ್ ನಿಗಮದ ಅತಿಥಿ ಗೃಹದಲ್ಲಿ ರಾಹುಲ್ ತಂಗಿದ್ದಾರೆ.

Rahul Gandhi took a 3-day spiritual tour to Uttarakhand

ರಾಹುಲ್ ಗಾಂಧಿ ಅವರು ಕೇದಾರಪುರಿಯಲ್ಲಿ ತಂಗಿರುವ ಸಂದರ್ಭದಲ್ಲಿ ತಮ್ಮ ಪಕ್ಷದ ಪದಾಧಿಕಾರಿಗಳನ್ನು ಅಥವಾ ಪಕ್ಷದ ಕಾರ್ಯಕರ್ತರನ್ನು ಭೇಟಿಯಾಗುವುದಿಲ್ಲ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ಸ್ಪಷ್ಟಪಡಿಸಿವೆ. ರಾಹುಲ್ ಗಾಂಧಿ ಇಂದು ತೀರ್ಥ ಪುರೋಹಿತರು (ಕೇದಾರನಾಥ ಪುರೋಹಿತರು) ಮತ್ತು ಕೇದಾರ ಸಭಾದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ ಎಂದು ಕೇದಾರನಾಥದ ಅರ್ಚಕ ಪಂಕಜ್ ಶುಕ್ಲಾ ಹೇಳಿದ್ದಾರೆ.

ಸ್ಥಳೀಯರೊಂದಿಗಿನ ರಾಹುಲ್‌ ಗಾಂಧಿ ಸಂಭಾಷಣೆಗೆ ಸಂಬಂಧಿಸಿದಂತೆ ಪಂಕಜ್ ಅವರು ಬದರಿನಾಥ್‌ನ ಮಾಸ್ಟರ್‌ಪ್ಲಾನ್ ಬಗ್ಗೆ ವಿಚಾರಿಸಿದ್ದಾರೆ. 2013 ರ ನಂತರ ಕೇದಾರನಾಥದಲ್ಲಿ ಯಾವ ರೀತಿಯ ಬದಲಾವಣೆಗಳು ಬಂದವು ಎಂದು ಕೇಳಿದರು. ರಾಹುಲ್ ಕೇದಾರನಾಥದಲ್ಲಿ ಹೆಚ್ಚುತ್ತಿರುವ ಯಾತ್ರಿಕರ ಗುಂಪು ಮತ್ತು ಅದರ ನಿರ್ವಹಣೆಯ ಬಗ್ಗೆ ಕೇಳಿದರು. ಜನರೊಂದಿಗೆ ಸಂವಾದ ನಡೆಸಿದ ರಾಹುಲ್ ಗಾಂಧಿ ಅವರು ಯಾತ್ರಾರ್ಥಿಗಳಿಗೆ ಚಹಾ ವಿತರಿಸಿದರು ಎಂದು ತಿಳಿಸಿದ್ದಾರೆ.

ಈ ಮಧ್ಯೆ ರಾಹುಲ್ ಕೇದಾರನಾಥ ದೇಗುಲಕ್ಕೆ ಭೇಟಿ ನೀಡಿರುವುದು ರಾಜ್ಯದ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಮಾತಿನ ಸಮರಕ್ಕೆ ಕಾರಣವಾಗಿದೆ. ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ ವಕ್ತಾರ ಸುರೇಶ್ ಜೋಶಿ, ರಾಹುಲ್ ಅವರ ಕೇದಾರನಾಥ ಭೇಟಿಯು ಅಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅವರಿಗೆ ಅರಿವು ಮೂಡಿಸುತ್ತದೆ ಎಂದು ಹೇಳಿದ್ದಾರೆ.

ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಅಡಿಯಲ್ಲಿ ಧಾರ್ಮಿಕ ಸ್ಥಳಗಳ ಅಭಿವೃದ್ಧಿಯನ್ನು ವೀಕ್ಷಿಸಲು ವಾರಣಾಸಿ, ಅಯೋಧ್ಯೆ ಮತ್ತು ಉಜ್ಜಯಿನಿಗೆ ಭೇಟಿ ನೀಡುವಂತೆ ಅವರು ರಾಹುಲ್‌ಗೆ ಸಲಹೆ ನೀಡಿದರು. ಈ ಹಿಂದೆ ಆರ್ಟಿಕಲ್ 370 ರದ್ದಾದ ನಂತರ ಜಮ್ಮು ಮತ್ತು ಕಾಶ್ಮೀರಕ್ಕೆ ರಾಹುಲ್ ಅವರ ಭೇಟಿಯನ್ನು ಅವರು ನೆನಪಿಸಿಕೊಂಡರು. ಕೇದಾರನಾಥಕ್ಕೆ ಅವರ ಭೇಟಿಯನ್ನು ಅವರು ಸ್ವಾಗತಿಸಿದರು. ಆದರೆ, ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ರಾಹುಲ್ ಕೇದಾರನಾಥದಲ್ಲಿ ಇರುವುದೇಕೆ ಎಂದು ಪ್ರಶ್ನಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+