ಮೋದಿಯವರನ್ನು ಮತ್ತೆ ಕಿಚಾಯಿಸಿದ ರಾಹುಲ್ ಗಾಂಧಿ

ನವದೆಹಲಿ, ಜೂನ್ 26: ಅವಕಾಶ ಸಿಕ್ಕಾಗಲೆಲ್ಲ ಪ್ರಧಾನಿ ನರೇಂದ್ರ ಮೊದಿ ಅವರನ್ನು ಕಿಚಾಯಿಸುವುದನ್ನು ಎಂದಿಗೂ ಮಿಸ್ ಮಾಡಿಕೊಳ್ಳದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತೆ ಮೋದಿಯವರನ್ನು ಲೇವಡಿ ಮಾಡಿದ್ದಾರೆ.

"ನಮ್ಮ ಪ್ರಧಾನಿ ತಮ್ಮ ಗಾರ್ಡನ್ ನಲ್ಲಿ ಯೋಗ ಮಾಡಿ, ಅದರ ವಿಡಿಯೋ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇತ್ತ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿಷಯದಲ್ಲಿ ಭಾರತವು ಅಫ್ಘಾನಿಸ್ತಾನ, ಸಿರಿಯಾ ಮತ್ತು ಸೌದಿ ಅರೆಬಿಯಾಗಳನ್ನು ಮೀರಿಸುತ್ತಿದೆ. ಎಂಥ ನಾಚಿಕೆಗೇಡು!" ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

Rahul Gandhi targets PM Modi in his latest tweet

ಇತ್ತೀಚೆಗಷ್ಟೇ ಹೊರಬಿದ್ದ ಸಮೀಕ್ಷೆಯೊಂದು, ಭಾರತ ಮಹಿಳೆಯರ ಮಟ್ಟಿಗೆ ವಿಶ್ವದಲ್ಲೇ ಅತ್ಯಂತ ಅಪಾಯಕಾರಿ ದೇಶ ಎಂದಿತ್ತು. ಅಪ್ಘಾನಿಸ್ತಾನ ಮತ್ತು ಸಿರಿಯಾ ದೇಶಗಳು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿದ್ದರೆ ಭಾರತ ಮೊದಲ ಸ್ಥಾನದಲ್ಲಿದೆ. 2007 ರಿಂದ 2016 ರ ಅಂತರದಲ್ಲಿ ಭಾರತದಲ್ಲಿ ಮಹಿಳೆಯರ ಮೇಲೆ ನಡೆಯುವ ಹಿಂಸೆ ಶೇ 83 ರಷ್ಟು ಹೆಚ್ಚಾಗಿದೆ ಎಂದು ಈ ಸಮೀಕ್ಷೆ ತಿಳಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+