ಡೋಪಿಂಗ್ ಟೆಸ್ಟ್ ನಲ್ಲಿ ರಾಹುಲ್ ಗಾಂಧಿ ಫೇಲ್ ಆಗ್ತಾರೆ: ಸ್ವಾಮಿ
ನವದೆಹಲಿ ಜುಲೈ 06: ಪಂಜಾಬಿನಲ್ಲಿ ಸರ್ಕಾರಿ ಅಧಿಕಾರಿಗಳಿಗೂ ಉದ್ದೀಪನ ಮದ್ದು ಪರೀಕ್ಷೆ ಕಡ್ಡಾಯವಾಗಿರುವ ಸುದ್ದಿ ಓದಿರಬಹುದು.
ಪಂಜಾಬ್ ಸರ್ಕಾರದ ಕ್ರಮದ ಬಗ್ಗೆ ಮಾತನಾಡಿದ ಕೇಂದ್ರ ಸಚಿವೆ ಹರ್ಸಿಮೃತ್ ಕೌರ್ ಬಾದಲ್ ಅವರು, ಮೊದಲಿಗೆ ಈ ಟೆಸ್ಟ್ ರಾಹುಲ್ ಗಾಂಧಿ ಅವರಿಂದ ಶುರುವಾಗಲಿ ಎಂದಿದ್ದಾರೆ. ಇದಕ್ಕೆ ತಕ್ಷಣವೇ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ರಾಹುಲ್ ಗಾಂಧಿ ಕೊಕೇನ್ ಸೇವಿಸುತ್ತಾರೆ, ಅವರು ಮಾದಕದ್ರವ್ಯ ಪರೀಕ್ಷೆಯಲ್ಲಿ ವಿಫಲವಾಗುತ್ತಾರೆ ಎಂದು ಸ್ವಾಮಿ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ. ಎಲ್ಲ ಸರಕಾರಿ ನೌಕರರಿಗೆ ವಾರ್ಷಿಕ ಮಾದಕದ್ರವ್ಯ ಪರೀಕ್ಷೆಯನ್ನು ಕಡ್ಡಾಯಗೊಳಿಸಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೊರಡಿಸಿರುವ ಆದೇಶದ ವಿರುದ್ಧ ಬಿಜೆಪಿ ತಿರುಗಿಬಿದ್ದಿದೆ.
All those leaders including those who called 70% Punjabis 'Nashedis' should undergo the dope test first: Harsimrat Kaur Badal,Union Minister on Punjab CM announces annual dope test for Govt officials pic.twitter.com/G41cENxOr8
— ANI (@ANI) July 5, 2018
ಕೇಂದ್ರ ಆಹಾರ ಸಂಸ್ಕರಣಾ ಸಚಿವೆ ಹರ್ಸಿಮೃತ್ ಕೌರ್ ಬಾದಲ್ ಮಾತನಾಡಿ, ಶೇ. 70 ಪಂಜಾಬಿಗಳು ಮಾದಕದ್ರವ್ಯ ಸೇವಿಸಿ ನಶೆಯಲ್ಲಿದ್ದಾರೆ ಎಂದು ಹೇಳುತ್ತಿರುವ ಕಾಂಗ್ರೆಸ್ಸಿಗರೆಲ್ಲರೂ ಮೊದಲಿಗೆ ಪರೀಕ್ಷೆಗೆ ಒಳಪಡಲಿ ಎಂದಿದ್ದಾರೆ.
#WATCH BJP MP Subramanian Swamy says 'Rahul Gandhi takes cocaine and will fail dope test'. Swamy was reacting on Union Minister Harsimrat Badal's statement 'those who called 70% Punjabis 'Nashedis' should undergo the dope test first' pic.twitter.com/TCMvQKL36X
— ANI (@ANI) July 5, 2018
ಪಂಜಾಬ್‌ನಲ್ಲಿ ಶೇ.70 ಯುವಕರು ಮಾದಕದ್ರವ್ಯ ವ್ಯಸನಿಗಳಾಗಿದ್ದಾರೆ ಎಂದು ರಾಹುಲ್ ಗಾಂಧಿ ಅವರು ಐದು ವರ್ಷಗಳ ಹಿಂದೆ ನೀಡಿದ್ದ ಹೇಳಿಕೆನ್ನು ಉಲ್ಲೇಖಿಸಿ, ಕೌರ್ ಅವರು ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications