Get Updates
Get notified of breaking news, exclusive insights, and must-see stories!

Rahul Gandhi Nyay Yatra: ಇಂದಿನಿಂದ ಆರಭವಾದ 'ನ್ಯಾಯ್ ಯಾತ್ರೆ' ಬಗ್ಗೆ 'ರಾಗಾ' ಹೇಳಿದ್ದೇನು?

ಬೆಂಗಳೂರು, ಜನವರಿ 14: ಲೋಕಸಭಾ ಚುನಾವಣೆಗೂ ಮೊದಲು ರಾಮ ಮಂದಿರ ಉದ್ಘಾಟನೆಯಲ್ಲಿ ಬಿಜೆಪಿ ನಿರತವಾದರೆ, ಇತ್ತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಇಂದಿನಿಂದ ಮಣಿಪುರದಿಂದ ಮುಂಬೈವರೆಗೆ 'ಭಾರತ್ ಜೋಡೋ ನ್ಯಾಯ್ ಯಾತ್ರೆ' ಆರಂಭಿಸಿದ್ದಾರೆ. ಈ ಕುರಿತು ಭಾನುವಾರ ಸಂಜೆ ಅವರು ಧ್ವಜ ಹಿಡಿದು ಸಾಮಾಜಿಕ ಜಾಲತಾಣ X ನಲ್ಲಿ ಟ್ವೀಟ್ ಮಾಡಿದ್ದಾರೆ.

ಮಣಿಪುರದಿಂದ ಮುಂಬೈವರೆಗೆ ಒಟ್ಟು ಸುಮಾರು 6713 ಕಿಲೋ ಮೀಟರ್ ವರೆಗೆ ಯಾತ್ರೆ ಕೈಗೊಂಡಿರುವ ಅವರು, ಆ ಬಗ್ಗೆ ಮಾತನಾಡಿದ್ದಾರೆ. ''ದೇಶಾದ್ಯಂತ ನಡೆಯುತ್ತಿರುವ ಭೀಕರ ಅನ್ಯಾಯದ ವಿರುದ್ಧ ನ್ಯಾಯಕ್ಕಾಗಿ ಕೂಗಿ, ಭಾರತ್ ಜೋಡೋ ನ್ಯಾಯ್ ಯಾತ್ರೆ ಇಂದಿನಿಂದ ಆರಂಭವಾಗಿದೆ''

Rahul Gandhi Reaction about Manipur-Mumbai Bharat Jodo Nyay Rally, its Start from Jan 14th

ಜನರ ನೋವು-ನಲಿವು ಜತೆ ಸಂಹವನ

''ನಾವು ಜನರ ಮಾತು ಕೇಳಲು ಬರುತ್ತಿದ್ದೇವೆಯೇ ಹೊರತು ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಅಲ್ಲ. ಜನರ ನೋವು-ನಲಿವುಗಳನ್ನು ಅರಿತು ಅವರೊಂದಿಗೆ ಸಂವಹನ ನಡೆಸಲಿದ್ದೇವೆ. ಅಲ್ಲದೇ ತಳಮಟ್ಟದ ಸಂವಾದದಿಂದ ಶಾಂತಿಯುತ, ಸಮೃದ್ಧ ಮತ್ತು ಶಕ್ತಿಯುತ ಭಾರತವನ್ನು ನಿರ್ಮಿಸುವ ದೃಷ್ಟಿ ಹೊಂದಿದ್ದೇವೆ'' ಎಂದರು.

'ಭಾರತದ ದೃಷ್ಟಿ'- ಇದು ಸಮಾನತೆ, ಸಹೋದರತ್ವ ಮತ್ತು ಸಾಮರಸ್ಯವನ್ನು ಆಧರಿಸಿದ್ದಾಗದೆ. ಇದರಲ್ಲಿ ದ್ವೇಷ, ಹಿಂಸೆ ಮತ್ತು ಏಕಸ್ವಾಮ್ಯಕ್ಕೆ ಸ್ಥಳವಿಲ್ಲ ಎಂದು ಅವರು ತಿಳಿಸಿದ್ದಾರೆ.

ಯಾತ್ರೆಯಿಂದ ಕಾಂಗ್ರೆಸ್‌ಗೆ ಪ್ರಯೋಜನ
ಈ ಮೂಲಕ ರಾಹುಲ್ ಗಾಂಧಿಯವರು ಮಣಿಪುರ ದಲ್ಲಿ ತಿಂಗಳುಗಳ ಕಾಲ ನಡೆ ಹಿಂಸಾಚಾರ, ಸಾವು, ನೋವು, ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಕುರಿತು ಸರ್ಕಾರದ ವಿರುದ್ಧ ಪ್ರಶ್ನೆ ಮಾಡಲು ಸಜ್ಜಾಗಿದ್ದಾರೆ. ಕೇಂದ್ರ ಆಡಳಿತದ ವಿರುದ್ಧ ಪಕ್ಷ ಗ್ಯಾರೆಂಟಿಗಳನ್ನು, ಅಭಿವೃದ್ಧಿ ಬಗ್ಗೆ ತಿಳಿಸಲಿದ್ದಾರೆ. ಜನರ ಅಹವಾಲು, ಸಮಸ್ಯೆಗಳನ್ನು ಸ್ಥಳದಲ್ಲಿದ್ದುಕೊಂಡು ತಿಳಿದುಕೊಳ್ಳಲಿದ್ದಾರೆ.

Rahul Gandhi Reaction about Manipur-Mumbai Bharat Jodo Nyay Rally, its Start from Jan 14th

ರಾಹುಲ್ ಗಾಂಧಿಯವರು ಈ ಯಾತ್ರೆಯು ಪಾದಯಾತ್ರೆ ಮತ್ತು ವಾಹನ ಸಂಚಾರವು ಇದೆ. ಈ ಯಾತ್ರೆಯಿಂದ ಲೋಕಸಭಾ ಚುನಾವಣೆ ಹೊತ್ತಿನಲ್ಲಿ ಕಾಂಗ್ರೆಸ್‌ಗೆ ವರದಾನ ವಾಗಲಿದೆ ಎಂಬ ವಿಶ್ವಾಸ ಕಾಂಗ್ರೆಸ್ಸಿಗರಲ್ಲಿ ಮನೆ ಮಾಡಿದೆ.

ಈ ಹಿಂದೆ ಕನ್ಯಾಕುಮಾರಿಯಿಂದ ಶ್ರೀನಗರವರೆಗೆ ರಾಹುಲ್ ಗಾಂಧಿಯವರು ಪಾದಯಾತ್ರೆ ಮಾಡಿದ್ದರು. ಅನೇಕ ರಾಜ್ಯಗಳ ಜನರನ್ನು ಭೇಟಿ ಮಾಡಿದ್ದರು. ಇದೀಗ ಮಣಿಪುರದಿಂದ ಮುಂಬೈವರೆಗೆ ಯಾತ್ರೆ. 2.0 ಆರಂಭಿಸಿದ್ದಾರೆ. ಇಂದು ಮಣಿಪುರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಧ್ವಜಾರೋಹಣ ಮೂಲಕ ಚಾಲನೆ ನೀಡಿದರು. ಸದ್ಯ ಎಲ್ಲರ ಚಿತ್ರ ರಾಹುಲ್ ಗಾಂಧಿಯವರು ಯಾತ್ರೆ, ಕಾರ್ಯಕ್ರಮ, ಭಾಷಣ ಮೇಲೆ ನೆಟ್ಟಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+