• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಮೇಡ್ ಇನ್ ಅಮೇಥಿ': ರಾಹುಲ್‌ ಗಾಂಧಿಯನ್ನು ಅಣಕಿಸಿದ ಬಿಜೆಪಿ ಬೆಂಬಲಿಗರು

|
   ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಹೈ ಕಮಾಂಡ್ ಗ್ರೀನ್ ಸಿಗ್ನಲ್ | Oneindia Kannada

   ನವದೆಹಲಿ, ಸೆಪ್ಟೆಂಬರ್ 28: ಗುಜರಾತ್‌ನಲ್ಲಿ ನಿರ್ಮಾಣವಾಗುತ್ತಿರುವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪ್ರತಿಮೆ 'ಮೇಡ್ ಇನ್ ಚೀನಾ' ಎಂದು ಆರೋಪಿಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಟ್ವಿಟ್ಟಿಗರು ಅಣಕವಾಡಿದ್ದಾರೆ.

   'ನರೇಂದ್ರ ಮೋದಿ ಅವರು ಗುಜರಾತ್‌ನಲ್ಲಿ ಸರ್ದಾರ್ ಪಟೇಲ್ ಅವರ ಜಗತ್ತಿನ ಅತಿದೊಡ್ಡ ಪ್ರತಿಮೆ ನಿರ್ಮಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಈಗ ಗೊತ್ತಾಗಿರುವುದೆಂದರೆ ಪ್ರತಿಮೆಯ ಹಿಂಭಾಗದಲ್ಲಿ 'ಮೇಡ್ ಇನ್ ಚೀನಾ' ಎಂದು ಇರಲಿದೆ. ಎಷ್ಟು ಅವಮಾನಕಾರಿಯಲ್ಲವೇ' ಎಂದು ರಾಹುಲ್ ಗಾಂಧಿ ಗುರುವಾರ ಅಮೇಥಿಯಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಲೇವಡಿ ಮಾಡಿದ್ದರು.

   ಮೋದಿ ವಿರುದ್ಧ ಹರಿಹಾಯ್ದು, ಮ.ಪ್ರದೇಶದಲ್ಲಿ ಚುನಾವಣೆ ಪ್ರಚಾರಕ್ಕೆ ರಾಹುಲ್ ಚಾಲನೆ

   ಅಲ್ಲದೆ, ಮೋದಿ ಅವರು ಪ್ರತಿ ವರ್ಷ ಎರಡು ಲಕ್ಷ ಯುವಜನರಿಗೆ ಉದ್ಯೋಗ ಒದಗಿಸುವ ಭರವಸೆ ನೀಡಿದ್ದರು. ಆದರೆ ಈಗ ಪರಿಸ್ಥಿತಿ ಹೇಗಿದೆ? ಎಂದು ಪ್ರಶ್ನಿಸಿದ್ದರು.

   ಭೀಮಾ-ಕೊರೆಗಾಂವ್: ಟ್ವಿಟ್ಟರ್ ನಲ್ಲಿ ಶಾ-ರಾಹುಲ್ ಮಾರಾಮಾರಿ!

   ರಾಹುಲ್ ಗಾಂಧಿ ಹೇಳಿಕೆ ಬಿಜೆಪಿ ಬೆಂಬಲಿಗರ ಟ್ವೀಟ್‌ಗಳಿಗೆ ಆಹಾರವಾಗಿದೆ. ಟ್ವಿಟ್ಟರ್‌ನಲ್ಲಿ 'ಮೇಡ್ ಇನ್ ಅಮೇಥಿ' ಎಂಬ ಹ್ಯಾಷ್ ಟ್ಯಾಗ್ ಬಳಸಿ ಟ್ವೀಟ್‌ಗಳು ಮತ್ತು ಮೀಮ್‌ಗಳನ್ನು ಹರಿಬಿಡುತ್ತಿದ್ದಾರೆ. ಅಮೇಥಿಯ ಸಂಸದರಾಗಿ ರಾಹುಲ್ ಗಾಂಧಿ ಯಾವುದೇ ಕೆಲಸ ಮಾಡಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಅಂತಹ ಕೆಲವು ತಮಾಷೆಯ ಟ್ವೀಟ್‌ಗಳು ಇಲ್ಲಿವೆ.

   ಅಮೇಥಿಯ ಉಬರ್

   ಇಡೀ ದೇಶ ಉಬರ್ ಮತ್ತು ಓಲಾ ಹೊಂದಿದ್ದರೆ, ಅಮೇಥಿ ತನ್ನದೇ ಆದ ಈ ಕ್ಯಾಬ್ ಕಂಪೆನಿ ಹೊಂದಿದೆ. 'ಲೋಲಾ' ಇದಕ್ಕೆ ತನ್ನ ಸಂಸದ ಶ್ರೀ ರಾಹುಲ್ ಗಾಂಧಿ ಅವರ ಹೆಸರು ಇರಿಸಿದೆ ಎಂದು ಸ್ಮೋಕಿಂಗ್ ಕಿಲ್ಸ್ ಎಂಬ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

   ಜೋಡಿಯ ಮೋಟಾರ್ ಸೈಕಲ್

   ಇದು ಯುವ ಜೋಡಿಗಳಿಗಾಗಿ ಅಮೇಥಿಯಲ್ಲಿ ತಯಾರಿಸಿದ ಮೋಟಾರ್ ಸೈಕಲ್ ಎಂದು ಸಿದ್ಧಾರ್ಥ್ ಜೈನ್ ಪೋಸ್ಟ್ ಮಾಡಿರುವ ಟ್ವೀಟ್.

   ಮೋದಿಯದ್ದು 'ಸ್ಕಿಲ್ ಇಂಡಿಯಾ' ಅಲ್ಲ 'ಕಿಲ್ ಇಂಡಿಯಾ': ರಾಹುಲ್ ಕುಟುಕು

   ಅಮೇಥಿ ಆನೆ

   ಆನೆಗಳಲ್ಲಿ ಮೂರು ವಿಧ. ಆಫ್ರಿಕನ್, ಏಷ್ಯನ್ ಮತ್ತೊಂದು ಮೇಡ್ ಇನ್ ಅಮೇಥಿ ಎಂದು ಬೇಲನ್ ವಾಲಿ ಎಮ್ಮೆಗೆ ಆನೆಯ ಸೊಂಡಿಲಿನಂತೆ ವಸ್ತುವೊಂದನ್ನು ಕಟ್ಟಿರುವ ಚಿತ್ರವನ್ನು ಹಾಕಿ ಲೇವಡಿ ಮಾಡಿದ್ದಾರೆ.

   ಯುದ್ಧ ವಿಮಾನ

   ಇದು ಅಮೇಥಿಯಲ್ಲಿ ವಿಶೇಷವಾಗಿ ತಯಾರಿಸಿದ ಯುದ್ಧ ವಿಮಾನ ಎಂದು ರಿಚಾ ಗುಲಾಟಿ 'ವಿಶೇಷ' ವಿಮಾನ ಕಲಾಕೃತಿಯ ಚಿತ್ರ ಹಾಕಿದ್ದಾರೆ. ರಫೇಲ್ ಒಪ್ಪಂದದ ವಿವಾದಕ್ಕೂ ಈ ವಿಮಾನದ ನಂಟು ಕಲ್ಪಿಸಬಹುದು.

   ಜನರ ಸುರಕ್ಷತೆಗಾಗಿ

   ಆವಿಷ್ಕಾರವಷ್ಟೇ ನಮ್ಮ ಉದ್ದೇಶವಲ್ಲ. ಅಮೇಥಿಯಲ್ಲಿರುವ ನಾವು ಜನರು ಸುರಕ್ಷಿತವಾಗಿ ಇರಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಲು ಬಯಸುತ್ತೇವೆ. ಇದು ಆಡಿ ಕ್ಯೂ3 ಕಾರ್‌ನಲ್ಲಿ ಒಳಭಾಗದಲ್ಲಿ ವಿಶೇಷವಾಗಿ ಏರ್ ಬ್ಯಾಗ್ ಇರಿಸಿರುವ ಚಿತ್ರ ಎಂದು ಸ್ಮೋಕಿಂಗ್ ಕಿಲ್ಸ್ ಖಾತೆಯಿಂದ ಮತ್ತೊಂದು ಟ್ವೀಟ್ ಮಾಡಲಾಗಿದೆ.

   ಡ್ರೋಣ್

   ಅಮೇಥಿಯಲ್ಲಿ ತಯಾರಿಸಿರುವ ಡ್ರೋಣ್ ಇದು ಎಂದು ಸೀಟು ಕಿತ್ತ ಖುರ್ಚಿಯ ಚಿತ್ರ ಹಾಕಿ ದಿ ನಟೋರಿಯಸ್ ಬಿ.ಇ.ಇ ಎಂಬ ಖಾತೆಯಿಂದ ಅಣಕಿಸಲಾಗಿದೆ.

   ಅವಳಿ ಎಂಜಿನ್ ಯುದ್ಧ ವಿಮಾನ!

   ಕಾಂಗ್ರೆಸ್ ರಫೇಲ್ ಒಪ್ಪಂದದ ವಿರುದ್ಧವಾಗಿದೆ. ಏಕೆಂದರೆ, ಅದು ಈಗಾಗಲೇ ಅಮೇಥಿಯಲ್ಲಿ ತಯಾರಿಸಿದ ಅವಳಿ ಎಂಜಿನ್ ಯುದ್ಧ ವಿಮಾನಗಳನ್ನು ಹೊಂದಿದೆ ಎಂದು ಭಯ್ಯಾಜಿ ಎಂಬ ಖಾತೆಯಿಂದ ತಮಾಷೆಯ ಟ್ವೀಟ್ ಮಾಡಲಾಗಿದೆ.

   ಭಾರತೀಯರಿಗೆ ಉದ್ಯೋಗ

   ಬಿಜೆಪಿ ಬೆಂಬಲಿಗರ ಟ್ವೀಟ್ ದಾಳಿಯ ನಡುವೆ ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಪ್ರತಿ ದಾಳಿ ನಡೆಸಿದ್ದಾರೆ. ಮೋದಿ ಅವರ ಚಿತ್ರವನ್ನು ಬಳಸಿಕೊಂಡಿರುವ ರಮ್ಯಾ, ಭಾರತೀಯರಿಗೆ ಕೆಲಸ ನೀಡುವ ಮತ್ತು ಚೀನೀ ಪ್ರಜೆಗಳಿಗೆ ಕೆಲಸ ನೀಡುವ ವಿಚಾರಗಳಲ್ಲಿ ಮೋದಿ ಮುಖಭಾವ ಹೇಗೆ ಇರುತ್ತದೆ ಎಂಬಂತೆ ಚಿತ್ರಿಸುವ ಅಣಕದ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಸರ್ದಾರ್ ಪಟೇಲ್ ಸ್ಟ್ಯಾಚೂ ಎಂಬ ಹ್ಯಾಷ್‌ ಟ್ಯಾಗ್ ಬಳಸಿದ್ದಾರೆ.

   ಇನ್ನಷ್ಟು rahul gandhi ಸುದ್ದಿಗಳುView All

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   BJP supporters took twitter to dig at Rahul Gandhi's Made in China statement on Sardar Vallabhabhai statue, with Memes and jokes using #MadeInAmethi.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more