ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶಕ್ಕೆ ಹೋಗುವ ಮುನ್ನ ಬಿಜೆಪಿಯ ಕಾಲು ಎಳೆದು ಹೋದ ರಾಹುಲ್ ಗಾಂಧಿ

|
Google Oneindia Kannada News

Recommended Video

ತಾಯಿ ಸೋನಿಯಾ ಗಾಂಧಿ ಜೊತೆ ವಿದೇಶಕ್ಕೆ ಹೋಗೋ ಮುಂಚೆ ಬಿಜೆಪಿ ಕಾಲೆಳೆದ ರಾಹುಲ್ ಗಾಂಧಿ | Oneindia Kannada

ಪ್ರಧಾನಿ ನರೇಂದ್ರ ಮೋದಿಯವರ ನಾಲ್ಕು ವರ್ಷದ ಆಡಳಿತಕ್ಕೆ 'ಎಫ್' ಗ್ರೇಡ್ ನೀಡಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ವಿದೇಶಕ್ಕೆ ತೆರಳಿದ್ದಾರೆ.

ಸೋನಿಯಾ ಗಾಂಧಿಯವರ ವಾರ್ಷಿಕ ಆರೋಗ್ಯ ತಪಾಸಣೆಗಾಗಿ ವಿದೇಶಕ್ಕೆ ಹೋಗಲಿದ್ದು, ಶೀಘ್ರವೇ ದೇಶಕ್ಕೆ ವಾಪಸ್ ಆಗಲಿದ್ದೇನೆ. ಬಿಜೆಪಿಯ ಸಾಮಾಜಿಕ ತಾಣದ ಟ್ರೋಲ್ ಆರ್ಮಿ, ಇದರ ಬಗ್ಗೆ ತುಂಬಾ ಕೆಲಸ ಮಾಡುವ ಅವಶ್ಯಕತೆಯಿಲ್ಲ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

ನರೇಂದ್ರ ಮೋದಿ ಸರ್ಕಾರಕ್ಕೆ 'F' ಗ್ರೇಡ್ ಕೊಟ್ಟ ರಾಹುಲ್ ಮೇಷ್ಟ್ರು!ನರೇಂದ್ರ ಮೋದಿ ಸರ್ಕಾರಕ್ಕೆ 'F' ಗ್ರೇಡ್ ಕೊಟ್ಟ ರಾಹುಲ್ ಮೇಷ್ಟ್ರು!

ಭಾನುವಾರ (ಮೇ 28) ತಾಯಿಯ ಜೊತೆಗೆ ರಾಹುಲ್ ವಿದೇಶಕ್ಕೆ ತೆರಳಿದ್ದು, ಒಂದು ವಾರದಲ್ಲಿ ರಾಹುಲ್ ಸ್ವದೇಶಕ್ಕೆ ವಾಪಸ್ ಆಗಲಿದ್ದಾರೆ. ಆದರೆ, ಸೋನಿಯಾ ಹಿಂದಿರುಗುವುದು ತಡವಾಗಬಹುದು ಎಂದು, ಕಾಂಗ್ರೆಸ್ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

2011ರಲ್ಲಿ ಸೋನಿಯಾ ಗಾಂಧಿಗೆ ಅಮೆರಿಕಾದಲ್ಲಿ ಶಸ್ತಚಿಕಿತ್ಸೆ ನಡೆದಿತ್ತು. ಜೂನ್ ಆರರಂದು ರಾಹುಲ್ ಗಾಂಧಿ, ಮಧ್ಯಪ್ರದೇಶದ ಮಂಡ್ಸೌರ್ ನಲ್ಲಿ ರೈತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ರಾಹುಲ್ ವಿದೇಶ ಪ್ರವಾಸದಿಂದ, ಕರ್ನಾಟಕದ ಸಚಿವಸ್ಥಾನ ಹಂಚಿಕೆ ಪ್ರಕ್ರಿಯೆಗೆ ಸದ್ಯ ಬ್ರೇಕ್ ಬೀಳಲಿದೆ.

ಪ್ರಧಾನಿ ಮೋದಿಗೆ ರಾಹುಲ್ ಗಾಂಧಿಯಿಂದ ಹೊಸ ಸವಾಲು!ಪ್ರಧಾನಿ ಮೋದಿಗೆ ರಾಹುಲ್ ಗಾಂಧಿಯಿಂದ ಹೊಸ ಸವಾಲು!

ರಾಹುಲ್ ಗಾಂಧಿ ಜೊತೆ ಹಲವು ಸುತ್ತಿನ ಚರ್ಚೆಯ ನಂತರವೂ ಟಿಕೆಟ್ ಹಂಚಿಕೆ ಸಮಸ್ಯೆಗೆ ಪರಿಹಾರ ಸಿಗಲಿರಲಿಲ್ಲ. ಇನ್ನು ರಾಹುಲ್ ಸ್ವದೇಶಕ್ಕೆ ವಾಪಸ್ ಆದ ನಂತರವಷ್ಟೇ ಮತ್ತೆ ಇದಕ್ಕೆ ಚಾಲನೆ ಸಿಗಲಿದೆ. ಅಲ್ಲಿಯ ವರೆಗೆ, ಸಾಲಮನ್ನಾ ಪ್ರಕ್ರಿಯೆಗೂ ಪೂರ್ಣವಿರಾಮ ಬೀಳುವುದು ಕಷ್ಟ. ರಾಹುಲ್ ಟ್ವೀಟಿಗೆ ವ್ಯಾಪಕ ಪರವಿರೋಧ ಪ್ರತಿಕ್ರಿಯೆ ವ್ಯಕ್ತವಾಗಿದೆ.

ತಾಯಿ ಸೋನಿಯಾ ಗಾಂಧಿಯ ವಾರ್ಷಿಕ ಆರೋಗ್ಯ ತಪಾಸಣೆ

ತಾಯಿ ಸೋನಿಯಾ ಗಾಂಧಿಯ ವಾರ್ಷಿಕ ಆರೋಗ್ಯ ತಪಾಸಣೆ

ಸ್ವದೇಶದಿಂದ ಸ್ವಲ್ಪದಿನ ಹೊರಗಿರಲಿದ್ದೇನೆ, ತಾಯಿ ಸೋನಿಯಾ ಗಾಂಧಿಯ ವಾರ್ಷಿಕ ಆರೋಗ್ಯ ತಪಾಸಣೆಗಾಗಿ ಅವರ ಜೊತೆ ಹೋಗುತ್ತಿದ್ದೇನೆ. ಬಿಜೆಪಿಯ ಸಾಮಾಜಿಕ ತಾಣದ ಟ್ರೋಲ್ ಆರ್ಮಿ, ಇದರ ಬಗ್ಗೆ ತುಂಬಾ ಕೆಲಸ ಮಾಡುವ ಅವಶ್ಯಕತೆಯಿಲ್ಲ ಎಂದು ರಾಹುಲ್, ಭಾನುವಾರ ರಾತ್ರಿ ಹತ್ತು ಗಂಟೆಗೆ ಟ್ವೀಟ್ ಮಾಡಿದ್ದರು.

ವೈದ್ಯರ ಬಗ್ಗೆ ನಿಮಗೆ ನಂಬಿಕೆ ಇಲ್ಲ ಎಂದಾದರೆ, ಇಲ್ಲಿನ ಜನ ಯಾಕೆ ನಿಮ್ಮನ್ನು ನಂಬಬೇಕು

ವೈದ್ಯರ ಬಗ್ಗೆ ನಿಮಗೆ ನಂಬಿಕೆ ಇಲ್ಲ ಎಂದಾದರೆ, ಇಲ್ಲಿನ ಜನ ಯಾಕೆ ನಿಮ್ಮನ್ನು ನಂಬಬೇಕು

ನಿಮ್ಮ ತಾಯಿಯ ಆರೋಗ್ಯ ಆದಷ್ಟು ಬೇಗ ಸುಧಾರಿಸಲಿ. ಇದರ ನಡುವೆ ಬೇಸರದ ಸಂಗತಿಯೆಂದರೆ ನಮ್ಮಲ್ಲಿ ಅಂತರಾಷ್ಟ್ರೀಯ ದರ್ಜೆಯ ಆಸ್ಪತ್ರೆಗಳಿಲ್ಲವೇ? ಪ್ರತೀ ಸಲ ನಿಮ್ಮ ಕುಟುಂಬ ವಿದೇಶಕ್ಕೆ ಪ್ರಯಾಣಿಸುವುದು ಯಾಕೆ? ಇಲ್ಲಿನ ವೈದ್ಯರ ಬಗ್ಗೆ ನಿಮಗೆ ನಂಬಿಕೆ ಇಲ್ಲ ಎಂದಾದರೆ, ಇಲ್ಲಿನ ಜನ ಯಾಕೆ ನಿಮ್ಮನ್ನು ನಂಬಬೇಕು?

ಅಂತರಾಷ್ಟ್ರೀಯ ದರ್ಜೆಯ ಆಸ್ಪತ್ರೆ ನಿರ್ಮಾಣ ನಿಮ್ಮಿಂದ ಸಾಧ್ಯವಾಗದೇ ಇದ್ದದ್ದು

ಅಂತರಾಷ್ಟ್ರೀಯ ದರ್ಜೆಯ ಆಸ್ಪತ್ರೆ ನಿರ್ಮಾಣ ನಿಮ್ಮಿಂದ ಸಾಧ್ಯವಾಗದೇ ಇದ್ದದ್ದು

ಮೋದಿ ವಿದೇಶಕ್ಕೆ ಹೋದಂತೆ,ಇವರೂ ವಿದೇಶಕ್ಕೆ ಹೋಗುತ್ತಾರೆ. ಎಪ್ಪತ್ತು ವರ್ಷ ಈ ದೇಶವನ್ನು ಆಳಿದ್ದರೂ, ಒಂದು ಅಂತರಾಷ್ಟ್ರೀಯ ದರ್ಜೆಯ ಆಸ್ಪತ್ರೆ ನಿರ್ಮಾಣ ನಿಮ್ಮಿಂದ ಸಾಧ್ಯವಾಗದೇ ಇದ್ದದ್ದು. ಮನೋಹರ್ ಪಾರಿಕ್ಕರ್ ಕೂಡಾ ವಿದೇಶಕ್ಕೆ ಹೋಗಲಿಲ್ಲವೇ ಭಕ್ತರೇ ಎನ್ನುವ ಟ್ವೀಟ್.

ಟ್ರೋಲ್ ಅನ್ನು ಸಂಭಾಳಿಸುತ್ತೇವೆ

ಟ್ರೋಲ್ ಅನ್ನು ಸಂಭಾಳಿಸುತ್ತೇವೆ

ಪ್ರತೀದಿನ ಪ್ರಧಾನಿ ಮೋದಿಯವರ ಕಾರ್ಯವೈಖರಿಯನ್ನು ಟೀಕಿಸುವ ಬದಲು ಕಾಂಗ್ರೆಸ್ ತನ್ನ ವಿಷನ್ ಅನ್ನು ಸ್ಪಷ್ಟಪಡಿಸಬೇಕಿತ್ತು. ನೀವು ನಿಮ್ಮ ತಾಯಿಯ ಆರೋಗ್ಯವನ್ನು ನೋಡಿಕೊಳ್ಳಿ, ನಾವು ಟ್ರೋಲ್ ಅನ್ನು ಸಂಭಾಳಿಸುತ್ತೇವೆ.

ರಾಹುಲ್, ಸಿಬಲ್ ಇಲ್ಲ, ನಮ್ಮನ್ನು ಇನ್ನು ನಗಿಸುವವರು ಯಾರು?

ರಾಹುಲ್, ಸಿಬಲ್ ಇಲ್ಲ, ನಮ್ಮನ್ನು ಇನ್ನು ನಗಿಸುವವರು ಯಾರು?

ತಾಯಿಯ ಆರೋಗ್ಯ ನೋಡಿಕೊಳ್ಳಬೇಕಾಗಿರುವುದು ನಿಮ್ಮ ಕರ್ತವ್ಯ. ಎಪ್ಪತ್ತು ವರ್ಷದಲ್ಲಿ ಮೆಡಿಕಲ್ ಕ್ಷೇತ್ರಕ್ಕೆ ಕೆಲಸ ಮಾಡಿದ್ದರೆ, ವಿದೇಶಕ್ಕೆ ಹೋಗಬೇಕಾಗಿ ಬರುತ್ತಿರಲಿಲ್ಲ. ರಾಹುಲ್ ನೀವೂ ದೇಶದಲ್ಲಿ ಇಲ್ಲ, ಕಪಿಲ್ ಸಿಬಲ್ ಕೂಡಾ ದೇಶದಲ್ಲಿ ಇಲ್ಲ, ನಮ್ಮನ್ನು ಇನ್ನು ನಗಿಸುವವರು ಯಾರು?

English summary
UPA chairperson Sonia Gandhi, accompanied by her son and Congress president Rahul Gandhi, left abroad yesterday (May 27) for a annual medical check-up. Before leaving, his tweet to BJP Social Media troll group, don't get too worked up...I'll be back soon!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X