Get Updates
Get notified of breaking news, exclusive insights, and must-see stories!

ಯಮುನಾ ನದಿ ನೀರು ಕುಡಿತಿರಾ!: ಅರವಿಂದ್ ಕೇಜ್ರಿವಾಲ್‌ಗೆ 'ರಾಗಾ' ಸವಾಲ್, ಪ್ರಧಾನಿ ವಿರುದ್ಧ ವಾಗ್ದಾಳಿ

ನವದೆಹಲಿ, ಜನವರಿ 30: ದೆಹಲಿ ವಿಧಾನಸಭಾ ಚುನಾವಣೆ ಕಾವು ಹೆಚ್ಚಾಗುತ್ತಿದೆ. ಚುನಾವಣೆ ಮೊದಲ ರಾಜಕೀಯ ಪಕ್ಷಗಳ ಪ್ರಮುಖ ನಾಯಕರ ಮಧ್ಯ ವಾಕ್ಸಮರ ಮುಂದುವರಿದಿದೆ. ಕಾಂಗ್ರೆಸ್ ಲೋಕಸಭಾ ವಿರೋಧ ಪಕ್ಷದ ನಾಯಕ, ಸಂಸದ ರಾಹುಲ್ ಗಾಂಧಿಯವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಎಎಪಿ ಅರವಿಂದ್ ಕೇಜ್ರಿವಾಲ್ ಅವರು ಜನರಿಗೆ ಸುಳ್ಳು ಭರವಸೆ ನೀಡುತ್ತಿದ್ದಾರೆ ಎಂದು ಕಿಡಿ ಕಾರಿದರು.

ಕಾರ್ಯಕರ್ತ ಸಭೆ ಉದ್ದೇಶಿಸಿ ಮಾತನಾಡಿದ ಅರಾಹುಲ್ ಗಾಂಧಿ ಅವರು, ದೆಹಲಿಯ ಮಾಜಿ ಮುಖ್ಯಮಂತ್ರಿ ಮೇಲೆ ತೀವ್ರ ವಾಗ್ದಾಳಿ ನಡೆಸಿದರು. ಕೇಜ್ರಿವಾಲ್ ಅವರಿಗೆ ಯಮುನಾ ನದಿಯ ನೀರು ಕುಡಿಯಲು ಸವಾಲು ಹಾಕಿದರು. ಕಾಂಗ್ರೆಸ್ ಅವಧಿಯಲ್ಲಿ ಶೀಲಾ ದೀಕ್ಷಿತ್ ನೇತೃತ್ವದಲ್ಲಿ ದೆಹಲಿಯಲ್ಲಿ ಒಂದೂವರೆ ದಶಕದಲ್ಲಿ ನಡೆದ ಅಭಿವೃದ್ಧಿ ಚಟುವಟಿಕೆ ಪ್ರಸ್ತಾಪಿಸಿ ಕುಟುಕಿದರು ಎಂದು ಎಎನ್‌ಐ ವರದಿ ಮಾಡಿದೆ.

Rahul Gandhi Lashes on AAP Arvind Kejriwal and PM Modi False Promises ahead Delhi Polls 2025

ದೆಹಲಿ ಜನರಿಗೆ ಕೇಜ್ರಿವಾಲ್ ಮತ್ತು ಪ್ರಧಾನಿ ಮೋದಿ ಅವರು ಇಬ್ಬರೂ ಸುಳ್ಳು ಭರವಸೆಗಳನ್ನು ಘೋಷಿಸುತ್ತಿದ್ದಾರೆ. ಯಮುನಾ ನದಿಯಲ್ಲಿ ವಿಷ ಬೆರೆಸಿದ್ದಾರೆ. ಅದನ್ನು ಸ್ವಚ್ಛ ಮಾಡಿ ಕುಡಿಯುವುದಾಗಿ ಎಎಪಿ ನಾಯಕ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಃಏಳಿದ್ದರು. ನದಿ ಸ್ವಚ್ಛಗೊಳಿಸಿ ಅದರ ನೀರನ್ನು ಕುಡಿಯುವುದಾಗಿ ಭರವಸೆ ಕೊಟ್ಟಿದ್ದರು. ಐದು ವರ್ಷವಾದರೂ ಭರವಸೆ ಇಡೇರಿಲ್ಲ. ಈಗ ಯಮುನಾ ನದಿ ನೀರು ಕುಡಿಯುತ್ತಾರೆ ಎಂದು ಸವಾಲು ಹಾಕಿದರು.

ದೆಹಲಿಯಲ್ಲಿನ ಅಭಿವೃದ್ಧೀ, ಉದ್ಯೋಗ ಬಗ್ಗೆ ಮಾತನಾಡುವುದಾದರೆ, ಕಾಂಗ್ರೆಸ್ ಅವಧಿಯಲ್ಲಿ ಇಲ್ಲಿನ ರಸ್ತೆ ನಿರ್ಮಿಸಲಾಗಿದೆ. ಅಂದು ಮಹತ್ವದ ಅಭಿವೃದ್ಧಿ ಕೆಲಸಗಳು ನಡೆದಿವೆ. ಎಎಪಿ ನಾಯಕ ಕೇಜ್ರಿವಾಲ್ ಅವರು 'ಸ್ವಚ್ಛ ರಾಜಕೀಯ' ತರುವುದಾಗಿ ಘೋಷಿಸಿದ್ದರು. ಹೇಳಿಕೆಯ ವಿರುದ್ಧವಾಗಿ "ಅತಿದೊಡ್ಡ ಮದ್ಯ ಹಗರಣ"ವನ್ನು ಈ ರಾಜ್ಯದಲ್ಲಿ ನಡೆಸಿದ್ದಾರೆ ಎಂದು ಅವರು ಎಎಪಿ ಆಡಳಿತ ವೈಖರಿ ವಿವರಿಸಿದರು.

ದೆಹಲಿಯಲ್ಲಿ ಸ್ವಚ್ಛ ರಾಜಕೀಯ ತರುವುದಾಗಿ ಹೇಳುತ್ತಿದ್ದದ್ದ ಅರವಿಂದ್ ಕೇಜ್ರಿವಾಲ್ ಅವರು ರಾಜ್ಯದ ಅತಿದೊಡ್ಡ ಹಗರಣಕ್ಕೆ ಅವರು, ಅವರ ಪಕ್ಷ ತೊಡಗಿಕೊಂಡಿದೆ ಎಂಬಾ ಆರೋಪದಲ್ಲಿ ಸಿಲುಕಿದರು. ತನಿಖೆ ಎದುರಿಸಬೇಕಾಯಿತು. ಕೇಜ್ರಿವಾಲರು ಕಾರ್ಪೊರೇಟ್ ಸರ್ಕಾರ ನಡೆಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಇತ್ತ ರಾಜ್ಯದ ಜನರು ಕೊಳಕು ನೀರು ಕುಡಿಯುವ ವಿಚಾರದ ಬಂದಾಗ ಕೇಜ್ರಿವಾಲ್ 'ಶೀಶ್ ಮಹಲ್'ನಲ್ಲಿ ವಾಸಿಸುತ್ತಿದ್ದರು. ಸದ್ಯ ಚಿಕ್ಕ ಕಾರಿನಲ್ಲಿ ಓಡಾಡುತ್ತಿದ್ದ ಕೇಜ್ರಿವಾಲ್ ಇಂದು ಐಶಾರಾಮ ಮನೆ ಕಟ್ಟಿದ್ದಾರೆ. ಈಗ ದೆಹಲಿ ಚುನಾವಣೆಯಲ್ಲಿ ಮತ್ತೆ ಜನರಿಗೆ ಸುಳ್ಳು ಭರವಸೆ ನೀಡುತ್ತಿದ್ದಾರೆ ಎಂದರು.

ದೆಹಲಿಯಲ್ಲಿ ಫೆಬ್ರವರಿ 5ರಂದು ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಫೆಬ್ರವರಿ 8ರಂದು ಚುನಾವಣಾ ಕಣದಲ್ಲಿರುವ 699 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ. ಕಳೆದ ಎರಡು ಬಾರಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಒಂದೇ ಒಂದು ಸ್ಥಾನ ಗೆದ್ದಿಲ್ಲ. ಈ ಬಾರಿ ಗೆಲುವಿನಗೆ ಹರಸಾಹ ಪಡುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+