ರಾಹುಲ್‌ ಗಾಂಧಿಗೆ ಮತ್ತೆ ಸಂಕಷ್ಟ: ಈಗ ಲಕ್ನೋ ಕೋರ್ಟ್‌ನಿಂದ ನೋಟಿಸ್‌ ಜಾರಿ, ವಿವರ ತಿಳಿಯಿರಿ

ಲಕ್ನೋ, ಅಕ್ಟೋಬರ್‌ 03: ಮೋದಿ ಉಪನಾಮದ ಬಗ್ಗೆ ಮಾತನಾಡಿ ಸಂಕಷ್ಟ ಅನುಭವಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಈಗ ಉತ್ತರ ಪ್ರದೇಶದ ಲಕ್ನೋದ ಸೆಷನ್ಸ್ ನ್ಯಾಯಾಲಯವು ನೋಟಿಸ್‌ ನೀಡಿದೆ.

ಕಳೆದ ವರ್ಷ ಮಹಾರಾಷ್ಟ್ರದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ವಿಡಿ ಸಾವರ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ದಾಖಲಾಗಿರುವ ದೂರಿನ ಕುರಿತು ಈ ನೋಟಿಸ್‌ ನೀಡಲಾಗಿದೆ.

Rahul Gandhi is in trouble again: Now Lucknow court has issued notice, know the details

ವಕೀಲ ನೃಪೇಂದ್ರ ಪಾಂಡೆ ಸಲ್ಲಿಸಿದ ಕ್ರಿಮಿನಲ್ ಪಿಟಿಷನ್‌ಗೆ ಪ್ರತಿಕ್ರಿಯೆಯಾಗಿ ಸೆಷನ್ಸ್ ನ್ಯಾಯಾಧೀಶ ಅಶ್ವಿನಿ ಕುಮಾರ್ ತ್ರಿಪಾಠಿ ಅವರು ರಾಹುಲ್‌ ಗಾಂಧಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ನೃಪೇಂದ್ರ ಪಾಂಡೆ ಅವರು ರಾಹುಲ್‌ ಗಾಂಧಿ ಅವರು ವಿಡಿ ಸಾವರ್ಕರ್ ವಿರುದ್ಧ ಹೇಳಿಕೆಗೆ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲು ಅರ್ಜಿಯೊಂದಿಗೆ ಆರಂಭದಲ್ಲಿ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಎಸಿಜೆಎಂ) ಅವರನ್ನು ಭೇಟಿಯಾಗಿದ್ದರು.

ಕಳೆದ ವರ್ಷ ನವೆಂಬರ್ 17 ರಂದು ರಾಹುಲ್ ಗಾಂಧಿಯವರು ನೀಡಿದ್ದ ಹೇಳಿಕೆಗಳ ಬಗ್ಗೆ ನೃಪೇಂದ್ರ ಪಾಂಡೆ ದೂರು ದಾಖಲಿಸಿದ್ದರು. ಆಗ ರಾಹುಲ್ ಗಾಂಧಿ ವಿಡಿ ಸಾವರ್ಕರ್ ಅವರನ್ನು ಬ್ರಿಟಿಷರ ಸಹಯೋಗಿ ಮತ್ತು ಸಾರ್ವರ್ಕರ್ ಬ್ರಿಟಿಷರಿಂದ ಪಿಂಚಣಿ ಹಣವನ್ನು ಪಡೆದಿದ್ದಾರೆ ಎಂದು ಹೇಳಿದ್ದರು.
ಜೂನ್ 2023 ರಲ್ಲಿ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅಂಬರೀಷ್ ಕುಮಾರ್ ಶ್ರೀವಾಸ್ತವ ಅವರು ನೃಪೇಂದ್ರ ಪಾಂಡೆ ಅವರ ದೂರನ್ನು ವಜಾಗೊಳಿಸಿದ್ದರು.

ಬಳಿಕ ನೃಪೇಂದ್ರ ಪಾಂಡೆ ಸೆಷನ್ಸ್ ನ್ಯಾಯಾಲಯದ ಮುಂದೆ ಅರ್ಜಿ ಹಾಕಿದ್ದರು. ಬಳಿಕ ನೃಪೇಂದ್ರ ಪಾಂಡೆ ಅವರ ಹೊಸ ಅರ್ಜಿಯು ಕಾನೂನು ಮತ್ತು ಫ್ಯಾಕ್ಟ್‌ ಎರಡೂ ಪ್ರಶ್ನೆಗಳನ್ನು ಎತ್ತಿರುವುದನ್ನು ಗಮನಿಸಿದ ಸೆಷನ್ಸ್ ನ್ಯಾಯಾಲಯವು ಪರಿಷ್ಕರಣೆ ಅರ್ಜಿಯನ್ನು ವಿಚಾರಣೆಗೆ ನಿರ್ಧರಿಸಿತು. ಬಳಿಕ ಸೆಷನ್ಸ್ ನ್ಯಾಯಾಲಯವು ಈ ವಿಷಯವನ್ನು ಲಕ್ನೋದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು, ಎಂಪಿ-ಎಂಎಲ್ಎ ನ್ಯಾಯಾಲಯಕ್ಕೆ ವರ್ಗಾಯಿಸಿತು. ರಾಹುಲ್‌ ಮೇಲಿನ ಹೊಸ ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 1, 2023 ಕ್ಕೆ ನಿಗದಿಪಡಿಸಲಾಗಿದೆ.

ನೃಪೇಂದ್ರ ಪಾಂಡೆ ನೀಡಿದ ದೂರಿನಲ್ಲಿ ಮಹಾತ್ಮ ಗಾಂಧಿಯವರು ಸಾವರ್ಕರ್ ಅವರನ್ನು ದೇಶಭಕ್ತ ಎಂದು ಗುರುತಿಸಿದ್ದರು ಎಂದು ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ ರಾಹುಲ್ ಗಾಂಧಿ ಅವರು ನೀಡಿದ್ದ ಹೇಳಿಕೆಗಳು ಸಾರ್ವರ್ಕರ್ ವಿರುದ್ಧ ಅನಗತ್ಯ ಅಭಿಪ್ರಾಯಗಳನ್ನು ಹರಡುವ ಮೂಲಕ ಸಾಮಾಜದಲ್ಲಿ ಭಿನ್ನಾಭಿಪ್ರಾಯ ಮತ್ತು ದ್ವೇಷವನ್ನು ಉಂಟುಮಾಡುತ್ತಿವೆ. ಇದರಿಂದಾಗಿ ನಮಗೆ ಮಾನಸಿಕ ತೊಂದರೆ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕೋಲಾರದಲ್ಲಿ ಲೋಕಸಭಾ ಚುನಾವಣೆ ಪ್ರಚಾರದ ವೇಳೆ 2019 ರ ಮೋದಿ ಉಪನಾಮ ಟೀಕೆ ವಿಚಾರವಾಗಿ ರಾಹುಲ್ ಗಾಂಧಿ ವಿರುದ್ಧದ ಕಿಮಿನಲ್‌ ಮಾನಷ್ಟ ಮೊಕದ್ದಮೆಯಲ್ಲಿ ಸುಪ್ರೀಂಕೋರ್ಟ್ ತಕ್ಷಣದ ತಡೆ ನೀಡಿತ್ತು. ಬಳಿಕ ಕಳೆದುಕೊಂಡಿದ್ದ ಲೋಕಸಭಾ ಸದಸ್ಯತ್ವ ಸ್ಥಾನ ಮರಳಿ ನೀಡಲಾಗಿತ್ತು.

ಗುಜರಾತ್ ಸರ್ಕಾರದ ಮಾಜಿ ಸಚಿವ ಪೂರ್ಣೇಶ್ ಮೋದಿ ಅವರು 2019 ರಲ್ಲಿ ಗಾಂಧಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ರಾಹುಲ್ ಗಾಂಧಿ ಏಪ್ರಿಲ್ 13, 2019 ರಂದು ಕರ್ನಾಟಕದ ಕೋಲಾರದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾಡಿದ ಭಾಷಣದಲ್ಲಿ "ಎಲ್ಲಾ ಕಳ್ಳರು ಮೋದಿಯನ್ನು ಸಾಮಾನ್ಯ ಉಪನಾಮವಾಗಿ ಹೇಗೆ ಹೊಂದಿದ್ದಾರೆ..?" ಎಂದು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+