ಟ್ವೀಟ್ ತಂದ ಆಪತ್ತು, ರಾಹುಲ್‌ ಗಾಂಧಿಗೆ ಮಕ್ಕಳ ಹಕ್ಕು ಆಯೋಗದಿಂದ ನೊಟೀಸ್‌

ಮುಂಬೈ, ಜೂನ್ 20: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮಹಾರಾಷ್ಟ್ರದ ಮಕ್ಕಳ ಹಕ್ಕು ಸಂರಕ್ಷಣಾ ಆಯೋಗ ನೊಟೀಸ್ ಜಾರಿ ಮಾಡಿದೆ.

ರಾಹುಲ್ ಗಾಂಧಿ ಅವರು ಅನ್ಯಾಯಕ್ಕೊಳಗಾಗಿರುವ ಮಕ್ಕಳ ಗುರುತು ಪತ್ತೆ ಆಗುವಂತೆ ಮಾಡಿದ್ದಾರೆಂದು ಆರೋಪಿಸಿರುವ ಮಹಾರಾಷ್ಟ್ರದ ಮಕ್ಕಳ ಹಕ್ಕು ಆಯೋಗವು ರಾಹುಲ್ ಗಾಂಧಿ ಅವರಿಗೆ ನೊಟೀಸ್ ಜಾರಿ ಮಾಡಿದೆ.

ಊರಿನ ಬಾವಿಯೊಳಗೆ ಈಜು ಹೊಡೆದರೆಂದು ಇಬ್ಬರು ಬಾಲಕರನ್ನು ವಿವಸ್ತ್ರಗೊಳಿಸಿ ಥಳಿಸುತ್ತಿರುವ ವಿಡಿಯೋ ಒಂದನ್ನು ರಾಹುಲ್ ಗಾಂಧಿ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು. ವಿಡಿಯೋದಲ್ಲಿ ಮಕ್ಕಳ ಮುಖ ಮರೆಮಾಚಿರಲಿಲ್ಲ ಇದೇ ಈಗ ವಿವಾದಕ್ಕೆ ಕಾರಣವಾಗಿದೆ.

Rahul Gandhi gets notice from child rights body

ಮಕ್ಕಳು ವಿವಸ್ತ್ರರಾಗಿದ್ದರು, ಅಲ್ಲದೆ ಅವರನ್ನು ದಲಿತರು ಎಂದು ಗುರುತಿಸಲಾಗಿದೆ, ಹಾಗೂ ಅವರ ಮೇಲೆ ದೌರ್ಜನ್ಯ ನಡೆದಿದ್ದರೂ ಸಹ ಅವರ ಗುರುತನ್ನು ಮರೆಮಾಚದೆ ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ ಎಂದು ಮಕ್ಕಳ ಕಲ್ಯಾಣ ಆಯೋಗ ಅಸಮಾಧಾನಗೊಂಡಿದೆ.

ಮುಂಬೈ ನಿವಾಸಿಯೊಬ್ಬರು ನೀಡಿರುವ ದೂರಿನ ಮೇಲೆ ಮಕ್ಕಳ ಹಕ್ಕು ಆಯೋಗವು ರಾಹುಲ್ ಗಾಂಧಿ ಹಾಗೂ ಟ್ವಿಟ್ಟರ್‌ ಸಂಸ್ಥೆಗೂ ನೊಟೀಸ್ ನೀಡಿದ್ದು, 10 ದಿನಗಳ ಒಳಗಾಗಿ ನೊಟೀಸ್‌ಗೆ ಉತ್ತರಿಸುವಂತೆ ಗಡುವು ನೀಡಿದೆ.

Rahul Gandhi gets notice from child rights body

9400ಕ್ಕೂ ಅಧಿಕ ಶೇರ್ ಆಗಿದ್ದ ಈ ವಿಡಿಯೋ ಅನ್ನು ರಾಹುಲ್ ಗಾಂಧಿ ಅವರು ಜೂನ್ 15ರಂದು ಟ್ವೀಟ್ ಮಾಡಿದ್ದರು. ಇದೇ ವಿಡಿಯೋವನ್ನು ಗುಜರಾತ್ ಶಾಸಕ ಜಿಗ್ನೇಶ್ ಮೆವಾನಿ ಸಹ ಟ್ವೀಟ್ ಮಾಡಿದ್ದರು.

ರಾಹುಲ್ ಗಾಂಧಿಗೆ ನೀಡಲಾಗಿರುವ ನೊಟೀಸ್‌ ಬಗ್ಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಕಾಂಗ್ರೆಸ್ ಮುಖಂಡ ಸಂಜಯ್ ನಿರುಪಮ್ , 'ನೊಟೀಸ್ ಅನ್ನು ರಾಹುಲ್ ಗಾಂಧಿಗೆ ಅಲ್ಲ ಮಹಾರಾಷ್ಟ್ರದ ಮುಖ್ಯಮಂತ್ರಿಗೆ ಕಳುಹಿಸಬೇಕು, ದಲಿತ ಮಕ್ಕಳನ್ನು ರಕ್ಷಿಸುವ ಜವಾಬ್ದಾರಿಯನ್ನು ಅವರು ಮರೆತಿದ್ದಾರೆ' ಎಂದು ಹರಿಹಾಯ್ದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+