ಗುಜರಾತ್ ನಲ್ಲಿ ಠುಸ್ ಆದ ರಾಹುಲ್ ಗಾಂಧಿಯ 'ಗಬ್ಬರ್ ಸಿಂಗ್ ಟ್ಯಾಕ್ಸ್'

Posted By:
Subscribe to Oneindia Kannada
   ಗುಜರಾತ್ ನಲ್ಲಿ ಠುಸ್ ಆದ ರಾಹುಲ್ ಗಾಂಧಿಯ 'ಗಬ್ಬರ್ ಸಿಂಗ್ ಟ್ಯಾಕ್ಸ್ | Oneindia Kannada

   ಟ್ವೆಂಟಿ20 ಮ್ಯಾಚ್ ನಲ್ಲಿ ಕೊನೆಯ ಬಾಲ್ ನಲ್ಲಿ ಒಂದು ರನ್ನಿನಿಂದ ಸೋತರೂ, ಸೋಲು ಸೋಲೇ.. ಅದೇ ರೀತಿ ಗುಜರಾತ್ ನಲ್ಲಿ ಕಾಂಗ್ರೆಸ್ 77 ಸ್ಥಾನ ಗೆದ್ದರೂ, 99 ಸ್ಥಾನ ಗೆದ್ದಿರುವ ಬಿಜೆಪಿಯೇ ಸರಕಾರ ರಚಿಸುವುದು. ಕಳೆದ ಬಾರಿ ಗೆದ್ದದ್ದು,ಈ ಬಾರಿ ಗೆದ್ದದ್ದು, ವೋಟ್ ಶೇರ್ ಎಲ್ಲಾ ನಂತರದ ಲೆಕ್ಕಾಚಾರ.

   ನಾವು ಸೋತಿಲ್ಲ, ಹೋರಾಟ ಬಿಡಲ್ಲ : ರಮ್ಯಾ ಟುವ್ವಿಟುವ್ವಿ

   ಗುಜರಾತ್ ವಿಧಾನಸಭೆ ಚುನಾವಣೆ 2017
   ಪಕ್ಷ W 2012
   ಬಿಜೆಪಿ 99 115
   ಕಾಂಗ್ರೆಸ್ 77 61
   ಜಿಪಿಪಿ 0 2
   ಎನ್‌ಸಿಪಿ 1 2
   ಇತರೆ 5 2

   ಸರಕು ಮತ್ತು ಸೇವಾ ತೆರಿಗೆ, ಅಪನಗದೀಕರಣ ವಿಚಾರವನ್ನು ಇಟ್ಟುಕೊಂಡು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ವ್ಯಾಪಾರಿಗಳಿಗೆ ನರೇಂದ್ರ ಮೋದಿ ಸರಕಾರ ತೊಂದರೆ ಕೊಡುತ್ತಿದೆ ಎಂದು ಗುಜರಾತ್ ಚುನಾವಣಾ ಪ್ರಚಾರದ ವೇಳೆ , ಸಾರ್ವಜನಿಕರಿಂದ ಶಿಳ್ಳೆ, ಚಪ್ಪಾಳೆಯ ಮೇಲೆ ಚಪ್ಪಾಳೆ ಗಿಟ್ಟಿಸಿಕೊಂಡರು. ಆದರೆ ಚುನಾವಣೆಯ ದಿನ, ಇದು ವೋಟ್ ಆಗಿ ಪರಿವರ್ತನೆಗೊಂಡಿತಾ?

   ಸೋತು ಗೆದ್ದ ಕಾಂಗ್ರೆಸ್, ಗುಜರಾತ್ ನಲ್ಲಿ ಹೆಚ್ಚಿದ 'ಕೈ' ಮತಗಳಿಕೆ

   ಜಿಎಸ್ಟಿಯನ್ನು ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ವ್ಯಾಖ್ಯಾನಿಸಿದ್ದ ರಾಹುಲ್ ಗಾಂಧಿ, ಇದೇ ವಿಚಾರವನ್ನು ಮುಂದಿಟ್ಟುಕೊಂಡು ಚುನಾವಣಾ ಸಭೆಯಲ್ಲಿ ಮೈಲೇಜ್ ಗಳಿಸುತ್ತಿರುವುದನ್ನು ಅರಿತ ಕೇಂದ್ರ ಸರಕಾರ, ಜಿಎಸ್ಟಿಯಲ್ಲಿ ಭಾರೀ ಬದಲಾವಣೆಯನ್ನು ತಂದು ರಾಜಕೀಯ ದಾಳ ಉರುಳಿಸಿತ್ತು.

   ಗುಜರಾತ್ -ಹಿಮಾಚಲ: ಯಾರು ಗೆದ್ದರು? ಯಾರು ಬಿದ್ದರು?

   ಪ್ರಮುಖವಾಗಿ ವರ್ತಕರಿಗೆ ಇದರಿಂದ ಸಮಸ್ಯೆಯಾಗುತ್ತಿದೆ ಎಂದು ರಾಹುಲ್ ಹೇಳಿಕೆಗೆ, ಗುಜರಾತಿನ ಸೂರತ್, ರಾಜಕೋಟ್, ಅಹಮದಾಬಾದ್ ಮುಂತಾದ ನಗರ ಪ್ರದೇಶಗಳಲ್ಲಿ ವ್ಯಾಪಾರಸ್ಥರು ಧ್ವನಿಗೂಡಿಸಿದ್ದರು. ಇದು ಬಿಜೆಪಿಯ ಸ್ಟ್ರಾಂಗ್ ಬೆಲ್ಟಿಗೆ ಸಂಚಕಾರ ತಂದೊಡ್ಡಬಹುದೆಂದು ಹೇಳಲಾಗುತ್ತಿತ್ತು.

   ಗುಜರಾತ್ : 99ಕ್ಕೆ ಬಿಜೆಪಿ ಸುಸ್ತು, 80ಕ್ಕೆ ಕಾಂಗ್ರೆಸ್ ಮಸ್ತು

   ಆದರೆ, ರಾಹುಲ್ ಗಾಂಧಿಯ 'ಗಬ್ಬರ್ ಸಿಂಗ್ ಟ್ಯಾಕ್ಸ್' ಚುನಾವಣೆಯಲ್ಲಿ ಬಿಜೆಪಿಗೆ ಏನೂ ನಷ್ಟವನ್ನು ತಂದು ಕೊಡದೇ, ಮತದಾರ ಬಿಜೆಪಿಯ ಮೇಲಿನ ತನ್ನ ನಿಯತ್ತನ್ನು ಮುಂದುವರಿಸಿದ್ದಾರೆ. ನಗರ, ಪಟ್ಟಣ ಭಾಗದಲ್ಲಿ ಬಿಜೆಪಿ ಭರ್ಜರಿ ಪ್ರದರ್ಶನ ಮುಂದುವರಿಸಿದೆ.

   ಜಿಎಸ್ಟಿ, ಅಪನಗದೀಕರಣ ಮುಂತಾದ ವಿಚಾರ

   ಜಿಎಸ್ಟಿ, ಅಪನಗದೀಕರಣ ಮುಂತಾದ ವಿಚಾರ

   ಗುಜರಾತಿನ ನಗರ/ಪಟ್ಟಣ ಪ್ರದೇಶದಲ್ಲಿ ಜಿಎಸ್ಟಿ, ಅಪನಗದೀಕರಣ ಮುಂತಾದ ವಿಚಾರಗಳನ್ನು ಇಟ್ಟುಕೊಂಡು ಕಾಂಗ್ರೆಸ್ ನಡೆಸಿದ ಭರ್ಜರಿ ಪ್ರಚಾರ ವರ್ಕೌಟ್ ಆಗಲಿಲ್ಲ ಎನ್ನುವುದಕ್ಕೆ ಕೊಡಬಹುದಾದ ಉದಾರಣೆಯೆಂದರೆ, ಹೋದ ಅಸೆಂಬ್ಲಿ ಚುನಾವಣೆಗಿಂತಲೂ ಬಿಜೆಪಿ ಈ ಚುನಾವಣೆಯಲ್ಲಿ ಈ ಭಾಗದಲ್ಲಿ ತನ್ನ ಬಲ ಹೆಚ್ಚಿಸಿಕೊಂಡಿರುವುದು. (ಚಿತ್ರ : ಪಿಟಿಐ)

   73 ಸ್ಥಾನಗಳ ಪೈಕಿ ಬಿಜೆಪಿ 55 ಸ್ಥಾನದಲ್ಲಿ ಗೆದ್ದಿದೆ

   73 ಸ್ಥಾನಗಳ ಪೈಕಿ ಬಿಜೆಪಿ 55 ಸ್ಥಾನದಲ್ಲಿ ಗೆದ್ದಿದೆ

   ಗುಜರಾತಿನ ನಗರ ಪ್ರದೇಶದ ಒಟ್ಟು 73 ಸ್ಥಾನಗಳ ಪೈಕಿ ಬಿಜೆಪಿ 55 ಸ್ಥಾನದಲ್ಲಿ ಗೆದ್ದಿದೆ, ಕಾಂಗ್ರೆಸ್ 18 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಈ ಭಾಗದ ಕೆಲವೊಂದು ಕ್ಷೇತ್ರಗಳನ್ನು ಬಿಜೆಪಿ, ಕಾಂಗ್ರೆಸ್ಸಿನಿಂದ ಕಿತ್ತುಕೊಂಡಿದೆ. ವರ್ತಕರೂ ಪ್ರಮುಖವಾಗಿರುವ ಈ ಭಾಗಗಳಲ್ಲಿ ಬಿಜೆಪಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದರು. (ಚಿತ್ರ : ಪಿಟಿಐ)

   ಅಹಮದಾಬಾದ್, ಸೂರತ್, ವಡೋದರ, ರಾಜಕೋಟ್ ನಗರ

   ಅಹಮದಾಬಾದ್, ಸೂರತ್, ವಡೋದರ, ರಾಜಕೋಟ್ ನಗರ

   ಸೆಂಟ್ರಲ್ ಗುಜರಾತಿನ ಭಾಗವಾದ ಅಹಮದಾಬಾದ್, ಸೂರತ್, ವಡೋದರ, ರಾಜಕೋಟ್ ನಗರ ವ್ಯಾಪ್ತಿಗಳಲ್ಲಿ ಬರುವ 55 ಕ್ಷೇತ್ರಗಳ ಪೈಕಿ 44ಕ್ಷೇತ್ರಗಳಲ್ಲಿ ಬಿಜೆಪಿ ಜಯಸಾಧಿಸಿದೆ. 2012ರ ಅಸೆಂಬ್ಲಿ ಚುನಾವಣೆಗೆ ಹೋಲಿಸಿದರೆ, ಬಿಜೆಪಿ ಶೇ. 2ರಷ್ಟು ಹೆಚ್ಚು ಮತವನ್ನು ಈ ಭಾಗದಿಂದ ಪಡೆದುಕೊಂಡಿದೆ. (ಚಿತ್ರ : ಪಿಟಿಐ)

   ಸೂರತ್ ನಗರದ 16 ಕ್ಷೇತ್ರಗಳ ಪೈಕಿ ಬಿಜೆಪಿ 15

   ಸೂರತ್ ನಗರದ 16 ಕ್ಷೇತ್ರಗಳ ಪೈಕಿ ಬಿಜೆಪಿ 15

   ಜಿಎಸ್ಟಿಯಿಂದ ಬಿಜೆಪಿಗೆ ತೊಂದರೆಯಾಗಬಹುದು ಎಂದು ಹೇಳಲಾಗುತ್ತಿದ್ದ ಅಹಮದಾಬಾದ್, ಸೂರತ್ ಮತ್ತು ರಾಜಕೋಟ್ ನಗರಗಳ ವ್ಯಾಪ್ತಿಯಲ್ಲಿ 45ಕ್ಷೇತ್ರಗಳಿವೆ. ಅಹಮದಾಬಾದ್ ನಗರದ 21ಕ್ಷೇತ್ರಗಳಲ್ಲಿ ಬಿಜೆಪಿ 16, ಸೂರತ್ ನಗರದ 16 ಕ್ಷೇತ್ರಗಳ ಪೈಕಿ 15, ರಾಜಕೋಟ್ ನಗರದ 8 ಕ್ಷೇತ್ರಗಳ ಪೈಕಿ ಬಿಜೆಪಿ 6 ಸ್ಥಾನದಲ್ಲಿ ಜಯಭೇರಿ ಬಾರಿಸಿದೆ. (ಚಿತ್ರ : ಪಿಟಿಐ)

   ರಾಹುಲ್ ಗಾಂಧಿಯವರ ಗಬ್ಬರ್ ಸಿಂಗ್ ಟ್ಯಾಕ್ಸ್ ಠುಸ್

   ರಾಹುಲ್ ಗಾಂಧಿಯವರ ಗಬ್ಬರ್ ಸಿಂಗ್ ಟ್ಯಾಕ್ಸ್ ಠುಸ್

   ಜಿಎಸ್ಟಿ ವಿರೋಧಿ ಚಳುವಳಿ, ಬಟ್ಟೆ, ವಜ್ರದ ವ್ಯಾಪಾರಿಗಳ ಪ್ರತಿಭಟನೆ, ಪಟೀದಾರ್ ಆಂದೋಲನ ಮುಂತಾದ ವಿಚಾರಗಳು, ಕಾಂಗ್ರೆಸ್ಸಿಗೆ ಭರ್ಜರಿ ಲಾಭ ತಂದುಕೊಡುತ್ತದೆ ಎನ್ನುವ ರಾಹುಲ್ ಗಾಂಧಿ, ಹಾರ್ದಿಕ್ ಪಟೇಲ್ ಲೆಕ್ಕಾಚಾರ, ಇಲ್ಲಿ ಉಲ್ಟಾ ಹೊಡೆದಿದೆ. ರಾಹುಲ್ ಗಾಂಧಿಯವರ ಗಬ್ಬರ್ ಸಿಂಗ್ ಟ್ಯಾಕ್ಸ್ ಠುಸ್ ಆಗಿದೆ. (ಚಿತ್ರ : ಪಿಟಿಐ)

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   AICC President Rahul Gandhi's 'Gabbar Singh Tax' statement not effected BJP in Central Gujarat. During his poll campaign Rahul said, GST and demonetisation largely effected Gujarat traders. But, Gujarat’s urban voters and traders remain loyal to BJP.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ