ಭಾರತ ಜೋಡೋ ಯಾತ್ರೆ: ರಾಹುಲ್ ಗಾಂಧಿಗೆ ಈ ಬೈಕ್ ಇಷ್ಟವಾಗೋದಿಲ್ಲವಂತೆ !
ನವದೆಹಲಿ, ಡಿಸೆಂಬರ್ 28: ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ಭಾರತ ಜೋಡೋ ಯಾತ್ರೆಯಲ್ಲಿ ನಿರತವಾಗಿರುವ ರಾಹುಲ್ ಗಾಂಧಿ ಅವರು ತಮಗೆ ವಾಹನಗಳ ಕುರಿತ ಇರುವ ಕ್ರೇಜ್‌ಗೆ ಸಂಬಂಧಿಸಿದಂತೆ ಕೆಲವು ಆಸಕ್ತಿದಾಯಕ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೆಹಲಿಯಲ್ಲಿ ವಾಹನ ಚಲಾಯಿಸುವುದು ಅಷ್ಟು ಸುಲಭದ ಮಾತಲ್ಲ, ಇತ್ತೀಚಿನ ದಿನಗಳಲ್ಲಿ ಮೋಟಾರ್ ಸೈಕಲ್ ಓಡಿಸುವುದಕ್ಕಿಂತ ಸೈಕ್ಲಿಂಗ್‌ಗೆ ಹೆಚ್ಚು ಆದ್ಯತೆ ನೀಡುತ್ತಿರುವೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ನನಗೆ ಕಾರುಗಳ ಬಗ್ಗೆ ಅಷ್ಟೊಂದು ಆಸಕ್ತಿ ಇಲ್ಲವಾದರೂ ಚಲಾಯಿಸಲು ಮಾತ್ರ ಅಲ್ಪ ಪ್ರಮಾಣದ ಆಸಕ್ತಿ ಹೊಂದಿರುವೆ ಎಂದ ಅವರು ಕಾರುಗಳ ತಾಂತ್ರಿಕತೆಯ ಕುರಿತು ಶೇ.90ರಷ್ಟು ಮಾಹಿತಿ ಹೊಂದಿದ್ದರು ಸಹ ಕಾರುಗಳ ಗೀಳು ಇಲ್ಲ ಎಂದು ಹೇಳಿಕೊಂಡಿದ್ದಾರೆ.
ಸಂದರ್ಶನದ ಭಾಗವಾಗಿ ಮುಂದುವರೆದು ಮಾತನಾಡಿದ ರಾಹುಲ್ ಗಾಂಧಿ, ರಾಯಲ್ ಎನ್‌ಫೀಲ್ಡ್ ಮೋಟಾರ್ ಸೈಕಲ್‌ಗಳು ನನಗೆ ಇಷ್ಟವಾಗುವುದಿಲ್ಲ ಎಂದಿದ್ದಾರೆ. ಬೈಕ್‌ಗಳ ಬ್ರೇಕ್ ಮತ್ತು ಬ್ಯಾಲೆನ್ಸ್ಗಳ ವಿಚಾರದಲ್ಲಿ ರಾಯಲ್ ಎನಿಫೀಲ್ಡ್‌ಗಿಂತ ಯಮಹಾ ಆರ್‌ಡಿ 350 ಅನ್ನು ಇಷ್ಟಪಡುವುದಾಗಿ ರಾಹುಲ್ ಗಾಂಧಿ ಬಹಿರಂಗಪಡಿಸಿದ್ದಾರೆ.

ಈ ಬೈಕ್ ಅಂದ್ರೇ ರಾಹುಲ್ ಗಾಂಧಿಗೆ ಇಷ್ಟವಂತೆ !
ರಾಹುಲ್ ಗಾಂಧಿ ಅವರಿಗೆ ಎಪ್ರಿಲಿಯಾ ಆರ್‌ಎಸ್ 250 ನೆಚ್ಚಿನ ಬೈಕ್ ಎಂದು ಹೇಳಿಕೊಂಡಿದ್ದಾರೆ. ಲಂಡನ್‌ನಲ್ಲಿರುವಾಗ ಈ ವಾಹನವನ್ನು ಚಲಾಯಿಸುತ್ತಿದ್ದೇ ಎಂದ ಅವರು, ಇದು ನನ್ನ ಜೀವನದ ಪ್ರೀತಿಯ ಬೈಕ್ ಎಂದು ಹೇಳಿಕೊಂಡಿದ್ದರು. ತಾನು ಈ ಬೈಕ್‌ನ ಪವರ್ ಔಟ್‌ಪುಟ್‌ನಿಂದ ತಾನು ಪ್ರಭಾವಿತನಾಗಿದ್ದೆ ಎಂದು ರಾಗಾ ಬಹಿರಂಗಪಡಿಸಿದರು.
ಒಂದು ಹಂತದಲ್ಲಿ ಹಳೆಯ ಲ್ಯಾಂಬ್ರೆಟ್ಟಾದಲ್ಲಿ ಸುಂದರವಾಗಿದೆ. ಆದರೇ ಇದನ್ನು ಚಲಾಯಿಸಲು ಅತಿ ಹೆಚ್ಚು ಶ್ರಮ ಬೇಕಾಗುತ್ತದೆ ಎಂದು ಹೇಳಿದರು. ಎಲೆಕ್ಟ್ರಿಕ್ ವಾಹನಗಳ ಕುರಿತು ಮಾತನಾಡಿದ ಅವರು, ಇವಿ ಕ್ರಾಂತಿಗೆ ಅಡಿಪಾಯದ ಅಗತ್ಯವಿದೆ. ಇದಕ್ಕೆ ಮೂಲ ಅಡಿಪಾಯವೆಂದರೇ ಉತ್ತಮ ಗುಣಮಟ್ಟದ ಬ್ಯಾಟರಿಗಳು ಮತ್ತುಅವಶ್ಯಕ ಪರಿಕರಗಳು ಅವುಗಳ ಉತ್ಪಾದನೆಗೆ ಹೆಚ್ಚು ಒತ್ತು ನೀಡಬೇಕಿದೆ ಎಂದು ಹೇಳಿದರು.
ಭಾರತ್ ಜೋಡೋ ಯಾತ್ರೆಗೆ ಅಲ್ಪ ವಿರಾಮ !
ಇದುವರೆಗೆ 10 ರಾಜ್ಯಗಳ ಮೂಲಕ 2,800 ಕಿ.ಮೀ.ಗೂ ಹೆಚ್ಚು ಸಂಚರಿಸಿರುವ ಕನ್ಯಾಕುಮಾರಿ-ಕಾಶ್ಮೀರ ಯಾತ್ರೆಯು ಡಿಸೆಂಬರ್ 24 ರಂದು ದೆಹಲಿಯ ಕೆಂಪು ಕೋಟೆಯನ್ನು ತಲುಪಿದ ನಂತರ ಅಲ್ಪ ವಿರಾಮವನ್ನು ತೆಗೆದುಕೊಂಡಿದೆ. ಈ ಯಾತ್ರೆಯು ಜನವರಿ 3 ರಂದು ದೆಹಲಿಯ ಕಾಶ್ಮೀರ್ ಗೇಟ್‌ನಿಂದ ಪುನರಾರಂಭವಾಗಲಿದೆ. ಎಐಸಿಸಿಯ ಜೈರಾಮ್ ರಮೇಶ್ ನೀಡಿರುವ ಮಾಹಿತಿ ಪ್ರಕಾರ, ಭಾರತ್ ಜೋಡೋ ಯಾತ್ರೆ ಜನವರಿ 3 ರಂದು ಬೆಳಿಗ್ಗೆ 10 ಗಂಟೆಗೆ ಕಾಶ್ಮೀರ್ ಗೇಟ್‌ನಲ್ಲಿರುವ ಹನುಮಾನ್ ಮಂದಿರದಿಂದ ಪುನರಾರಂಭಗೊಂಡು ಮಧ್ಯಾಹ್ನ ಉತ್ತರ ಪ್ರದೇಶದ ಗಾಜಿಯಾಬಾದ್‌ಗೆ ಪ್ರವೇಶಿಸಲಿದೆ. ನಂತರ ಜನವರಿ 4 ರಂದು ಉತ್ತರ ಪ್ರದೇಶದ ಶಾಮ್ಲಿ ಮೂಲಕ ಹಾದು ಜನವರಿ 5 ರ ಸಂಜೆ ಪಾಣಿಪತ್‌ನ ಸನೌಲಿ ಮೂಲಕ ಹರಿಯಾಣ ಪ್ರವೇಶಿಸಲಿದೆ.












Click it and Unblock the Notifications