ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿಗ್ವಿಜಯ್ ಸಿಂಗ್ ಹೇಳಿಕೆಯನ್ನ ಕಾಂಗ್ರೆಸ್ ಪಕ್ಷ ಒಪ್ಪುವುದಿಲ್ಲ: ರಾಹುಲ್ ಗಾಂಧಿ

ದೇಶದ ಸ್ವಾತಂತ್ರ್ಯಕ್ಕಾಗಿ ನಾವು ಬ್ರಿಟಿಷರ ಜೊತೆ ಹೋರಾಟ ಮಾಡುತ್ತಿದ್ದರೆ, ಬಿಜೆಪಿ ಹಾಗೂ ಸಂಘ ಪರಿವಾರದವರು ಬ್ರಿಟಿಷರ ಜೊತೆ ಕೈಜೋಡಿಸಿದ್ದರು. ಸಂಘ ಹಾಗೂ ಬಿಜೆಪಿ ನಾಯಕರೇ ಎರಡು ದೇಶಗಳ ಪರಿಕಲ್ಪನೆಯನ್ನು ನೀಡಿದರು. ದಿಗ್ವಿಜಯ್ ಅವರ ಹೇಳಿಕೆಗೆ ಸಂಬಂಧಿಸಿದಂತೆ. ಸರ್ಜಿಕ

|
Google Oneindia Kannada News

ಜಮ್ಮು, ಜನವರಿ24: ದಿಗ್ವಿಜಯ್‌ ಸಿಂಗ್‌ ಸೇನೆಯ ಸರ್ಜಿಕಲ್‌ ಸ್ಟ್ರೈಕ್‌ಗೆ ಸಾಕ್ಷ್ಯವನ್ನು ಕೇಳುವ ಮೂಲಕ ದೊಡ್ಡ ವಿವಾದಕ್ಕೆ ಕಾರಣವಾಗಿದ್ದು, ಇದು ದಿಗ್ವಿಜಯ್ ಸಿಂಗ್ ಅವರ ವೈಯಕ್ತಿಕ ಅಭಿಪ್ರಾಯ. ಇದನ್ನು ನಾನು ಒಪ್ಪೋದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಈ ಕುರಿತು ಮಂಗಳವಾರ ರಾಹುಲ್ ಗಾಂಧಿ ಮಾತನಾಡಿ, ಸೇನೆಯ ಶೌರ್ಯದ ಬಗ್ಗೆ ಯಾವತ್ತೂ ಪ್ರಶ್ನೆ ಎತ್ತಲಿಲ್ಲ. ಸೇನೆ ಏನಾದರೂ ಮಾಡಿದರೆ ಅದಕ್ಕೆ ಪುರಾವೆ ಬೇಕಿಲ್ಲ ಎಂದು ಹೇಳಿದ್ದಾರೆ.

 'ರಾಹುಲ್‌ ಪ್ರಕಾರ ಜಿಡಿಪಿ ಎಂದರೆ ಗಾಂಧಿ, ದಿಗ್ವಿಜಯ್‌, ಪಿ. ಚಿದಂಬರಂ': ನರೋತ್ತಮ್ ವ್ಯಂಗ್ಯ 'ರಾಹುಲ್‌ ಪ್ರಕಾರ ಜಿಡಿಪಿ ಎಂದರೆ ಗಾಂಧಿ, ದಿಗ್ವಿಜಯ್‌, ಪಿ. ಚಿದಂಬರಂ': ನರೋತ್ತಮ್ ವ್ಯಂಗ್ಯ

ಇನ್ನೂ ದೇಶದ ಸ್ವಾತಂತ್ರ್ಯಕ್ಕಾಗಿ ನಾವು ಬ್ರಿಟಿಷರ ಜೊತೆ ಹೋರಾಟ ಮಾಡುತ್ತಿದ್ದರೆ, ಬಿಜೆಪಿ ಹಾಗೂ ಸಂಘ ಪರಿವಾರದವರು ಬ್ರಿಟಿಷರ ಜೊತೆ ಕೈಜೋಡಿಸಿದ್ದರು. ಸಂಘ ಹಾಗೂ ಬಿಜೆಪಿ ನಾಯಕರೇ ಎರಡು ದೇಶಗಳ ಪರಿಕಲ್ಪನೆಯನ್ನು ನೀಡಿದರು. ದಿಗ್ವಿಜಯ್ ಅವರ ಹೇಳಿಕೆಗೆ ಸಂಬಂಧಿಸಿದಂತೆ. ಸರ್ಜಿಕಲ್ ಸ್ಟ್ರೈಕ್ ಕುರಿತು ಅವರು ಹೇಳಿದ ಮಾತನ್ನು ನಾವು ಸಂಪೂರ್ಣವಾಗಿ ಒಪ್ಪುವುದಿಲ್ಲ ಎಂದಿದ್ದಾರೆ.

Rahul Gandhi Distances Himself From Digvijaya Singhs Surgical Strike Remarks

ನಮ್ಮ ಸೇನೆಯ ಮೇಲೆ ನಮಗೆ ಸಂಪೂರ್ಣ ನಂಬಿಕೆಯಿದೆ. ಸೇನೆ ಏನಾದರೂ ಮಾಡಿದರೆ ಅದಕ್ಕೆ ಪುರಾವೆ ನೀಡುವ ಅಗತ್ಯವಿಲ್ಲ. ವೈಯಕ್ತಿಕವಾಗಿ, ದಿಗ್ವಿಜಯ್‌ಜಿ ಏನು ಹೇಳಿದರೂ ಅದು ಅವರ ವೈಯಕ್ತಿಕ ಅಭಿಪ್ರಾಯ ಎಂದು ನಾನು ಹೇಳುತ್ತೇನೆ. ಕಾಂಗ್ರೆಸ್ ಪಕ್ಷವೂ ಇದನ್ನು ಒಪ್ಪುವುದಿಲ್ಲ ಎಂದಿದ್ದಾರೆ.

ನಮ್ಮ ಕಾಂಗ್ರೆಸ್ ಪಕ್ಷ ಡೆಮಾಕ್ರಟಿಕ್ ಪಕ್ಷ. ಇಲ್ಲಿ ಸರ್ವಾಧಿಕಾರ ಇಲ್ಲ. ಬೇರೆಯವರ ಧ್ವನಿಯನ್ನು ಹತ್ತಿಕ್ಕಿ ಪಕ್ಷ ನಡೆಸುವುದರಲ್ಲಿ ನಮಗೆ ನಂಬಿಕೆ ಇಲ್ಲ. ಪಕ್ಷದ ಸಿದ್ಧಾಂತಕ್ಕಿಂತ ಎಷ್ಟೇ ಭಿನ್ನವಾಗಿರಲಿ ಇಲ್ಲಿ ಜನರು ತಮ್ಮ ಅಭಿಪ್ರಾಯವನ್ನು ಹೇಳಲು ಅವಕಾಶವಿದೆ. ದಿಗ್ವಿಜಯ್ ಜಿ ಹೇಳಿದ್ದೆಲ್ಲ ಅವರ ವೈಯಕ್ತಿಕ ಅಭಿಪ್ರಾಯಗಳು, ಆದರೆ ಪಕ್ಷದ ಅಭಿಪ್ರಾಯಗಳು ಅವರ ಅಭಿಪ್ರಾಯಗಳಿಗಿಂತ ಮೇಲಿರುತ್ತವೆ.

ಪಕ್ಷದ ಒಳಗಿನ ಚರ್ಚೆಗಳಿಂದ ಪಕ್ಷದ ಅಭಿಪ್ರಾಯಗಳು ರೂಪುಗೊಳ್ಳುತ್ತವೆ. ಅವರ ಅಭಿಪ್ರಾಯಗಳು ಪಕ್ಷದ ಸಿದ್ಧಾಂತಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿವೆ ಎಂದು ನಾನು ನಿಮಗೆ ಭರವಸೆ ನೀಡಲು ಬಯಸುತ್ತೇನೆ. ಇನ್ನೂ ಬಿಜೆಪಿಯಲ್ಲಿ ಯಾವ ಚರ್ಚೆಗಳು ನಡೆಯೋದಿಲ್ಲ. ಅಲ್ಲಿ ಪ್ರಧಾನಿ ಮೋದಿ ಬೆಳಿಗ್ಗೆ ಎದ್ದು ನಿರ್ಧಾರ ತೆಗೆದುಕೊಳ್ಳುತ್ತಾರೆ, ಅದನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿ ಸಮಯದಲ್ಲಿ ಹೀಗೆ ಮಾಡಿದ್ದರು. ಎಲ್ಲಿ ಚರ್ಚೆಯಾಗುತ್ತದೋ ಅಲ್ಲಿ ಜನ ಕೂಡ ಅಸಂಬದ್ಧವಾಗಿ ಮಾತನಾಡುತ್ತಾರೆ. ಪಕ್ಷದ ಹಿರಿಯ ನಾಯಕರೊಬ್ಬರು ಈ ಮಾತು ಹೇಳಿದ್ದಕ್ಕೆ ನನಗೆ ಬೇಸರವಾಗಿದೆ ಆದರೆ ದಿಗ್ವಿಜಯ್ ಜೀ ಅವರು ಅಸಂಬದ್ಧ ಮಾತನಾಡಿದ್ದಾರೆ. ಯಾತ್ರೆ ಇದುವರೆಗೆ ಸಾಧಿಸಿದ್ದು ಅವರ ಹೇಳಿಕೆಯಿಂದ ಕೊನೆಯಾಗುವುದಿಲ್ಲ ಎಂದಿದ್ದಾರೆ.

English summary
Congress party does not agree with Digvijay Singh's statement said Congress leader Rahul Gandhi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X