Rahul Gandhi: ಕರ್ನಾಟಕ ಮಾತ್ರವಲ್ಲ ಹರ್ಯಾಣ ಚುನಾವಣೆಯಲ್ಲೂ ಮತಗಳ್ಳತನ- ರಾಹುಲ್ ಗಾಂಧಿ ಗಂಭೀರ ಆರೋಪ
ಕೇಂದ್ರ ಚುನಾವಣಾ ಆಯೋಗ ಹಾಗೂ ರಾಹುಲ್ ಗಾಂಧಿ ನಡುವೆ ಶುರುವಾಗಿರುವ 'ಮತಗಳ್ಳತನ' ಯುದ್ಧ ಮತ್ತೆ ಧಗಧಗಿಸಲು ಶುರು ಮಾಡಿದೆ. ಕರ್ನಾಟಕದಲ್ಲಿ ನಡೆದ ಲೋಕಸಭಾ ಚುನಾವಣೆ ಸಮಯದಲ್ಲಿ ಮತಗಳ್ಳತನ ಆಗಿದೆ ಎಂದು ಕೆಲವು ತಿಂಗಳ ಹಿಂದಷ್ಟೇ ಆರೋಪವನ್ನು ಮಾಡಿದ್ದ ರಾಹುಲ್ ಗಾಂಧಿ ಅವರು ಇದೀಗ, ಕರ್ನಾಟಕ ರೀತಿಯಲ್ಲೇ ಹರ್ಯಾಣ ಚುನಾವಣೆಯಲ್ಲಿ ಕೂಡ ಮತ ಕಳ್ಳತನ ಆಗಿದೆ ಎಂದು ಆರೋಪಿಸುವ ಮೂಲಕ ಸಂಚಲನ ಸೃಷ್ಟಿ ಮಾಡಿದ್ದಾರೆ. ಹೀಗೆ, ಬಿಹಾರ ಎಲೆಕ್ಷನ್ ಹೊತ್ತಲ್ಲೇ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿರುವುದು ಸಂಚಲನ ಸೃಷ್ಟಿಸಿದೆ.
ಬಿಹಾರ ವಿಧಾನಸಭೆ ಚುನಾವಣೆಗೆ ಕೌಂಟ್‌ಡೌನ್ ಶುರುವಾಗಿದ್ದು, ಇನ್ನೇನು ಕೆಲವೇ ಗಂಟೆಗಳಲ್ಲಿ ಬಿಹಾರ ವಿಧಾನಸಭೆ ಚುನಾವಣೆಗೆ ಮೊದಲ ಹಂತದಲ್ಲಿ ಮತದಾನ ಆರಂಭವಾಗಲಿದೆ. ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡಿರುವ ಸಮಯದಲ್ಲೇ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ 'ಮತಗಳ್ಳತನ' ಬಗ್ಗೆ ಗಂಭೀರವಾದ ಆರೋಪ ಮಾಡಿದ್ದಾರೆ. ಚುನಾವಣಾ ಆಯೋಗ & ಬಿಜೆಪಿ ಪಕ್ಷದ ವಿರುದ್ಧ ಈ ಆರೋಪ ಮಾಡಿರುವ ರಾಹುಲ್ ಗಾಂಧಿ, ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ 'ಮತಗಳ್ಳತನ' ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

25 ಲಕ್ಷ ಮತಗಳ ಕಳವು ಆರೋಪ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಿಢೀರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಹುಲ್ ಗಾಂಧಿ, ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಕೂಡ ಮತಗಳ್ಳತನ ಆಗಿದೆ ಎಂದು ಆರೋಪಿಸಿದರು. ಅಲ್ಲದೆ ಹರಿಯಾಣದ ಚುನಾವಣೆಯಲ್ಲಿ 5.21 ಲಕ್ಷ ನಕಲಿ ಮತದಾರರು ಸೇರಿ 93,174 ಅಮಾನ್ಯ ಮತದಾರರು ಹಾಗೂ 19.26 ಲಕ್ಷ ಬೃಹತ್ ಮತದಾರರು ಒಟ್ಟುಗೂಡಿ 25 ಲಕ್ಷ ಮತಗಳನ್ನು ಕಳವು ಮಾಡಿದ್ದಾರೆ ಎಂದು ಗಂಭೀರವಾದ ಆರೋಪ ಮಾಡಿದ್ದಾರೆ. ಇದೇ ಸಮಯದಲ್ಲಿ ಸಿಸಿ ಕ್ಯಾಮೆರಾ ದಾಖಲೆ ವಿಚಾರವಾಗಿ ಕೂಡ ಮತ್ತೊಂದು ಗಂಭೀರ ಆರೋಪ ಹೊರಿಸಿದ್ದಾರೆ.
2 ಬೂತ್‌ಗಳಲ್ಲಿ 223 ಬಾರಿ ಮತ?
ಅಂದಹಾಗೆ ಹರಿಯಾಣ ಚುನಾವಣೆಯ ಮತದಾನದ ಸಮಯದಲ್ಲಿ 2 ಬೂತ್‌ಗಳಲ್ಲಿ ಒಟ್ಟಾರೆ 223 ಬಾರಿ ಮತ ಚಲಾಯಿಸಿದ ಮಹಿಳೆ ಉದಾಹರಣೆ ನೀಡುತ್ತಿರುವುದಾಗಿ ರಾಹುಲ್ ತಿಳಿಸಿದರು. ಇದೇ ಸಮಯದಲ್ಲಿ ಒಂದೇ ಫೋಟೋ ಬಳಸಿ 10 ಬೂತ್‌ಗಳಲ್ಲಿ ಒಟ್ಟು 22 ಬಾರಿ ಮತ ಚಲಾಯಿಸಿರುವ ಬ್ರೆಜಿಲ್ ಮಾದರಿ ಉದಾಹರಣೆಯಾಗಿ ನೀಡಿದರು. ಮತ್ತೊಂದು ಕಡೆ ಚುನಾವಣೆ ಆಯೋಗ ಸಿಸಿಟಿವಿ ದಾಖಲೆಗಳನ್ನು ಈ ಕಾರಣಕ್ಕೆ ನಾಶಪಡಿಸುತ್ತದೆ ಎಂಬ ಗಂಭೀರ ಆರೋಪವನ್ನು ಕೂಡ ಇದೀಗ ಹೊರಿಸಿದ್ದಾರೆ. ಬಿಹಾರ ಚುನಾವಣೆ ಸಮಯದಲ್ಲೇ ರಾಹುಲ್ ಮಾಡಿರುವ ಈ ಆರೋಪ ಇದೀಗ ಸಂಚಲನ ಸೃಷ್ಟಿಸಿದೆ.












Click it and Unblock the Notifications