2019 ರಲ್ಲಿ ರಫೇಲ್ ಜೆಟ್ ಭಾರತಕ್ಕೆ: ಖಚಿತಪಡಿಸಿದ ಡಸಾಲ್ಟ್

ಪ್ಯಾರಿಸ್, ಅಕ್ಟೋಬರ್ 16: ಎಲ್ಲಾ ವಿವಾದದ ನಡುವಲ್ಲೇ 2019 ರಿಂದ ರಫೇಲ್ ಜೆಟ್ ಭಾರತಕ್ಕೆ ಬರಲಿದೆ ಎಂದು ರಫೇಲ್ ಜೆಟ್ ತಯಾರಕ ಕಂಪನಿ ಫ್ರಾನ್ಸ್ ನ ಡಸಾಲ್ಟ್ ಹೇಳಿದೆ.

ರಫೇಲ್ ಡೀಲ್ ಗೆ ಕುರಿತಂತೆ ಈಗಾಗಲೇ ಸಾಕಷ್ಟು ವಿವಾದಗಳು ಎದ್ದಿದ್ದು, ಇದನ್ನು ಹಗರಣ ಎಂದೇ ವಿರೋಧ ಪಕ್ಷ ಕಾಂಗ್ರೆಸ್ ವ್ಯಾಖ್ಯಾನಿಸುತ್ತಿದೆ. ಫ್ರಾನ್ ನಿಂದ ಯುದ್ಧವಿಮಾನ ಖರೀದಿಗಾಗಿ ಮಾಡಿಕೊಂಡ ಒಪ್ಪಂದದಲ್ಲಿ ಭಾರೀ ಪ್ರಮಾಣದ ಅಕ್ರಮ ನಡೆದಿದೆ ಎಂಬುದು ಕಾಂಗ್ರೆಸ್ ಆರೋಪ.

ರಫೇಲ್ ಯುದ್ಧ ವಿಮಾನಗಳ ಬಿಡಿಭಾಗಗಳ ತಯಾರಿಕೆಗೆ ಡಸಾಲ್ಟ್ ಕಂಪನಿಯು ತನ್ನ ಪಾಲಿದಾರ ಕಂಪನಿಯನ್ನಾಗಿ ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಅನ್ನು ಆಯ್ಕೆ ಮಾಡಿಕೊಂಡಿದೆ. ಆದರೆ ರಿಲಯನ್ಸ್ ಅನ್ನು ಆಯ್ಕೆ ಮಾಡಿಕೊಳ್ಳುವುದು ಡಸಾಲ್ಟ್ ನಿರ್ಧಾರವಲ್ಲ. ಬದಲಾಗಿ ರಿಲಯನ್ಸ್ ಅನ್ನೇ ಆಯ್ಕೆ ಮಾಡಿಕೊಳ್ಳುವಂತೆ ಅದರ ಮೇಲೆ ಒತ್ತಡ ಹೇರಲಾಗಿತ್ತು ಎಂದು ಕಾಂಗ್ರೆಸ್ ಆರೋಪಿಸಿತ್ತು.

Rafale jets will be delivered to India by 2019

ಇತ್ತೀಚೆಗಷ್ಟೇ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫ್ರಾನ್ಸ್ ಗೆ ಭೇಟಿ ನೀಡಿದ್ದಲ್ಲದೆ, ರಫೇಲ್ ಯುದ್ಧ ವಿಮಾನ ತಯಾರಾಗುತ್ತಿರುವ ಡಸಾಲ್ಟ್ ಕಾರ್ಖಾನೆಗೂ ತೆರಳಿದ್ದರು. ರಫೇಲ್ ಡೀಲ್ ವಿರುದ್ಧ ಎದ್ದಿರುವ ವಿವಾದವನ್ನು ಮುಚ್ಚಿಹಾಕುವುದಕ್ಕೇ ನಿರ್ಮಲಾ ಸೀತಾರಾಮನ್ ಅಲ್ಲಿಗೆ ತೆರಳಿದ್ದಾರೆ. ಇಲ್ಲವೆಂದರೆ ಈಗ ಫ್ರಾನ್ಸ್ ಗೆ ತೆರಳುವ ತುರ್ತು ಏನಿತ್ತು ಎಂದು ಕಾಂಗ್ರೆಸ್ ಪ್ರಶ್ನಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+