ಬಾಹುಬಲಿ-2 ಚಿತ್ರ ತಂಡಕ್ಕೂ ಜನಾಂಗೀಯ ದ್ವೇಷದ ಬಿಸಿ?

ದುಬೈನಲ್ಲಿ ಚಿತ್ರದ ಪ್ರೊಮೋಷನ್ ಕಾರ್ಯಕ್ರಮ ಮುಗಿಸಿಕೊಂಡು ಭಾರತಕ್ಕೆ ಹಿಂದಿರುಗುವಾಗ ಅನವಶ್ಯಕವಾಗಿ ಕಿರುಕುಳ ನೀಡಿದ ಆರೋಪ ಮಾಡಿದ ಚಿತ್ರದ ನಿರ್ಮಾಪಕ ಶೋಬು.

ಹೈದರಾಬಾದ್, ಏಪ್ರಿಲ್ 26: ಪ್ರತಿಷ್ಠಿತ ವಿಮಾನ ಯಾನ ಸೇವಾ ಸಂಸ್ಥೆಯಾದ ಎಮಿರೇಟ್ಸ್ ನ ವಿಮಾನವೊಂದರಲ್ಲಿ ಬಾಹುಬಲಿ- 2 ಚಿತ್ರತಂಡವನ್ನು ಹೀನಾಯವಾಗಿ ನಡೆಸಿಕೊಳ್ಳುವ ಮೂಲಕ ಅಲ್ಲಿನ ಸಿಬ್ಬಂದಿ ಜನಾಂಗೀಯ ದ್ವೇಷವನ್ನು ವ್ಯಕ್ತಪಡಿಸಿದ್ದಾರೆಂದು 'ಬಾಹುಬಲಿ: ದ ಕಂಕ್ಲೂಷನ್' ಚಿತ್ರದ ನಿರ್ಮಾಪಕ ಶೋಬು ಯರ್ಲಾಗಡ್ಡ ಆರೋಪಿಸಿದ್ದಾರೆ.

ಟ್ವಿಟರ್ ನಲ್ಲಿ ಈ ಬಗ್ಗೆ ಹೇಳಿಕೊಂಡಿರುವ ಅವರು, ''ಕಳೆದ ರಾತ್ರಿ (ಏಪ್ರಿಲ್ 25) ತಾವು ಹಾಗೂ ಬಾಹುಬಲಿ-2 ಚಿತ್ರತಂಡ ದುಬೈನಲ್ಲಿ ಚಿತ್ರದ ಪ್ರೊಮೇಷನ್ ಕಾರ್ಯಕ್ರಮ ನಡೆಸಿಕೊಟ್ಟು, ಭಾರತಕ್ಕೆ ಹಿಂದಿರುಗುತ್ತಿತ್ತು. ಆಗ, ಇಕೆ526 ವಿಮಾನದಲ್ಲಿ ಎಮಿರೇಟ್ಸ್ ಕಂಪನಿಯ ಸಿಬ್ಬಂದಿ ನಮ್ಮ ತಂಡದೊಂದಿಗೆ ಅನುಚಿತವಾಗಿ ವರ್ತಿಸಿದರು. ಅನವಶ್ಯಕವಾಗಿ ಕಿರುಕುಳ ಕೊಟ್ಟರು'' ಎಂದು ಆರೋಪಿಸಿದ್ದಾರೆ.[ಪೈಲಟ್ ನ ಜನಾಂಗೀಯ ಬೈಗಳಕ್ಕೆ ಭಜ್ಜಿ ಕಪಾಳಮೋಕ್ಷ]

ಮತ್ತೊಂದು ಟ್ವೀಟ್ ನಲ್ಲಿ, ''ನಾನು ಈ ಹಿಂದೆಯೂ ಎಮಿರೇಟ್ಸ್ ನಲ್ಲಿ ಹಲವಾರು ಬಾರಿ ಪ್ರಯಾಣ ಮಾಡಿದ್ದರೂ ಇಂಥದ್ದೊಂದು ಆಕ್ಷೇಪಾರ್ಹ ನಡವಳಿಕೆ ಅಲ್ಲಿನ ಸಿಬ್ಬಂದಿಯಿಂದ ವ್ಯಕ್ತವಾಗುತ್ತಿರುವುದು ಇದೇ ಮೊದಲು'' ಎಂದು ಶೋಬು ಹೇಳಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+