ಮೇಲ್ವರ್ಗದವರಿಗೂ ಉದ್ಯೋಗದಲ್ಲಿ ಮೀಸಲಾತಿ, ಯಾರು ಇದಕ್ಕೆ ಅರ್ಹರು?

Recommended Video

      Lok Sabha elections 2019: ಚುನಾವಣೆಗೂ ಮುನ್ನ ವಿಪಕ್ಷಗಳಿಗೆ ಭಾರೀ ಆಘಾತ! | Oneindia Kannada

      ನವದೆಹಲಿ, ಜನವರಿ 07: ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಸಮುದಾಯವರಿಗೂ ಸರ್ಕಾರಿ ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿ ನೀಡಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಮೂಲಕ ಲೋಕಸಭೆ ಚುನಾವಣೆಗೂ ಮುನ್ನ ಮೋದಿ ಸರ್ಕಾರವು ಮಹತ್ವದ ಹೆಜ್ಜೆ
      ಇಟ್ಟಿದೆ.

      ಮೇಲ್ಜಾತಿಯಲ್ಲಿರುವ ಬಡವರಿಗೆ ಮೀಸಲಾತಿ ಭಾಗ್ಯ ದೊರೆಯಲಿದೆ. ಸಂವಿಧಾನದ 15 ಹಾಗೂ 16ನೇ ಪರಿಚ್ಛೇದ ತಿದ್ದುಪಡಿಗೆ ಕೇಂದ್ರ ಮುಂದಾಗಿದೆ. ಈ ಸಂಬಂಧ ತಿದ್ದುಪಡಿ ಮಸೂದೆ ಮಂಡಿಸಲಿದೆ. ಜಾತಿ ಆಧಾರಿತ ಮೀಸಲಾತಿಯನ್ನು ಶೇ.50ಕ್ಕೆ ಮಿತಿಗೊಳಿಸಿ ಕೇಂದ್ರ ಸರ್ಕಾರ ಆದೇಶಿಸಿತ್ತು. ಈಗ ಈ ಮೀಸಲಾತಿ ಪ್ರಮಾಣ ಶೇ10ರಷ್ಟು ಹೆಚ್ಚಳವಾಗಲಿದೆ.

      Quota for poor among upper caste: Are you eligible? Check here

      ಯಾರು ಈ ಮೀಸಲಾತಿ ಸೌಲಭ್ಯ ಪಡೆಯಲು ಅರ್ಹರು?:

      * ವಾರ್ಷಿಕವಾಗಿ 8 ಲಕ್ಷ ರುಗಿಂತ ಕಡಿಮೆ ಮೊತ್ತದ ಆದಾಯ ಹೊಂದಿದವರು.
      * 5 ಎಕರೆಗಿಂತ ಕಡಿಮೆ ಪ್ರಮಾಣದ ಕೃಷಿಭೂಮಿಯನ್ನು ಹೊಂದಿದವರು.
      * 1,000 ಚದರ ಅಡಿಗಿಂತಲೂ ಕಡಿಮೆ ವಿಸ್ತೀರ್ಣದ ವಸರಿ ಗೃಹಯುಳ್ಳವರು.
      * ಮುನ್ಸಿಪಾಲಿಟಿಯಿಂದ ಮಾನ್ಯತೆ ಪಡೆದ 100 ಯಾರ್ಡ್ ಗಳ ವಸತಿ ಯೋಗ್ಯ ನಿವೇಶನ ಹೊಂದಿರುವವರು. ನಿಗದಿಯಾಗದ ಪಾಲಿಕೆಯ ವ್ಯಾಪ್ತಿಯಲ್ಲಿ 209 ಯಾರ್ಡ್ ಗಿಂತ ಹೆಚ್ಚು ವಸತಿ ಸ್ಥಳ ಹೊಂದಿರಬಾರದು.

      ಯಾರು ಅರ್ಹರು?:
      ಬ್ರಾಹ್ಮಣ, ರಜಪೂತ್, ಠಾಕೂರ್, ಬನಿಯಾ ,ಪಟೇಲ್, ಗುಜ್ಜರ್ ಹಾಗೂ ಜಾಟ್ ಜಾತಿಗಳಿಗೆ ಮೀಸಲಾತಿ ಸೌಲಭ್ಯ ಸಿಗಲಿದೆ.

      ಕೇಂದ್ರ ಸರ್ಕಾರದ ಮೀಸಲಾತಿ: 60%
      ಹಿಂದುಳಿದ ವರ್ಗ : 27%; ಪರಿಶಿಷ್ಟ ಜಾತಿ : 15%; ಪರಿಶಿಷ್ಟ ಪಂಗಡ : 7.5%; ಆರ್ಥಿಕವಾಗಿ ಹಿಂದುಳಿದ ವರ್ಗ : 10%

      ಕರ್ನಾಟಕದಲ್ಲಿ ಮೀಸಲಾತಿ : 50%
      ಪರಿಶಿಷ್ಟ ಜಾತಿ 15%; ಪರಿಶಿಷ್ಟ ಪಂಗಡ 3%; ಹಿಂದುಳಿದ ವರ್ಗ 32%

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+