Python Attack Video: ಬಯಲು ಶೌಚಕ್ಕೆ ಹೋದವನ ಕತ್ತಿಗೆ ಸುತ್ತಿಕೊಂಡ ಹೆಬ್ಬಾವು: ವಿಡಿಯೋ ವೈರಲ್
ಬಯಲು ಶೌಚಕ್ಕೆ ಹೋದವನ ಕತ್ತಿಗೆಗೆ ಹೆಬ್ಬಾವೊಂದು ಸುತ್ತಿಕೊಂಡ ಭಯಾನಕ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಮಧ್ಯಪ್ರದೇಶದ ಜಬಲ್ಪುರದಲ್ಲಿ ಮಲ ವಿಸರ್ಜನೆಗೆಂದು ಕಾಡಿಗೆ ತೆರಳಿದ್ದ ವ್ಯಕ್ತಿಯೊಬ್ಬನಿಗೆ ಹೆಬ್ಬಾವೊಂದು ಅಟ್ಯಾಕ್ ಮಾಡಿದೆ. ವ್ಯಕ್ತಿಯ ಕುತ್ತಿಗೆಗೆ ಸುತ್ತಿಕೊಂಡ ಹೆಬ್ಬಾವು ಆತನನನ್ನು ನುಂಗಲು ಪ್ರಯತ್ನಿಸಿದೆ. ಹೀಗಾಗಿ ಭಯಗೊಂಡ ವ್ಯಕ್ತಿ ಹೆಬ್ಬಾವಿನ ಬಾಯಿಯನ್ನು ತನ್ನ ಪೂರ್ಣ ಬಲದಿಂದ ಹಿಡಿದುಕೊಂಡಿದ್ದಾನೆ.

ಇದೇ ವೇಳೆ ತನ್ನವರನ್ನು ಕೂಗಿ ಕರೆದಿದ್ದಾನೆ. ನಂತರ ವ್ಯಕ್ತಿಗೆ ಕೂಗಲು ಸಾಧ್ಯವೇ ಆಗಿಲ್ಲ. ಅದೃಷ್ಟವಶಾತ್ ವ್ಯಕ್ತಿ ಕೂಗಿಕೊಂಡಿರುವುದನ್ನು ಕೇಳಿಸಿಕೊಂಡ ಜನ ಓಡೋಡಿ ಬಂದಿದ್ದಾರೆ. ಕಟ್ಟಿಗೆ ಕೊಡಲಿ ತಂದ ಜನ ಹಾವನ್ನು ಬಿಡಿಸಲು ಪ್ರಯತ್ನಿಸಿದ್ದಾರೆ. ಆದರೆ ಹಾವು ವ್ಯಕ್ತಿಯನ್ನು ಬಿಡುವುದಿಲ್ಲ.
ಎಷ್ಟೇ ಪ್ರಯತ್ನ ಪಟ್ಟರೂ ಹಾವು ವ್ಯಕ್ತಿಯ ಕುತ್ತಿಗೆಗೆ ಸುತ್ತುವರಿದುಕೊಂಡಿತ್ತು. ಸ್ಥಳದಲ್ಲಿ ಹಲವರು ಹೆಬ್ಬಾವಿನಿಂದ ಆತನನ್ನು ಬಿಡಿಸಲು ಹರಸಾಹಸ ಪಡುತ್ತಿರುವುದು ದೃಶ್ಯದಲ್ಲಿ ಕಂಡು ಬಂದಿದೆ.
मध्य प्रदेश के जबलपुर में शौच करने बैठे एक शख्स पर 13 फुट लंबे अजगर ने अटैक कर दिया। अजगर ने शख्स की गर्दन को बुरी तरह जकड़ लिया और उसे निगलने की कोशिश करने लगा। कैसे बची शख्स की जान? खौफनाक VIDEO...#viralvideo #viralnews #MPNews #MadhyaPradeshNews pic.twitter.com/OtrEaCDgqW
— Krishna Bihari Singh (@KrishnaBihariS2) July 21, 2024
ವ್ಯಕ್ತಿ ಮೇಲೆ ದಾಳಿ ಮಾಡಿದ 15 ಅಡಿ ಉದ್ದದ ಹೆಬ್ಬಾವು!
ಜಬಲ್ಪುರ ಜಿಲ್ಲೆಯ ಕಲ್ಯಾಣಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಜುಲೈ 21ರ ಭಾನುವಾರದಂದು ರಾಮ್ ಸಹಾಯ್ ಎಂಬುವವರು ಮಲವಿಸರ್ಜನೆಗೆಂದು ಕಾಡಿಗೆ ಹೋಗಿದ್ದರು. ಆಗ ಅಲ್ಲಿ ದೊಡ್ಡ ಹೆಬ್ಬಾವೊಂದು ಅವರ ಮೇಲೆ ದಾಳಿ ಮಾಡಿತು. ಅವರ ಕುತ್ತಿಗೆಯನ್ನು ಸುತ್ತಿಕೊಂಡ ಹಾವು ಅವರನ್ನು ನುಂಗಲು ಪ್ರಯತ್ನಿಸಿತು. ಈ ಹೆಬ್ಬಾವು ಸುಮಾರು 15 ಅಡಿ ಉದ್ದವಿತ್ತು ಎನ್ನಲಾಗುತ್ತಿದೆ.

ತನ್ನನ್ನು ರಕ್ಷಿಸಿಕೊಳ್ಳಲು ರಾಮ್ ಸಹಾಯ್ ಹೆಬ್ಬಾವಿನ ಬಾಯಿಯನ್ನು ಹಿಡಿದು ಜೋರಾಗಿ ಕೂಗಲು ಪ್ರಾರಂಭಿಸಿದರು. ಆತನ ಧ್ವನಿಯನ್ನು ಕೇಳಿದ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ರಾಮ್ ಸಹಾಯ್‌ನನ್ನು ಹೆಬ್ಬಾವಿನಿಂದ ಬಿಡಿಸಲು ಪ್ರಯತ್ನಿಸಿದರು.
ವ್ಯಕ್ತಿಯನ್ನು ಬಿಡಿಸಲು ಗ್ರಾಮಸ್ಥರು ಮೊದಲು ದೊಣ್ಣೆಯಿಂದ ಹೆಬ್ಬಾವಿನ ಮೇಲೆ ದಾಳಿ ನಡೆಸಿದ್ದಾರೆ. ಆದರೆ ಹೆಬ್ಬಾವು ರಾಮ್ ಸಹಾಯ್ ಅವರನ್ನು ಬಿಡಲಿಲ್ಲ. ಇದಾದ ನಂತರ ಗ್ರಾಮಸ್ಥರು ಕೊಡಲಿ ಮತ್ತು ದೊಣ್ಣೆಗಳಿಂದ ಹೆಬ್ಬಾವನ್ನು ಹೊಡೆದು ಕೊಂದಿದ್ದಾರೆ.
ಹೆಬ್ಬಾವನ್ನು ಕೊಂದು ರಾಮ್ ಸಹಾಯ್ ಅವರ ಪ್ರಾಣ ಉಳಿಸಲಾಗಿದೆ. ಈ ಸಂಪೂರ್ಣ ಘಟನೆಯನ್ನು ಗ್ರಾಮಸ್ಥರು ವಿಡಿಯೋ ಕೂಡ ಮಾಡಿದ್ದು, ಇದೀಗ ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದೇನು?
ಮಳೆಗಾಲವಾದ್ದರಿಂದ ಹಾವುಗಳು ಆಹಾರ ಹುಡುಕಿಕೊಂಡು ಕಾಡಿನಿಂದ ನಾಡಿಗೆ ಬರುವುದು ಸಹಜ. ಹಾಗೇ ಹೆಬ್ಬಾವು ವ್ಯಕ್ತಿ ಮೇಲೆ ದಾಳಿ ಮಾಡಿದೆ. ಯಾರ ಮೇಲಾದರೂ ಕಾಡು ಪ್ರಾಣಿಗಳು ದಾಳಿ ಮಾಡಿದರೆ ಅಂತಹ ವ್ಯಕ್ತಿಗೆ ವನ್ಯಜೀವಿ ಕಾಯ್ದೆಯ ಸೆಕ್ಷನ್ 11 ರ ಅಡಿಯಲ್ಲಿ ಪರಿಹಾರ ನೀಡಲಾಗುತ್ತದೆ.
ಇಲ್ಲಿ ವ್ಯಕ್ತಿಯೊಬ್ಬನ ಜೀವ ಉಳಿಸಲು ಸ್ಥಳೀಯರು ಹೆಬ್ಬಾವನ್ನು ಕೊಂದು ಹಾಕಿದ್ದಾರೆ. ಆದ್ದರಿಂದ ಅವರ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸುವುದಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿ ಮಹೇಶ್ ಚಂದ್ರ ಕುಶ್ವಾಹ ತಿಳಿಸಿದ್ದಾರೆ.












Click it and Unblock the Notifications