Get Updates
Get notified of breaking news, exclusive insights, and must-see stories!

ಸಮೀಕ್ಷೆ: ಪಂಜಾಬಿಗೆ ಅಮರಿಂದರ್ 'ಕ್ಯಾಪ್ಟನ್' ಆಗುವ ಸಾಧ್ಯತೆಗಳೇ ಜಾಸ್ತಿ

ಒಂದು ಸಮೀಕ್ಷೆ ಸಿಖ್ಖರ ನಾಡಿನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದಿದೆ. ಇನ್ನೊಂದು ಸಮೀಕ್ಷೆ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ ಎಂದು ಹೇಳಿದೆ.

ಚಂಡೀಗಢ, ಫೆಬ್ರವರಿ 1: ಬಹುನಿರೀಕ್ಷಿತ ಪಂಚ ರಾಜ್ಯಗಳ ಚುನಾವಣೆಯ ಸಮೀಕ್ಷೆಗಳು ಒಂದೊಂದಾಗಿ ಹೊರ ಬರುತ್ತಿವೆ. ಈ ಬಾರಿ ಪಂಜಾಬಿನಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರುವ ಸಾಧ್ಯತೆಗಳಿವೆ ಅಂತ ಇಂಡಿಯಾ ಟುಡೆ-ಆಕ್ಸಿಸ್ ಸರ್ವೆ ಹೇಳಿದೆ. ಆದರೆ ಎಬಿಪಿ ಮಾತ್ರ ಪಂಜಾಬಿನಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ. ಕಾಂಗ್ರೆಸ್ ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದೆ ಎಂದಿದೆ.

ಇಂಡಿಯಾ ಟುಡೆ-ಆಕ್ಸಿಸ್: ಅಮರಿಂದರ್ 'ಕ್ಯಾಪ್ಟನ್'

ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದ ಕಾಂಗ್ರೆಸ್ ರಾಜ್ಯದಲ್ಲಿ ಶೇಕಡಾ 37ರಷ್ಟು ಮತ ಪಡೆದು 60-65 ಸೀಟುಗಳನ್ನು ಪಡೆದುಕೊಳ್ಳಲಿದೆಯಂತೆ. ಒಂದೊಮ್ಮೆ ಇಷ್ಟು ಸೀಟುಗಳನ್ನು ಪಡೆದುಕೊಂಡಿದ್ದೇ ಆದಲ್ಲಿ ಕಾಂಗ್ರೆಸ್ ನಿರಾಯಾಸವಾಗಿ ಅಧಿಕಾರ ಹಿಡಿಯಲಿದೆ. ಇನ್ನು ಎಎಪಿ ಶೇಕಡಾ 34 ಮತಗಳನ್ನು ಪಡೆದು 41-44 ಸ್ಥಾನಗಳನ್ನು ಪಡೆದು ವಿರೋಧ ಪಕ್ಷದಲ್ಲಿ ಕೂರಲಿದೆ. ಆಡಳಿತರೂಢ ಬಿಜೆಪಿ-ಅಕಾಲಿದಳ ಮೈತ್ರಿಕೂಟ ಶೇಕಡಾ 24 ಮತ ಗಳಿಸಿ 11-15 ಸೀಟುಗಳನ್ನು ಪಡೆಯಬಹುದು ಎಂದು ಸಮೀಕ್ಷೆ ಹೇಳಿದೆ. ಇನ್ನು ಇತರರು 2 ಸ್ಥಾನಗಳವರೆಗೆ ಗೆಲ್ಲಲಿದ್ದಾರಂತೆ.[ಉತ್ತರಪ್ರದೇಶ ಸರ್ವೇ: ಎಸ್ಪಿ-ಕಾಂಗ್ರೆಸ್ ಮೈತ್ರಿಯಿಂದ ಬಿಜೆಪಿಗೆ ಕಷ್ಟಕಷ್ಟ]

Punjab Election: Chances high for Amarinder to become 'Captain'

ಎಬಿಪಿ: ಅತಂತ್ರ ವಿಧಾನಸಭೆ

ಆದರೆ ಎಬಿಪಿ ನ್ಯೂಸ್ ಮಾತ್ರ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದಿದೆ. ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿರುವ ಕಾಂಗ್ರೆಸ್ 47 ರಿಂದ 55 ಸ್ಥಾನಗಳನ್ನು ಪಡೆದುಕೊಳ್ಳಲಿದೆ. ಬಿಜೆಪಿ ಅಕಾಲಿದಳ ಮೈತ್ರಿಕೂಟ 28-36 ಸ್ಥಾನಗಳನ್ನು ಗೆದ್ದುಕೊಳ್ಳಲಿದೆ. ಹಾಗೂ ಆಮ್ ಆದ್ಮಿ ಪಕ್ಷ 26-34 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ. ಇತರ ನಾಲ್ಕು ಸ್ಥಾನಗಳು ಅನ್ಯರ ಪಾಲಾಗಬಹುದು ಎಂದು ಸಮೀಕ್ಷೆ ಅಂದಾಜಿಸಿದೆ.[ಪಂಜಾಬ್: ಒಂದೇ ರಾಜ್ಯಕ್ಕೆ ಎಎಪಿಯಿಂದ ನಾಲ್ಕು ಪ್ರಣಾಳಿಕೆ!]

ಒಂದೊಮ್ಮೆ ಇದೇ ಫಲಿತಾಂಶ ಬಂದಲ್ಲಿ ಅಧಿಕಾರ ಹಿಡಿಯಲು ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯವಾಗಲಿದೆ. ಆದರೆ ಬಿಜೆಪಿ ಮತ್ತು ಕಾಂಗ್ರೆಸ್ ಬದ್ಧ ವೈರಿಗಳಾದ್ದರಿಂದ ಯಾರ ನಡುವೆ ಮೈತ್ರಿ ನಡೆಯಬಹುದು ಎಂಬುದು ಕುತೂಹಲ ಹುಟ್ಟಿಸಿದೆ.

ಪಂಜಾಬ್ ವಿಧಾನಸಭೆಯಲ್ಲಿ 117 ಸ್ಥಾನಗಳಿದ್ದು ಕಳೆದ 15 ವರ್ಷಗಳಿಂದ ಬಿಜೆಪಿ-ಅಕಾಲಿದಳ ಮೈತ್ರಿಕೂಟ ಅಧಿಕಾರದಲ್ಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+