ಡ್ರಗ್ಸ್‌ ಪ್ರಕರಣದಲ್ಲಿ ಕಾಂಗ್ರೆಸ್‌ ಶಾಸಕ ಬಂಧನ: ಯಾರು, ಏನು, ಎಲ್ಲಿ ತಿಳಿಯಿರಿ

ಚಂಡೀಗಢ, ಸೆಪ್ಟೆಂಬರ್‌ 28: 2015 ರ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಬೆಳಿಗ್ಗೆ ಪಂಜಾಬ್‌ನ ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖೈರಾ ಅವರನ್ನು ಚಂಡೀಗಢದಲ್ಲಿ ಬಂಧಿಸಲಾಗಿದೆ. ಆದರೆ ಈ ಪ್ರಕರಣವನ್ನು ಶಾಸಕರ ತಲೆಗೆ ಕಟ್ಟಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಗುರುವಾರ ಮುಂಜಾನೆ ಶಾಸಕರ ನಿವಾಸಕ್ಕೆ ಆಗಮಿಸಿದ ಪೊಲೀಸ್ ತಂಡ ಅವರನ್ನು ವಶಕ್ಕೆ ತೆಗೆದುಕೊಂಡಿತು. ಬಳಿಕ ಶಾಸಕ ಸುಖಪಾಲ್ ಸಿಂಗ್ ಖೈರಾ ಅವರನ್ನು ಪಂಜಾಬ್‌ನ ಪೊಲೀಸರು ಜಲಾಲಾಬಾದ್‌ಗೆ ಕರೆದೊಯ್ದರು. ಶಾಸಕರ ವಿರುದ್ಧ ರಾಷ್ಟ್ರೀಯ ಡ್ರಗ್ಸ್‌ ಮತ್ತು ಸೈಕೋಟ್ರೋಫಿಕ್‌ ಸಬ್‌ಸ್ಟೆನ್ಸ್‌ (ಎನ್‌ಡಿಪಿಎಸ್) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ತಮ್ಮ ಬಂಧನ ಸಂಬಂಧ ವಾರೆಂಟ್‌ ಕೇಳಿದಾಗ ಚಂಡೀಗಢ ಪೊಲೀಸರು ಅವರನ್ನು ಕೇಂದ್ರಾಡಳಿತ ಪ್ರದೇಶದಿಂದ ಬಂಧಿಸಿದ್ದರೆ ಪಂಜಾಬ್‌ ಸಹವರ್ತಿಗಳೊಂದಿಗೆ ಏಕೆ ಹೋಗುತ್ತಿಲ್ಲ ಎಂದು ಪ್ರಶ್ನಿಸಿದರು.

Punjab Congress MLA arrested in drugs case: Revenge politics allegation

ಡ್ರಗ್ಸ್‌ ಪ್ರಕರಣದಲ್ಲಿ ನನ್ನನ್ನು ಉದ್ದೇಶಪೂರ್ವಕವಾಗಿ ಆರೋಪ ಮಾಡಲಾಗುತ್ತಿದೆ. ನಾನು ನಿರಪರಾಧಿ, ನನಗೆ ಸಂಬಂಧಪಟ್ಟ ಪ್ರಕರಣವನ್ನು ಸುಪ್ರೀಂ ಕೋರ್ಟ್ ಈಗಾಗಲೇ ಬಂಧಿಸಿದೆ. ಪಂಜಾಬ್‌ನ ಎಎಪಿ ಸರ್ಕಾಋ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಸದ್ಉ ಅವರನ್ನು ಜಲಾಲಾಬಾದ್‌ನ ನ್ಯಾಯಲಯಕ್ಕೆ ಹಾಜರುಪಡಿಸಲಾಗುತ್ತದೆ.

ಶಾಸಕ ಖೈರಾ ತನ್ನನ್ನು ಬಂಧಿಸಲು ಬಂದ ಪೊಲೀಸರೊಂದಿಗೆ ತಮ್ಮ ಮನೆಯಲ್ಲಿ ಜಗಳವಾಡುತ್ತಿರುವುದನ್ನು ವಿಡಿಯೋ ಈಗ ವೈರಲ್‌ ಆಗಿದೆ. ಈ ನಿಟ್ಟಿನಲ್ಲಿ ಶಾಸಕರನ್ನು ಬಂಧಿಸಲು ಆಧಾರವಾಗಿರುವ ದಾಖಲೆಗಳನ್ನು ಒದಗಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ. ವೀಡಿಯೊದಲ್ಲಿ ಖೈರಾ ಅವರು ಪೊಲೀಸ್ ತಂಡದೊಂದಿಗೆ ತೀವ್ರ ವಾಗ್ವಾದಕ್ಕಿಳಿದ್ದಾರೆ. ಅವರು ಬಂಧನ ವಾರಂಟ್ ಅನ್ನು ಹಾಜರುಪಡಿಸುವಂತೆ ಒತ್ತಾಯಿಸುತ್ತಿರುವುದು ಕಂಡು ಬಂದಿದೆ.

ಖೈರಾ ಅವರು ತಮ್ಮನ್ನು ಎಲ್ಲಿಗೆ ಕರೆದೊಯ್ಯತ್ತಿದ್ದೀರಿ ಎಂದು ಪ್ರಶ್ನಿಸಿದಾಗ ಫಜಿಲ್ಕಾ ಜಿಲ್ಲೆಯ ಜಲಾಲಾಬಾದ್‌ಗೆ ಕರೆದೊಯ್ಯಲಾಗುತ್ತಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು. ಪಂಜಾಬ್‌ನ ಭಗವಂತ ಮಾನ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್‌ ಶಾಸಕರು ಅವರು ಬಂಧನವು ಸುಳ್ಳು ಆರೋಪಗಳನ್ನು ಆಧರಿಸಿದ್ದು, ರಾಜ್ಯದಲ್ಲಿ ಕಾನೂನು ದುರ್ಬಳಕೆಯಾಗುತ್ತಿದೆ ಎಂದು ಆರೋಪಿಸಿದರು.

ಸದರಿ ಡ್ರಗ್ಸ್‌ ಪ್ರಕರಣವನ್ನು ಮಾರ್ಚ್ 2015 ರಲ್ಲಿ ಜಲಾಲಾಬಾದ್, ಫಾಜಿಲ್ಕಾದಲ್ಲಿ ದಾಖಲಿಸಲಾಗಿತ್ತು, ಇದರ ಪರಿಣಾಮವಾಗಿ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ (ಎನ್‌ಡಿಪಿಎಸ್) ಕಾಯ್ದೆಯಡಿ 2017 ರಲ್ಲಿ ಒಂಬತ್ತು ವ್ಯಕ್ತಿಗಳಿಗೆ ಶಿಕ್ಷೆ ವಿಧಿಸಲಾಯಿತು. ಪ್ರಕರಣದಲ್ಲಿ ಹೆಚ್ಚುವರಿ ಆರೋಪಿಯಾಗಿ ಸಮನ್ಸ್ ಪಡೆದ ಖೈರಾ ವಿರುದ್ಧದ ವಿಚಾರಣಾ ನ್ಯಾಯಾಲಯದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸ್ಥಗಿತಗೊಳಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+