Get Updates
Get notified of breaking news, exclusive insights, and must-see stories!

ಪುಲ್ವಾಮಾ ದಾಳಿಯಲ್ಲಿ ಪಾಕ್ ಕೈವಾಡ; ಎಫ್ ಎಟಿಎಫ್ ಗೆ ದಾಖಲೆ, ಮುಂದೇನು?

ನವದೆಹಲಿ, ಫೆಬ್ರವರಿ 16: ಪುಲ್ವಾಮಾದಲ್ಲಿ ಉಗ್ರಗಾಮಿ ದಾಳಿ ನಡೆದು, ನಲವತ್ತಕ್ಕೂ ಹೆಚ್ಚು ಸಿಆರ್ ಪಿಎಫ್ ಸಿಬ್ಬಂದಿ ಹುತಾತ್ಮರಾದ ಘಟನೆಗೆ ಸಂಬಂಧಿಸಿದಂತೆ ಪಾಕಿಸ್ತಾನದ ಪಾತ್ರ ಇರುವ ಸಾಕ್ಷ್ಯಗಳನ್ನು ಅಂತರರಾಷ್ಟೀಯ ಭಯೋತ್ಪಾದನಾ ಆರ್ಥಿಕ ಚಟುವಟಿಕೆಗಳ ಮೇಲೆ ನಿಗಾ ವಹಿಸುವ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್ ಎಟಿಎಫ್)ಗೆ ಭಾರತ ನೀಡಲಿದೆ.

ಭಯೋತ್ಪಾದನಾ ಕೃತ್ಯಗಳಲ್ಲಿ ಪಾಕಿಸ್ತಾನದ ನಂಟು ಬಯಲು ಮಾಡುವುದು ಹಾಗೂ ಅದನ್ನು ಕಪ್ಪು ಪಟ್ಟಿಗೆ ಸೇರಿಸುವುದು ಈ ಸಾಕ್ಷ್ಯಾಧಾರಗಳನ್ನು ಒದಗಿಸುವ ಹಿಂದಿನ ಉದ್ದೇಶವಾಗಿ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ಪಾಕಿಸ್ತಾನ ಮೂಲದ ಜೈಶ್-ಇ-ಮೊಹ್ಮದ್ ಉಗ್ರ ಸಂಘಟನೆ ಈ ಕೃತ್ಯ ಎಸಗಿದೆ ಎಂಬುದಕ್ಕೆ ತನಿಖಾ ಸಂಸ್ಥೆಗಳು ಸಾಕ್ಷ್ಯ ಹಾಗೂ ಕಡತಗಳನ್ನು ಸಿದ್ಧಪಡಿಸಿದೆ. ಇದರ ಜತೆಗೆ ಪಾಕಿಸ್ತಾನದ ತನಿಖಾ ಸಂಸ್ಥೆಗಳ ಜತೆ ಜೈಶ್-ಇ-ಮೊಹ್ಮದ್ ಸಂಘಟನೆ ನಂಟು ಇರುವುದನ್ನು ಕೂಡ ಬಯಲಿಗೆ ಇಡಲಿದೆ. ಹೇಗೆ ಉಗ್ರ ಸಂಘಟನೆಗಳಿಗೆ ಹಣಕಾಸು ನೆರವು ದೊರೆಯಿತು ಎಂಬ ಮಾಹಿತಿ ಕೂಡ ಇದೆ ಎಂದು ತನಿಖಾ ಸಂಸ್ಥೆ ಅಧಿಕಾರಿಗಳು ಹೇಳಿದ್ದಾರೆ.

Pulwama Terror attack

ಈ ಹಿಂದೆ ಜೈಶ್ ಇ ಮೊಹ್ಮದ್ ನಡೆಸಿದ ದಾಳಿಗಳ ಮಾಹಿತಿ ಕೂಡ ದಾಖಲೆಯಲ್ಲಿ ಇರಲಿದೆ. ಪ್ಯಾರಿಸ್ ನಲ್ಲಿ ಇರುವ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ ಗೆ ಈ ದಾಖಲೆಗಳ ಮೂಲಕ, ಹೇಗೆ ಪಾಕಿಸ್ತಾನಿ ಸಂಸ್ಥೆಗಳು ಜೈಶ್ ಇ ಮೊಹ್ಮದ್ ಗೆ ಹಣಕಾಸಿನ ನೆರವು ಒದಗಿಸುತ್ತಿವೆ ಎಂಬುದನ್ನು ತಿಳಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಎಫ್ ಎಟಿಎಫ್ ನ ಮುಂದಿನ ಸಭೆಯಲ್ಲಿ, ಪಾಕಿಸ್ತಾನವನ್ನು ಕಪ್ಪು ಪಟ್ಟಿಗೆ ಸೇರಿಸಲು ಒತ್ತಡ ಹಾಕಲಾಗುವುದು. ಆಗ ಆ ದೇಶದ ಕ್ರಮ ತೆಗೆದುಕೊಳ್ಳಲು ಸಾಧ್ಯ ಎಂದು ಕೂಡ ಹೇಳಲಾಗುತ್ತಿದೆ. ಮುಂದಿನ ವಾರ ಪ್ಯಾರಿಸ್ ನಲ್ಲಿ ಎಫ್ ಎಟಿಎಫ್ ಸಭೆ ನಡೆಸಲಾಗುವುದು.

ಈ ಸಂಸ್ಥೆಯಿಂದ ಯಾವುದೇ ದೇಶವನ್ನು ಕಪ್ಪು ಪುಟ್ಟಿಗೆ ಸೇರಿಸುವುದು ಅಂದರೆ, ಅಕ್ರಮ ಹಣ ವರ್ಗಾವಣೆ ವಿರುದ್ಧದ ಹೋರಾಟಕ್ಕೆ ಸಹಕರಿಸುತ್ತಿಲ್ಲ ಹಾಗೂ ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುತ್ತಿದೆ ಎಂದರ್ಥ. ಹಾಗೆ ಆದ ಪಕ್ಷದಲ್ಲಿ ಐಎಂಎಫ್, ವರ್ಲ್ಡ್ ಬ್ಯಾಂಕ್, ಎಡಿಬಿ, ಇಯುಗಳು ಆ ದೇಶವನ್ನು ಶ್ರೇಯಾಂಕದಿಂದ ಕೆಳಗಿಳಿಸುತ್ತವೆ. ಜತೆಗೆ ಮೂಡಿ, ಎಸ್ ಅಂಡ್ ಪಿ ಹಾಗೂ ಫಿಚ್ ನಿಂದ ಶ್ರೇಯಾಂಕ ಇಳಿಕೆ ಆಗುತ್ತದೆ.

ಭಯೋತ್ಪಾದನಾ ವಿರೋಧಿ ಚಟುವಟಿಕೆಗೆ ನೀಡುವ ಅನುದಾನದಿಂದ ಕಳೆದ ವರ್ಷ ಜುಲೈನಿಂದ ಈಚೆಗೆ ಪಾಕಿಸ್ತಾನವನ್ನು ಕಪ್ಪು ಪಟ್ಟಿಯಲ್ಲಿ ಇಡಲಾಗಿದೆ. ಸದ್ಯಕ್ಕೆ ಎಫ್ ಎಟಿಎಫ್ ನಲ್ಲಿ ಮೂವತ್ತೈದು ಸದಸ್ಯರು, ಎರಡು ಪ್ರಾದೇಶಿಕ ಸಂಸ್ಥೆಗಳು- ಯುರೋಪಿಯನ್ ಕಮಿಷನ್ ಮತ್ತು ಗಲ್ಪ್ ಕೋ ಆಪರೇಷನ್ ಕೌನ್ಸಿಲ್ ಇದೆ. ಉತ್ತರ ಕೊರಿಯಾ ಹಾಗೂ ಇರಾನ್ ಈಗಾಗಲೇ ಕಪ್ಪು ಪಟ್ಟಿಯಲ್ಲಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+