ರಾಜ್ಯಪಾಲೆ ಕಿರಣ್ ಬೇಡಿ ನಿವಾಸದ ಮುಂದೆ ರಾತ್ರಿ ಕಳೆದ ಪುದುಚೆರಿ ಸಿಎಂ
ಪುದುಚೆರಿ, ಫೆಬ್ರವರಿ 14: ಕೇಂದ್ರಾಡಳಿತ ಪ್ರದೇಶ ಪುದುಚೆರಿಯಲ್ಲಿ ಕೇಂದ್ರದಿಂದ ನೇಮಕವಾಗಿರುವ ಲೆಫ್ಟಿನೆಂಟ್ ಗೌರ್ನರ್ (ರಾಜ್ಯಪಾಲ ಪ್ರತಿನಿಧಿ) ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ವಿರುದ್ಧ ಅಲ್ಲಿನ ಸಿಎಂ ಮತ್ತು ಮಂತ್ರಿ ಮಂಡಳ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದೆ.
ಕಿರಣ್ ಬೇಡಿ ಅವರ ಅಧಿಕೃತ ನಿವಾಸ 'ರಾಜ್ ನಿವಾಸದ' ಎದುರು ಪುದುಚೆರಿ ಸಿಎಂ ವಿ.ನಾರಾಯಣಸ್ವಾಮಿ ಅವರು ನಿನ್ನೆ ಇಡೀ ರಾತ್ರಿ ಕಳೆದಿದ್ದು, ಇಂದು ಸಹ ಅವರ ನಿವಾಸದ ಎದುರೇ ಪ್ರತಿಭಟನೆ ನಡೆಸುತ್ತಿದ್ದಾರೆ.
ಕಿರಣ್ ಬೇಡಿ ಅವರು ತಮ್ಮ ಕಾರ್ಯದಲ್ಲಿ ಅನವಶ್ಯಕ ಮೂಗು ತೂರಿಸುತ್ತಿದ್ದಾರೆ ಎಂದು ಸಿಎಂ ವಿ.ನಾರಾಯಣಸ್ವಾಮಿ ಹಾಗೂ ಮಂತ್ರಿ ಮಂಡಲ ಆರೋಪಿಸಿದ್ದು, ಇಂದು ಸಹ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.

ಕಿರಣ್ ಬೇಡಿ ಅವರು ಪ್ರಜಾಪ್ರಭುತ್ವ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆ. ತಾವೇ ಸರ್ಕಾರ, ತಮಗೆ ಎಲ್ಲವೂ ಗೊತ್ತು, ತಮ್ಮ ಅಧೀನದಲ್ಲಿ ಚುನಾಯಿತ ಪ್ರತಿನಿಧಿಗಳು ಇರಬೇಕು ಎಂಬ ಧೋರಣೆ ಅವರದ್ದಾಗಿದೆ ಎಂದು ಸಿಎಂ ನಾರಾಯಣಸ್ವಾಮಿ ಹೇಳಿದ್ದಾರೆ.
ರಾಜ ನಿವಾಸದಿಂದ ಹೊರ ಹೋಗುವ ಎಲ್ಲಾ ಮಾರ್ಗಗಳಲ್ಲೂ ಪ್ರತಿಭಟನಾಕಾರರು ಪ್ರತಿಭಟನೆ ನಡೆಸುತ್ತಿದ್ದು, ಕಿರಣ್ ಬೇಡಿ ಅವರು ಮುಂದೆ ಏನು ಮಾಡುತ್ತಾರೆ ಎಂಬುದು ಕಾದು ನೋಡಬೇಕಿದೆ. ಅಥವಾ ಕೇಂದ್ರ ಮಧ್ಯ ಪ್ರವೇಶ ಮಾಡುತ್ತದೆಯಾ ಎಂದು ಸಹ ನಿರೀಕ್ಷಿಸಲಾಗುತ್ತಿದೆ.












Click it and Unblock the Notifications