ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರದಿಂದ ಅನುಮತಿ ನಿರಾಕರಣೆ, ಭಾರತಕ್ಕೆ ಸಧ್ಯಕ್ಕಿಲ್ಲ ಪಬ್‌ಜಿ

|
Google Oneindia Kannada News

ನವದೆಹಲಿ, ಡಿಸೆಂಬರ್ 17: ಭಾರತದಲ್ಲಿ ಶೀಘ್ರ ಪಬ್‌ಜಿ ಮೊಬೈಲ್ ಗೇಮ್ ಶೀಘ್ರ ಪುನರಾರಂಭವಾಗುತ್ತದೆ ಎನ್ನುವ ಮಾತು ಕೇಳಿಬಂದಿತ್ತು. ಆದರೆ ಅನುಮತಿ ನೀಡಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಭಾರತದಲ್ಲಿ ಪಬ್‌ಜಿ ಮೊಬೈಲ್ ಪುನರಾರಂಭಿಸುವ ಪಬ್‌ಜಿ ಮೊಬೈಲ್ ಇಂಡಿಯಾ ಪ್ರಯತ್ನ ಸಧ್ಯಕ್ಕೆ ವಿಫಲವಾಗಿದೆ.ಅಧಿಕಾರಿಗಳು ಭಾರತದೊಂದಿಗೆ ಸಭೆ ನಡೆಸಲು ಪ್ರಯತ್ನಿಸುತ್ತಿದ್ದರೂ ಕೂಡ ಸಾಧ್ಯವಾಗುತ್ತಿಲ್ಲ. ಭಾರತದ ಸರ್ಕಾರ ಅನುಮತಿ ನೀಡುವವರೆಗೂ ಪಬ್ಜಿ ಆಟ ಭಾರತದಲ್ಲಿ ಶುರುವಾಗುವುದಿಲ್ಲ.

ಭಾರತದಲ್ಲಿ ಪಬ್‌ಜಿ ಮೊಬೈಲ್ ಗೇಮ್ ಬ್ಯಾನ್ ಮಾಡಲು ಸರ್ಕಾರ ಚಿಂತನೆಭಾರತದಲ್ಲಿ ಪಬ್‌ಜಿ ಮೊಬೈಲ್ ಗೇಮ್ ಬ್ಯಾನ್ ಮಾಡಲು ಸರ್ಕಾರ ಚಿಂತನೆ

ಕೇಂದ್ರ ಸರ್ಕಾರವು ಈ ಕುರಿತು ಸ್ಪಷ್ಟನೆ ನೀಡಿದ್ದು, ಇಲ್ಲಿಯವರೆಗೂ ಪಬ್‌ಜಿ ಯನ್ನು ಮರುಸ್ಥಾಪನೆಗೆ ಭಾರತದಲ್ಲಿ ಅವಕಾಶ ನೀಡಿಲ್ಲ ಎಂದು ಹೇಳಿದೆ.

PUBG Mobile India: Permission To Launch Not Given Clarifies Government

ಚೀನಾ ಜತೆ ನಂಟು ಹೊಂದಿದ್ದ ಕಾರಣಕ್ಕಾಗಿ ದೇಶದಲ್ಲಿ ನಿಷೇಧಕ್ಕೆ ಒಳಗಾಗಿದ್ದ ಜನಪ್ರಿಯ ಮೊಬೈಲ್ ಗೇಮ್ ಪಬ್‌ಜಿ ಮತ್ತೆ ಭಾರತಕ್ಕೆ ಬರುತ್ತದೆ ಎನ್ನುವ ಸುದ್ದಿ ಹರಿದಾಡಿತ್ತು. ಪಬ್‌ಜಿ ಮೊಬೈಲ್ ಇಂಡಿಯಾ ಹೆಸರಿನಲ್ಲಿ ಈ ಗೇಮ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧವಾಗುತ್ತಿದೆ ಎಂದು ಹೇಳಲಾಗಿತ್ತು.

ಭಾರತೀಯ ಮಾರುಕಟ್ಟೆಯನ್ನೇ ಗಮನದಲ್ಲಿಟ್ಟುಕೊಂಡು ಹೊಸ ಗೇಮ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಹೊಸ ಗೇಮ್ ಬಳಕೆದಾರರಿಗೆ ಗರಿಷ್ಠ ಭದ್ರತೆಯನ್ನು ಒದಗಿಸುತ್ತದೆ ಮತ್ತು ಸ್ಥಳೀಯ ನಿಯಮಗಳಿಗೆ ಬದ್ಧವಾಗಿದೆ ಎನ್ನಲಾಗಿತ್ತು. ಆದರೆ ಸರ್ಕಾರವು ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ.

English summary
This whole saga of the PUBG Mobile India launch, which is basically PUBG Mobile relaunching in India, has been stuck in limbo for a while now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X