ಪಾಕಿಸ್ತಾನದ ಸೇನೆ ವಿರುದ್ಧ ತಿರುಗಿಬಿದ್ದ ಪ್ರಜೆಗಳು, ಬೃಹತ್ ಹೋರಾಟ ಶುರು... Operation Sindoor
ಹೊಡಿ.. ಹೊಡಿ.. ಹೊಡಿ... ಹಿಂಗೆ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಓಡಾಡಿಸಿಕೊಂಡು ಹೊಡಿತಾ ಇದೆ. ಹೀಗಿದ್ದರೂ ತೆಪ್ಪಗೆ ಕೂರಲು ಸಿದ್ಧ ಇಲ್ಲದ ಪಾಪಿ ಪಾಕಿಸ್ತಾನ ಮಾತ್ರ ಈ ಸಮಯದಲ್ಲೂ ಕಿರಿಕ್ ಮಾಡುತ್ತಲೇ ಇದೆ. ಭಾರತದ ಮೇಲೆ ಪದೇ ಪದೇ ದಾಳಿ ಮಾಡುತ್ತಾ ಇರುವ ಪಾಪಿ ಪಾಕಿಸ್ತಾನಕ್ಕೆ ಇದೀಗ ಸ್ವಂತ ನೆಲದಲ್ಲೇ ಭಾರಿ ದೊಡ್ಡ ವಿರೋಧ ಶುರುವಾಗಿದೆ. ಪಾಕಿಸ್ತಾನದ ಸೇನೆ ವಿರುದ್ಧ ತಿರುಗಿಬಿದ್ದ ಪ್ರಜೆಗಳು, ಬೃಹತ್ ಹೋರಾಟ ಶುರು ಮಾಡಿದ್ದಾರೆ.
ಪಾಕಿಸ್ತಾನದ ಸ್ಥಿತಿ ಇದೀಗ ಬೂದಿ ಮುಚ್ಚಿದ ಕೆಂಡವಾಗಿದ್ದು, ನಾಶವಾಗುವ ಹಂತದಲ್ಲಿದೆ. ಜಾಗತಿಕ ಮಟ್ಟದಲ್ಲಿ ಪಾಪಿ ಪಾಕಿಸ್ತಾನ ಕೆಟ್ಟ ಹೆಸರು ಸಂಪಾದನೆ ಮಾಡಿದ್ದು, ವಿಶ್ವಸಂಸ್ಥೆ ಸೇರಿದಂತೆ ಜಾಗತಿಕವಾಗಿ ದೊಡ್ಡ ದೊಡ್ಡ ಸಂಸ್ಥೆಗಳು ಕೂಡ ಪಾಕಿಸ್ತಾನದ ವಿರುದ್ಧ ಇವೆ. ಅದರಲ್ಲೂ ಹಲವು ದೇಶಗಳು ಕೂಡ ಪಾಕಿಸ್ತಾನ ಸರಿ ಇಲ್ಲ ಅಂತಾನೇ ಹೇಳುತ್ತವೆ. ಹೀಗೆ, ಅಮೆರಿಕ ಕೂಡ ಪಾಕಿಸ್ತಾನದ ಉಗ್ರ ಪೋಷಣೆ ಬಗ್ಗೆ ಆಕ್ರೋಶ ಹೊರ ಹಾಕುತ್ತಲೇ ಬಂದಿದೆ. ಇಂತಹ ಸಮಯದಲ್ಲೇ ಸ್ವತಃ ಪಾಕಿಸ್ತಾನದ ಪ್ರಜೆಗಳು ತಮ್ಮ ಸ್ವಂತ ದೇಶದ ಸೇನೆ ಹಾಗೂ ಸರ್ಕಾರದ ವಿರುದ್ಧವೇ ಬೃಹತ್ ಹೋರಾಟ ಶುರು ಮಾಡಿದ್ದಾರೆ.

ಇಮ್ರಾನ್ ಖಾನ್ ಬೆಂಬಲಿಗರ ಪ್ರತಿಭಟನೆ
ಹೌದು, ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬೆಂಬಲಿಗರು ಬೃಹತ್ ಹೋರಾಟ ಶುರು ಮಾಡಿದ್ದಾರೆ. ತಕ್ಷಣವೇ ಇಮ್ರಾನ್ ಖಾನ್ ಬಿಡುಗಡೆ ಮಾಡಬೇಕು, ಇಲ್ಲವಾದರೆ ಇದೇ ಹೋರಾಟ ಇನ್ನೂ ದೊಡ್ಡ ಮಟ್ಟದಲ್ಲಿ ನಡೆಯಲಿದೆ ಅಂತಾನೇ ಇದೀಗ ಎಚ್ಚರಿಕೆ ನೀಡಿದ್ದಾರೆ ಪಾಕಿಸ್ತಾನದ ಇಮ್ರಾನ್ ಖಾನ್ ಬೆಂಬಲಿಗರು. ಪಾಕಿಸ್ತಾನ ಸೇನೆ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದ್ದು, ಯಾವುದೇ ಕ್ಷಣದಲ್ಲಿ ಪಾಕಿಸ್ತಾನ ಸರ್ವನಾಶ ಆಗುವ ಆತಂಕ ಕೂಡ ಅಲ್ಲಿನ ಜನರನ್ನು ಕಾಡುತ್ತಿದೆ. ಹಲವು ನಗರಗಳಲ್ಲಿ ಈಗಾಗಲೇ ಇಮ್ರಾನ್ ಖಾನ್ ಬೆಂಬಲಿಗರು ಬೃಹತ್ ಪ್ರತಿಭಟನೆ ಶುರು ಮಾಡಿದ್ದಾರೆ.












Click it and Unblock the Notifications