ಕೇಂದ್ರ ಸರ್ಕಾರದ ವಿರುದ್ಧ ಕಪ್ಪು ವಸ್ತ್ರ ಧರಿಸಿ ವಿಪಕ್ಷಗಳ ಪ್ರತಿಭಟನೆ

ನವದೆಹಲಿ, ಮಾರ್ಚ್‌ 27: ಅದಾನಿ ವಿವಾದ ಮತ್ತು ಲೋಕಸಭೆಯಿಂದ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿದ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಹಲವು ವಿರೋಧ ಪಕ್ಷದ ಸಂಸದರು ಸೋಮವಾರ ಕಪ್ಪು ಬಟ್ಟೆ ಧರಿಸಿ ಸಂಸತ್ತಿನಿಂದ ವಿಜಯ್ ಚೌಕ್‌ಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕಾಂಗ್ರೆಸ್ ಸಂಸದೆ ಸೋನಿಯಾ ಗಾಂಧಿ, ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವಾರು ಮಂದಿ ಸಂಸದರು ಸಂಸತ್ತಿನ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಜಮಾಯಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸತ್ಯಮೇವ ಜಯತೆ ಬ್ಯಾನರ್ ಮತ್ತು ಪ್ರಜಾಪ್ರಭುತ್ವ ಉಳಿಸಿ ಎಂದು ಬರೆದಿರುವ ಫಲಕಗಳನ್ನು ಹಿಡಿದುಕೊಂಡು ಸಂಸದರು ವಿಜಯ್ ಚೌಕ್ ಕಡೆಗೆ ತೆರಳಿ ಧರಣಿ ನಡೆಸಿದರು.

Protest by the opposition wearing black clothes against the central government

ಕಳೆದ ಕೆಲವು ವರ್ಷಗಳಲ್ಲಿ ಅದಾನಿ ಸಂಪತ್ತು ಇಷ್ಟೊಂದು ಹೆಚ್ಚಾಗಿದ್ದು ಹೇಗೆ? ವಿದೇಶಕ್ಕೆ ಹೋಗುವಾಗ ಕೈಗಾರಿಕೋದ್ಯಮಿಯನ್ನು ಎಷ್ಟು ಬಾರಿ ಕರೆದುಕೊಂಡು ಹೋಗಿದ್ದೀರಿ? ಅದಾನಿ ವಿರುದ್ಧ ಎದ್ದ ಪ್ರಶ್ನೆಗಳಿಗೆ ಉತ್ತರ ನೀಡಲು ಪ್ರಧಾನಿಗೆ ಸಾಧ್ಯವಾಗಿಲ್ಲ ಎಂದು ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.

ರಾಹುಲ್ ಗಾಂಧಿ ಅವರ ಅನರ್ಹತೆಯ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ವಿರೋಧ ಪಕ್ಷದ ನಾಯಕರಿಗೆ ನಾನು ಧನ್ಯವಾದ ಹೇಳುತ್ತೇನೆ. ನಾವು ಕಪ್ಪು ಬಟ್ಟೆಯಲ್ಲಿ ಏಕೆ ಬಂದಿರುವುದು ಪ್ರಧಾನಿ ಮೋದಿಯವರು ದೇಶದಲ್ಲಿ ಪ್ರಜಾಪ್ರಭುತ್ವವನ್ನು ಕೊನೆಗೊಳಿಸುತ್ತಿದ್ದಾರೆ ಎಂಬುದನ್ನು ನಾವು ತೋರಿಸಲು ಬಯಸುತ್ತೇವೆ. ಅವರು ಮೊದಲು ಸ್ವಾಯತ್ತ ಸಂಸ್ಥೆಗಳನ್ನು ಮುಗಿಸಿದರು. ನಂತರ ಅವರು ಚುನಾವಣೆಯಲ್ಲಿ ಗೆದ್ದವರಿಗೆ ಬೆದರಿಕೆ ಹಾಕುವ ಮೂಲಕ ಎಲ್ಲೆಡೆ ತಮ್ಮದೇ ಆದ ಸರ್ಕಾರವನ್ನು ಸ್ಥಾಪಿಸಿದರು. ನಂತರ ಅವರು ತಲೆಬಾಗದವರನ್ನು ಬಗ್ಗಿಸಲು ಇಡಿ, ಸಿಬಿಐ ಬಳಸಿದರು ಎಂದು ಖರ್ಗೆ ಹೇಳಿದರು.

Protest by the opposition wearing black clothes against the central government

ಅವರು ಸಂಸತ್ತಿನಲ್ಲಿ ಪ್ರತಿಯೊಂದಕ್ಕೂ ದೃಢೀಕರಣವನ್ನು ಕೇಳುತ್ತಾರೆ. ನಾವು ಎತ್ತಿರುವ ಪ್ರಶ್ನೆಗಳಿಗೆ ಉತ್ತರ ನೀಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. 18 ಪಕ್ಷಗಳ ಸಂಸದರು ಇಂದು ಬಂದಿದ್ದಾರೆ. ಒಂದೂ ಪಕ್ಷವೂ ತಪ್ಪಿಲ್ಲ. ಅದಾನಿ ವಿವಾದದ ಬಗ್ಗೆ ನಾವು ಜಂಟಿ ಸಂಸದೀಯ ಸಮಿತಿ ರಚಿಸಲು ಕೇಳುತ್ತಿದ್ದೇವೆ. ಸತ್ಯ ಹೊರಬರಲಿದೆ. ದಾಖಲೆಗಳನ್ನು ಪರಿಶೀಲಿಸಲಾಗುವುದು. ಏನೇ ಆಗಲಿ ಅದು ಎಲ್ಲರಿಗೂ ಗೊತ್ತಾಗುತ್ತದೆ. ಪಾರದರ್ಶಕತೆ ಇರುತ್ತದೆ. ಜೆಪಿಸಿ ರಚನೆಗೆ ನೀವು ಏಕೆ ಹೆದರುತ್ತೀರಿ? ನಿಮಗೆ ಬಹುಮತವಿದೆ. ನೀವು (ಬಿಜೆಪಿ) ಜೆಪಿಸಿಯಲ್ಲಿ ಹೆಚ್ಚಿನ ಸದಸ್ಯರನ್ನು ಹೊಂದಿರುತ್ತೀರಿ ಅಥವಾ ನಿಮ್ಮ ಮಿತ್ರರನ್ನು ಹೊಂದಿರುತ್ತೀರಿ ಎಂದು ಅವರು ಹೇಳಿದರು.

"ನೀವು ಭಯಪಡುತ್ತೀರಿ ಎಂದರೆ ಏನೋ ಆಗಿದೆ ಎಂದು ಅರ್ಥ. ಹಾಗಾಗಿ ಒಗ್ಗಟ್ಟು ಪ್ರದರ್ಶಿಸಲು ನಾವೆಲ್ಲರೂ ಇಂದು ಒಟ್ಟಾಗಿದ್ದೇವೆ. ಇದನ್ನು ಪ್ರಜಾಪ್ರಭುತ್ವದ ಕರಾಳ ದಿನ. ಸರ್ಕಾರವು ಆತುರಾತುರವಾಗಿ ರಾಹುಲ್ ಗಾಂಧಿಯನ್ನು ಲೋಕಸಭೆಯಿಂದ ಅನರ್ಹಗೊಳಿಸಿದೆ. ಅದಕ್ಕೆ ಎಷ್ಟು ಭಯವಿದೆ ಎಂದು ನಮಗೆ ಗೊತ್ತಾಗಿದೆ. ಏನೇ ಆಗಲಿ ನಮ್ಮ ಹೋರಾಟು ಮುಂದುವರೆಯಲಿದೆ ಎಂದರು.

ಕೋಲಾರದಲ್ಲಿ ಚುನಾವಣಾ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ ಪ್ರಕರಣದಲ್ಲಿ ಗುಜರಾತ್‌ನ ಸೂರತ್‌ನಲ್ಲಿ ಪ್ರಕರಣ ದಾಖಲಾಗಿದೆ. ಏಕೆಂದರೆ ನಿಮಗೆ ಅನುಕೂಲಕರ ಸರ್ಕಾರ ಬೇಕಿತ್ತು. ನೀವು ಪೊಲೀಸರನ್ನು ನಮ್ಮ ವಿರುದ್ಧ ಬಳಸಲು ಬಯಸುತ್ತೀರಿ. ನಾನು ನ್ಯಾಯಾಂಗ ಇಲ್ಲಿ ತಪ್ಪು ಎಂದು ಹೇಳಲಾರೆ. ನೀವು ರಾಹುಲ್ ಗಾಂಧಿಯನ್ನು ಮಾನಹಾನಿ ಮಾಡಲು ನಿಮ್ಮ ಉದ್ದೇಶಕ್ಕಾಗಿ ಬಳಸುತ್ತೀರಿ. ಪ್ರಜಾಪ್ರಭುತ್ವದಲ್ಲಿ ಇದೊಂದು ಕರಾಳ ದಿನ. ಬಿಜೆಪಿ ಸರ್ಕಾರ ಮಿಂಚಿನ ವೇಗದಲ್ಲಿ ರಾಹುಲ್ ಗಾಂಧಿಯನ್ನು ಅನರ್ಹಗೊಳಿಸಿತು. ರಾಹುಲ್ ಗಾಂಧಿ ಹೆದರುವುದಿಲ್ಲ. ಎಷ್ಟೇ ಪ್ರಯತ್ನಿಸಿದರೂ ವಿರೋಧ ಪಕ್ಷಗಳನ್ನು ಹತ್ತಿಕ್ಕಲು ಆಗುವುದಿಲ್ಲ. ನಾವು ತಲೆಬಾಗುವುದಿಲ್ಲ. ಈ ನಿಟ್ಟಿನಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದೇವೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+