
'ಮಹಾ' ಪುಂಡರ ಪುಂಡಾಟ: ಕರ್ನಾಟಕ ಬಸ್ ಮೇಲೆ ಕಲ್ಲು ತೂರಾಟ
ಮಹಾರಾಷ್ಟ್ರದ ಪುಂಡರು ಮತ್ತೆ ತಮ್ಮ ಪುಂಡಾಟ ಶುರು ಮಾಡಿದ್ದಾರೆ. ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಆಗಾಗ ತಮ್ಮ ಕಿಡಿಗೇಡಿತನ ಪ್ರದರ್ಶಿಸುವ ಮರಾಠಿಗರು ಮತ್ತೆ ತಮ್ಮ ನಿಜಬಣ್ಣ ತೋರಿದ್ದಾರೆ.
ನಿನ್ನೆ ರಾತ್ರಿ 10.30ಕ್ಕೆ ಮೀರಜ್‌ನಲ್ಲಿ ಕರ್ನಾಟಕ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪುಣೆಯಿಂದ ಅಥಣಿಗೆ ಬರುತ್ತಿದ್ದ ಕರ್ನಾಟಕ ಬಸ್ ಮೇಲೆ ಕಲ್ಲು ಎಸೆದಿದ್ದಾರೆ. ಹೀಗಾಗಿ ಅಥಿಣಿ-ಮಿರಜ್ ನಡುವಿನ ಕರ್ನಾಟಕ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಬಸ್ ಅಥಣಿ ಬಸ್ ಡಿಪೋಗೆ ಸೇರಿದ್ದು ಪ್ರಕರಣ ದಾಖಲಾಗಿದೆ.
ಗಣಿ ವಿವಾದಗಳನ್ನು ಬಗೆಹರಿಸಿಕೊಳ್ಳಲು ಮಹಾರಾಷ್ಟ್ರ ಸಿಎಂ ಏಕನಾಥ್ ಸಿಂಧೆ ಒಲವು ತೋರಿದರೂ ಕೆಲ ಕಿಡಿಗೇಡಿಗಳು ಸಮುದಾಗಳ ನಡುವೆ ದ್ವೇಷ ಉಂಟು ಮಾಡುವ ಕೆಲಸಗಳನ್ನು ಮಾಡುತ್ತಲೇ ಇದ್ದಾರೆ.
#Karnataka bus pelted with stones at Miraj last night at 10.30 pm allegedly by pro Maharashtra miscreants. Karnataka buses on that route has been suspended. The bus belonged to Athani bus depo. Case registered. pic.twitter.com/AvoNAyYUgM
— Imran Khan (@KeypadGuerilla) November 26, 2022
ಕರ್ನಾಟಕದ ಕೆಲವು ಭಾಗಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಲಬೇಕು ಎನ್ನುವ ವಿಚಾರದಲ್ಲಿ ಸುಪ್ರೀಕೋರ್ಟ್ ಕಟಕಟೆಯನ್ನು ಮಹಾರಾಷ್ಟ್ರ ಸರ್ಕಾರ ಹತ್ತಿದೆ. ಅದರ ಬೆನ್ನಲ್ಲೇ ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಲೋಣ ಎಮದು ಕೂಡ ಹೇಳಿದೆ. ಈ ನಡುವೆ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಾವುದೇ ಕಾರಣಕ್ಕೂ ಕರ್ನಾಟಕವನ್ನು ಒಂದಿಂಚೂ ನೆಲವನ್ನು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದೀಗ ಕೈಲಾಗದೆ ಮೈಪರಚಿಕೊಂಡ ಎಂಬಂತೆ ಕೆಲವು ಮರಾಠಿ ಪುಂಡರು ಬೀದಿ ರಂಪಕ್ಕೆ ಇಳಿದಿದ್ದಾರೆ. ಮಹಾರಾಷ್ಟ್ರದಲ್ಲಿ ಇಂಹತ ಹಲವು ಘಟನೆಗಳು ಈ ಹಿಂದೆ ನಡೆದಿವೆ.