ಚೀನಾ ಪರ ಒಲವಿರುವ ಉಗ್ರ ಸಂಘಟನೆಗಳಿಂದ ಸ್ವಾತಂತ್ರ್ಯ ದಿನ ಬಹಿಷ್ಕಾರ

National News In India, Pro China Terrorist Outfits Boycott India's Independence Day, ಚೀನಾ ಪರ ಒಲವಿರುವ ಉಗ್ರ ಸಂಘಟನೆಗಳಿಂದ ಸ್ವಾತಂತ್ರ್ಯ ದಿನ ಬಹಿಷ್ಕಾರ

ಚೀನಾ ಪರ ಒಲವಿರುವ ಹಲವು ಸಂಘಟನೆಗಳು ಆಗಸ್ಟ್ ಹದಿನೈದರ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಿಷ್ಕರಿಸಲು ನಿರ್ಧರಿಸಿವೆ. ಏಳು ಉಗ್ರ ಸಂಘಟನೆಗಳು ಜಂಟಿ ಹೇಳಿಕೆ ನೀಡಿದ್ದು, ದೋಕ್ಲಾಂನಲ್ಲಿ ಚೀನಾದೊಂದಿದೆ ತಕರಾರು ತೆಗೆದಿರುವ ಭಾರತ ಭಯದಿಂದ ದೊಡ್ಡ ಮಟ್ಟದಲ್ಲಿ ಎಪ್ಪತ್ತನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದೆ ಎನ್ನುವ ಮೂಲಕ ಉದ್ಧಟತನ ಮೆರೆದಿವೆ.

ಮಣಿಪುರ ಹಾಗೂ ಮೇಘಾಲಯಗಳ ಉಗ್ರ ಸಂಘಟನೆಗಳು ಈ ಬಗ್ಗೆ ಹೇಳಿಕೆ ನೀಡಿವೆ. ಪ್ರಧಾನಿ ನರೇಂದ್ರ ಮೋದಿ ಅವರ 'ಕಣ್ಣಲ್ಲಿ ಕಣ್ಣಿಟ್ಟು' ನೋಡುವ ಧೋರಣೆಯಿಂದ ಭಾರತ ಸ್ವಾತಂತ್ರ್ಯ ದಿನಾಚರಣೆಗೆ ಮುಂದಾಗಿದೆ. ಇದೇ ವೇಳೆ ಸೈನ್ಯದ ಶಕ್ತಿ ಪ್ರದರ್ಶನ ಕೂಡ ನಡೆಯಲಿದೆ.

Pro-China terror groups call for Independence Day 2017 boycott

ಕಳೆದ ಜುಲೈ ಮೂವತ್ತರಂದು ಚೀನಾವು ಪಿಎಲ್ ಎ ತೊಂಬತ್ತನೇ ದಿನಾಚರಣೆಯನ್ನು ಅದ್ಧೂರಿಯಾಗಿ ಮಾಡಿತ್ತು. ಅದು ಕೂಡ ಅದ್ಭುತವಾಗಿತ್ತು. ಚೀನಾದ ಜತೆಗೆ ಹಂಚಿಕೊಂಡಿರುವ ಗಡಿಯಲ್ಲಿ ಇಂಥ ಸನ್ನಿವೇಶ ಏರ್ಪಡಲು ಅದು ಕೂಡ ಕಾರಣವೇ ಎಂದು ಹೇಳಿಕೆಯಲ್ಲಿ ಪ್ರಶ್ನಿಸಲಾಗಿದೆ.

ಈನಾದ ಬಗ್ಗೆ ಇರುವ ಭಾರತದ ನೀತಿಯು ದೋಕ್ಲಾಂ ವಿಚಾರದಲ್ಲಿ ಎಲ್ಲರಿಗೂ ಗೊತ್ತಾಗಿದೆ. ತಜ್ಞರು ಭಾರತದ ಅಸಹಾಯಕತೆ ಹಾಗೂ ದೌರ್ಬಲ್ಯದ ಸನ್ನಿವೇಶವನ್ನು ಬಯಲು ಮಾಡಿದ್ದು, ಇಡೀ ಜಗತ್ತು ಗಮನಿಸುತ್ತಿದೆ ಎಂದು ಉಗ್ರ ಸಂಘಟನೆಗಳು ಹೇಳಿವೆ.

"ಒಂದು ದೇಶ, ಒಂದೇ ಜನ, ಒಂದು ಸಂಸ್ಕೃತಿ" ಎನ್ನುವ ಘೋಷ ವಾಕ್ಯದ ಮೂಲಕ ಭಾರತವು ಈ ಪ್ರದೇಶದಲ್ಲಿ ಕೇಸರಿಕರಣಕ್ಕೆ ಮುಂದಾಗಿದೆ ಎಂದು ಹೇಳಿಕೆಯಲ್ಲಿ ಆರೋಪಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+