ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರದಲ್ಲಿ ನಿತೀಶ್, ಲಾಲೂ ಜೋಡಿಯನ್ನು ಬೆಂಡೆತ್ತಿದ ಮೋದಿ

|
Google Oneindia Kannada News

ಬಿಹಾರ್ ಷರೀಫ್ (ನಳಂದಾ), ಅ 26: ಬುಧವಾರ (ಅ 28) ನಡೆಯಲಿರುವ ಮೂರನೇ ಹಂತದ ಅಸೆಂಬ್ಲಿ ಚುನಾವಣೆಗೆ ಮುನ್ನ ಭಾನುವಾರ ಬಿಹಾರದಲ್ಲಿ ಪಕ್ಷದ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಬಿರುಸಿನ ಪ್ರಚಾರ ನಡೆಸಿದ್ದಾರೆ.

ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟ ಜಯಗಳಿಸುವುದು ನಿಶ್ಚಿತ, ದೊಡ್ಡಣ್ಣ ಮತ್ತು ಚಿಕ್ಕಣ್ಣ ಅವರ ದುರಾಡಳಿತದಿಂದ ಬಿಹಾರದ ಜನ ಬೇಸತ್ತಿದ್ದಾರೆಂದು ನಿತೀಶ್ ಕುಮಾರ್ ಮತ್ತು ಲಾಲೂ ಜೋಡಿ ವಿರುದ್ದ ಹರಿಹಾಯ್ದಿದ್ದಾರೆ.

ನಿತೀಶ್ ಕುಮಾರ್ ಅವರ ಹೆಡ್ ಕ್ವಾಟ್ರಸ್ ಬಿಹಾರ್ ಷರೀಫ್ ನಲ್ಲಿ ಭಾರೀ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮೋದಿ, ಲಾಲೂ ಪ್ರಸಾದ್ ಯಾದವ್ ಅವರ ಪುತ್ರರಿಗೆ 1,25,000 ಕೋಟಿ ರೂಪಾಯಿಯನ್ನು ಹೇಗೆ ಬರೆಯುವುದು ಎಂದು ತಿಳಿದಿದೆಯಾ ಎಂದು ವ್ಯಂಗ್ಯವಾಡಿದ್ದಾರೆ. (ನಿತೀಶ್ ಕಿವಿಯಲ್ಲಿ ಮಂತ್ರವಾದಿ ಹೇಳಿದ್ದೇನು)

ಬಿಹಾರದ ನಾಲ್ಕು ಕಡೆ ಭಾನುವಾರ (ಅ 25) ಚುನಾವಣಾ ಸಭೆಯನ್ನು ಉದ್ಡೇಶಿಸಿ ಮಾತನಾಡುತ್ತಿದ್ದ ಮೋದಿ, ಕೇಂದ್ರ ಸರಕಾರ ಅಥವಾ ಬಿಜೆಪಿ ಅಧಿಕಾರದಲ್ಲಿರುವ ಯಾವುದೇ ರಾಜ್ಯದಲ್ಲಿ ಮೀಸಲಾತಿಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ಪುನರುಚ್ಚಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ನಾವು ನೀಡಿದ್ದ ಭರವಸೆಯ ಪ್ರೊಗ್ರೆಸ್ ರಿಪೋರ್ಟನ್ನು 2019ರ ಸಾರ್ವತ್ರಿಕ ಚುನಾವಣೆಯ ವೇಳೆ ಜನರ ಮುಂದಿಡುತ್ತೇವೆ. ಬಾಬಾ ಸಾಹೇಬ್ ಅಂಬೇಡ್ಕರ್ ಹಿಂದುಳಿದ ವರ್ಗಕ್ಕೆ ನೀಡಿರುವ ಮೀಸಲಾತಿಯಲ್ಲಿ ಸೌಲಭ್ಯದಲ್ಲಿ ಯಾವುದೇ ಬದಲಾವಣೆ ತರಬೇಕು ಎನ್ನುವ ಉದ್ದೇಶ ನಮ್ಮ ಸರಕಾರಕ್ಕೆ ಇಲ್ಲ ಎಂದು ಮೋದಿ ಹೇಳಿದ್ದಾರೆ.

ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮೀಸಲಾತಿ ಸಂಬಂಧ ನೀಡಿದ್ದ ಹೇಳಿಕೆ, ಬಿಜೆಪಿಗೆ ಚುನಾವಣೆಯಲ್ಲಿ ಉಲ್ಟಾ ಹೊಡೆಯುವ ಸಾಧ್ಯತೆಯಿದೆ ಎನ್ನುವ ಗುಪ್ತಚರ ವರದಿಯ ಹಿನ್ನಲೆಯಲ್ಲಿ ಮೋದಿ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ.

ನಿತೀಶ್ ಕುಮಾರ್ ಮತ್ತು ಲಾಲೂ ದೊಡ್ಡಣ್ಣ ಮತ್ತು ಚಿಕ್ಕಣ್ಣ, ಮುಂದೆ ಓದಿ..

25 ವರ್ಷಗಳ ದುರಾಡಳಿತ

25 ವರ್ಷಗಳ ದುರಾಡಳಿತ

ಬಿಹಾರದ ಛಪ್ರಾದಲ್ಲಿ ಮಾತಾನಾಡುತ್ತಿದ್ದ ಮೋದಿ, ರಾಜ್ಯದ ಜನರು ಲಾಲೂ ಪ್ರಸಾದ್ ಯಾದವ್ ಮತ್ತು ನಿತೀಶ್ ಕುಮಾರ್ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಇವರೀರ್ವರ ಆಡಳಿತ ಈ ಚುನಾವಣೆಯ ಮೂಲಕ ಅಂತ್ಯಗೊಳ್ಳಲಿದೆ - ನರೇಂದ್ರ ಮೋದಿ. (ಚಿತ್ರ: ಪಿಟಿಐ)

ಚಿಕ್ಕಣ್ಣ ಮತ್ತು ದೊಡ್ಡಣ್ಣ

ಚಿಕ್ಕಣ್ಣ ಮತ್ತು ದೊಡ್ಡಣ್ಣ

ಚಿಕ್ಕಣ್ಣ ಮತ್ತು ದೊಡ್ಡಣ್ಣರ ಆಡಳಿತದಿಂದ ಬೇಸತ್ತಿರುವ ಬಿಹಾರದ ಜನತೆ ಈ ಬಾರಿ ಎನ್ಡಿಎ ಒಕ್ಕೂಟವನ್ನು ಗೆಲ್ಲಿಸಲಿದ್ದಾರೆ ಎನ್ನುವ ಖಚಿತ ವಿಶ್ವಾಸ ನಮಗಿದೆ. ನಾವು ಬಿಹಾರದಲ್ಲಿ ಅಧಿಕಾರಕ್ಕೆ ಬಂದರೆ, ರಾಜ್ಯದಲ್ಲಿನ ಕೈಗಾರಿಕಾ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲಾಗುವುದು ಎನ್ನುವ ಭರವಸೆಯನ್ನು ಮೋದಿ ನೀಡಿದ್ದಾರೆ.

ಬಿಹಾರ ಅಭಿವೃದ್ದಿ ಪಥದತ್ತ

ಬಿಹಾರ ಅಭಿವೃದ್ದಿ ಪಥದತ್ತ

ನಾವು ಅಧಿಕಾರಕ್ಕೆ ಬಂದರೆ ಬಿಹಾರ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯತ್ತೇವೆ, ಜಂಗಲ್ ರಾಜ್ ಸಮಾಪ್ತಿಯಾಗಲಿದೆ. ಮೂಲಭೂತ ಸೌಲಭ್ಯವಾದ ನೀರು, ವಿದ್ಯುತ್ ಹಾಗೂ ರಸ್ತೆಗಳ ಅಭಿವೃದ್ಧಿಯನ್ನು ಆದ್ಯತೆ ಮೇಲೆ ಕೈಗೆತ್ತಿಕೊಳ್ಳಲಾಗುವುದು - ಮೋದಿ (ಚಿತ್ರ: ಪಿಟಿಐ)

ಯುವಕರಿಗೆ ಪ್ರಾಶಸ್ತ್ಯ

ಯುವಕರಿಗೆ ಪ್ರಾಶಸ್ತ್ಯ

ಬಿಹಾರದ ಯುವಕರು ರಾಜ್ಯ ಬಿಟ್ಟು ಬೇರೆಡೆ ಹೋಗಲು ನಿತೀಶ್ ಹಾಗೂ ಲಾಲೂ ಅವರೇ ಪ್ರಮುಖ ಕಾರಣ ಎನ್ನುವುದನ್ನು ಅರಿತಿದ್ದೇವೆ. ಹಾಗಾಗಿ, ಯುವಕರಿಗೆ ವಿದ್ಯೆ, ಉದ್ಯೋಗ ಹಾಗೂ ವೃದ್ಧರಿಗೆ ವೈದ್ಯಕೀಯ ಸೌಲಭ್ಯ ಮುಂತಾದ ಯೋಜನೆಗಳೂ ನಮ್ಮ ಪಟ್ಟಿಯಲ್ಲಿದೆ. (ಚಿತ್ರ: ಪಿಟಿಐ)

ನಾವು ಅಭಿವೃದ್ದಿ ಬಗ್ಗೆ ಮಾತನಾಡುತ್ತೇವೆ

ನಾವು ಅಭಿವೃದ್ದಿ ಬಗ್ಗೆ ಮಾತನಾಡುತ್ತೇವೆ

ಬಿಹಾರದ ಚುನಾವಣೆಯ ಪ್ರಚಾರದಲ್ಲೆಲ್ಲಾ ನಾವು ರಾಜ್ಯದ ಅಭಿವೃದಿ ಬಗ್ಗೆ ಮಾತನಾಡುತ್ತೇವೆ. ಆದರೆ ಮಹಾಮೈತ್ರಿಕೂಟ ಮೋದಿ.. ಮೋದಿ.. ಎಂದು ಹೇಳುತ್ತಿವೆ. ಜಂಗಲ್ ಮತ್ತು ಗೂಂಡಾರಾಜ್ಯದಿಂದ ಹೊರಬರಲು ಎನ್ಡಿಎಗೆ ಮತ ಹಾಕಿ ಎಂದು ಮೋದಿ ಮನವಿ ಮಾಡಿದ್ದಾರೆ. (ಚಿತ್ರ: ಪಿಟಿಐ)

English summary
Prime Minister Narendra Modi resumes Bihar election campaign. Modi said, Bihar chief minister Nitish Kumar and former CM Lalu Prasad must explain why development has not taken place in Bihar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X