ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಷ್ಟಕ್ಕೂ,, ಮೋದಿ ಕೇರಳಕ್ಕೆ ಭೇಟಿ ನೀಡಿದ್ದು ಯಾಕೆ?

|
Google Oneindia Kannada News

ಕೊಚ್ಚಿ, ಡಿಸೆಂಬರ್, 15: ವಿವಾದದಲ್ಲೆ ನರೇಂದ್ರ ಮೋದಿ ದೇವರ ನಾಡು ಎಂದು ಕರೆಸಿಕೊಳ್ಳುವ ಕೇರಳಕ್ಕೆ ಕಾಲಿಟ್ಟಿದ್ದಾರೆ. ಎಳವಾ ಸಮುದಾಯ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕೇರಳದ ಮಾಜಿ ಮುಖ್ಯಮಂತ್ರಿ ದಿವಂಗತ ಆರ್ ಶಂಕರ್ ಅವರ ಪ್ರತಿಮೆ ಅನಾವರಣ ಮಾಡಿದ್ದಾರೆ.

ಇದು ಮೇಲ್ನೋಟಕ್ಕೆ ಕಂಡುಬರುವ ಸಂಗತಿಯಾಗಿದ್ದರೆ, ಮೋದಿ ನಿಜಕ್ಕೂ ಕೇರಳಕ್ಕೆ ಭೇಟಿ ನೀಡುತ್ತಿರುವುದು ಯಾಕೆ? ಎಂಬ ಪ್ರಶ್ನೆ ದೇಶದ ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಿಸಿದೆ.[ನರೇಂದ್ರ ಮೊದಿ ಕೇರಳ ಭೇಟಿ ಚಿತ್ರಗಳು]

2016 ಮೇ ನಲ್ಲಿ ಕೇರಳ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಈ ಕಾರಣದಿಂದ ಅಲ್ಲಿ ಬಿಜೆಪಿಯನ್ನು ಬಲಗೊಳಿಸುವುದು ಮತ್ತು ಸಂಘಟಿತವನ್ನಾಗಿ ಮಾಡುವುದೇ ಮೋದಿ ಭೇಟಿಯ ಮುಖ್ಯ ಉದ್ದೇಶ. ಕಳೆದ ಸೆಪ್ಟೆಂಬರ್ ನಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕೇರಳಕ್ಕೆ ಭೇಟಿ ನೀಡಿ ಸಮಾವೇಶ ನಡೆಸಿದ್ದರು.

ಕೇರಳ ವಿಧಾನಸಭೆ ಚುನಾವಣೆ ಗುರಿ

ಕೇರಳ ವಿಧಾನಸಭೆ ಚುನಾವಣೆ ಗುರಿ

2016 ಮೇ ನಲ್ಲಿ ಕೇರಳ ಮತ್ತು ತಮಿಳುನಾಡು ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಈ ಕಾರಣದಿಂದ ಅಲ್ಲಿ ಬಿಜೆಪಿಯನ್ನು ಬಲಗೊಳಿಸುವುದು, ಪಕ್ಷದ ಕಾರ್ಯಕರ್ತರಲ್ಲಿ ಸಮನ್ವಯತೆ ಸಾಧಿಸುವುದು ಮೋದಿಯ ಮುಖ್ಯ ಉದ್ದೇಶ.

ಬಿಜೆಪಿ ತೃತೀಯ ಶಕ್ತಿ

ಬಿಜೆಪಿ ತೃತೀಯ ಶಕ್ತಿ

ಕೇರಳದಲ್ಲಿ ಅಧಿಕಾರ ನಡೆಸುತ್ತಿರುವ ಯುಡಿಎಫ್ ಮತ್ತು ಪ್ರತಿಪಕ್ಷವಾದ ಎಲ್ ಡಿಎಫ್ ಗೆ ನೇರ ಸ್ಪರ್ಧೆ ಒಡ್ಡುವುದು ಬಿಜೆಪಿ ಉದ್ದೇಶ. ಅದು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮಹತ್ವದ ಅಂಶ. ಇದನ್ನು ಇಟ್ಟುಕೊಂಡೇ ಮೋದಿ ಪ್ರವಾಸ ಮಾಡುತ್ತಿದ್ದಾರೆ.

ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಸಾಧನೆ

ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಸಾಧನೆ

ಬಿಜೆಪಿ ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗಮನಾರ್ಹ ಸಾಧನೆ ಮಾಡಿತ್ತು. ಬಿಜೆಪಿ ಪಾಲಕ್ಕಾಡ್ ನಗರಸಭೆ ಹಾಗೂ ಕಾಸರಗೋಡಿನ ಮೂರು ಸೇರಿ, 14 ಗ್ರಾಮ ಪಂಚಾಯತಿಗಳಲ್ಲಿ ಅಧಿಕಾರದ ಗದ್ದುಗೆ ಹಿಡಿದಿತ್ತು. ತಿರುವನಂತಪುರ ಕಾರ್ಪೋರೇಷನ್ ನಲ್ಲಿ ಬಿಜೆಪಿ 34 ಸ್ಥಾನ ಗಳಿಸುವ ಮೂಲಕ ಎರಡನೇ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.

ಮುಖ್ಯಮಂತ್ರಿ ಚಾಂಡಿಗೆ ಆಹ್ವಾನವಿಲ್ಲ

ಮುಖ್ಯಮಂತ್ರಿ ಚಾಂಡಿಗೆ ಆಹ್ವಾನವಿಲ್ಲ

ಶಂಕರ್ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿಗೆ ಆಹ್ವಾನವಿಲ್ಲ. ನಾನು ಕಾರ್ಯಕ್ರಮದಿಂದ ದೂರ ಇರುತ್ತೇನೆ ಎಂದು ಸ್ವತಃ ಚಾಂಡಿ ಹೇಳಿಕೆ ನೀಡಿದ್ದರು.

ವಿಮಾನ ನಿಲ್ದಾಣಕ್ಕೆ ಬಂದ ಚಾಂಡಿ

ವಿಮಾನ ನಿಲ್ದಾಣಕ್ಕೆ ಬಂದ ಚಾಂಡಿ

ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತ ಮಾಡಲು ಉಮ್ಮನ್ ಚಾಂಡಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಕೇಂದ್ರ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಕೂಡಾ ಈ ಸಂದರ್ಭದಲ್ಲಿ ಹಾಜರಿದ್ದರು.

English summary
PM Narendra Modi is on a two-day visit to Kerala. He addressed a public meeting in Thrissur town. What is the real goal of this visit? Please read..
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X