ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆನ್ನನ್ನೇ ಪೊರಕೆಯಾಗಿಸಿದ ಪತ್ರಕರ್ತರಿಗೆ ಮೋದಿ ಥ್ಯಾಂಕ್ಸ್

|
Google Oneindia Kannada News

ನವದೆಹಲಿ, ಅ.25: 'ನೀವು ಪೆನ್ನನ್ನು ಪೊರಕೆಯಾಗಿಸಿದಿರಿ. ಅದಕ್ಕೆ ಎಷ್ಟು ಧನ್ಯವಾದ ಸಲ್ಲಿಸಿದರೂ ಕಡಿಮೆಯೇ, ಈ ನಿಮ್ಮ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಸ್ವಚ್ಛ ಭಾರತ ಕನಸಿಗೆ ಕೈಜೋಡಿಸಿದ ನಿಮಗೆ ಅನಂತ ಧನ್ಯವಾದಗಳು' ಹೀಗೆ ಹೇಳಿದ್ದು ಪ್ರಧಾನಿ ನರೇಂದ್ರ ಮೋದಿ.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ನರೇಂದ್ರ ಮೋದಿ ಮಾಧ್ಯಮದವರಿಗೆ ಚಹಾ ಪಾರ್ಟಿ ನೀಡಿದರು. ದೆಹಲಿಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ನರೇಂದ್ರ ಮೋದಿ ಅಭಿಪ್ರಾಯ ಹಂಚಿಕೊಂಡರು.

modi

ಸರ್ಕಾರದ ಸಾಧನೆಗಳು, ಚುನಾವಣೆಯಲ್ಲಿ ಬಿಜೆಪಿ ಸಾಧನೆ, ಸ್ಚಚ್ಛತಾ ಅಭಿಯಾನ ಮುಂತಾದ ಅನೇಕ ವಿಷಯಗಳ ಕುರಿತು ಪ್ರಧಾನಿ ಮಾತನಾಡಿದರು. ಪತ್ರಕರ್ತರಿಗೆ ದೀಪಾವಳಿ ಶುಭಾಶಯ ಕೋರಿದರು.[ಚಿತ್ರಗಳಲ್ಲಿː ಸೈನಿಕರೊಂದಿಗೆ ಮೋದಿ ದೀಪಾವಳಿ]

ಸ್ವಚ್ಛತಾ ಅಭಿಯಾನದ ಬಗ್ಗೆ ಮತ್ತೆ ಮಾತನಾಡಿದ ಮೋದಿ, ನೀವು ನೀಡಿದ ಸಹಕಾರ ಮರೆಯಲಾರೆ. ಇದೇ ಮೊದಲ ಬಾರಿಗೆ ಪತ್ರಿಕೆಗಳು, ಎಲೆಕ್ಟ್ರಾನಿಕ್ ಮಾಧ್ಯಮಗಳು ಸ್ವಚ್ಛತೆ ಕುರಿತ ಲೇಖನಗಳನ್ನು ಸರಣಿ ರೀತಿಯಲ್ಲಿ ಪ್ರಕಟಿಸುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು. ಕೇಂದ್ರದ ಅನೇಕ ಸಚಿವರು, ಹಿರಿಯ ಪತ್ರಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮೋದಿ ಭಾಷಣದ ಹೈಲೈಟ್ಸ್

* ಐದು ತಿಂಗಳ ಆಡಳಿತ ತೃಪ್ತಿ ನೀಡಿದೆ.
* ಮಾಧ್ಯಮದೊಂದಿಗೆ ನಾವು ಸದಾ ಸ್ನೇಹದಿಂದ ವರ್ತಿಸುತ್ತಿದ್ದೇವೆ.
* ಸ್ವಚ್ಛತಾ ಅಭಿಯಾನಕ್ಕೆ ನೀವು ನೀಡಿದ ಬೆಂಬಲಕ್ಕೆ ಚಿರಋಣಿ.
* ಒಳ್ಳೆ ಕೆಲಸವನ್ನು ಪ್ರಶಂಸಿಸಿದ್ದಕ್ಕೆ ಧನ್ಯವಾದಗಳು.
* ಕಳೆದ ಒಂದು ತಿಂಗಳಿಂದ ಮಾಧ್ಯಮವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ.
* ಈ ದಿನ ಮಾಧ್ಯಮದವರೊಂದಿಗೆ ನನ್ನ ಅಭಿಪ್ರಾಯ ಹಂಚಿಕೊಳ್ಳಲು ಸಂತಸವಾಗುತ್ತಿದೆ.
* ನಿಮ್ಮನ್ನು ಅನೇಕ ದಿನಗಳಿಂದ ಭೇಟಿ ಮಾಡಬೇಕು ಎಂದುಕೊಂಡಿದ್ದೆ.
* ಮಾಧ್ಯಮಗಳಿಂದ ಸಾಕಷ್ಟು ಕಲಿಯುವುದಿದೆ.
* ಸರ್ಕಾರ ಮತ್ತು ಮಾಧ್ಯಮಗಳ ನಡುವಿನ ಸಂಬಂಧ ವೃದ್ಧಿಗೆ ಶ್ರಮಿಸುತ್ತೇನೆ.
* ಉತ್ತಮ ಕೆಲಸಕ್ಕೆ ನೀವು ನೀಡಿದ ಬೆಂಬಲ ನಮ್ಮ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ.

English summary
Prime Minister Narendra Modi arrived at Dipawali Milan, the event organised to see him and top leaders of his party and government interact with journalists over tea. The event took place at Ashok Road, adjoining the BJP headquarters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X