ಇಂದು 'ಚೌಕಿದಾರ'ರೊಂದಿಗೆ ಪ್ರಧಾನಿ ಮೋದಿ ಸಂವಾದ

Recommended Video

      lok sabha election 2019: 'ಚೌಕಿದಾರ'ರೊಂದಿಗೆ ಪ್ರಧಾನಿ ಮೋದಿ ಸಂವಾದ

      ನವದೆಹಲಿ, ಮಾರ್ಚ್ 20: 'ಮೇಂ ಭೀ ಚೌಕಿದಾರ್' ಆಂದೋಲನವನ್ನು ಇನ್ನಷ್ಟು ತೀವ್ರಗೊಳಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಾದ್ಯಂತ ಇರುವ 'ಚೌಕಿದಾರ'ರೊಂದಿಗೆ ಬುಧವಾರ ಸಂವಾದ ನಡೆಸಲಿದ್ದಾರೆ.

      ಆಡಿಯೋ ಬ್ರಿಡ್ಜ್ ತಂತ್ರಜ್ಞಾನದ ಮೂಲಕ ಈ ಸಂವಾದ ನಡೆಯಲಿದೆ. 'ಮೇಂ ಭೀ ಚೌಕಿದಾರ್' ಆಂದೋಲನಕ್ಕೆ ಬೆಂಬಲ ನೀಡಿರುವ ಜನರನ್ನು ಉದ್ದೇಶಿಸಿ ಮೋದಿ ಅವರು ಮಾರ್ಚ್ 31ರಂದು ವಿಡಿಯೋ ಕಾನ್ಫೆರೆನ್ಸ್ ಮೂಲಕ ಮತ್ತೊಮ್ಮೆ ಮಾತನಾಡಲಿದ್ದಾರೆ.

      ಸಾಮಾನ್ಯವಾಗಿ ಆರಂಭಿಸಿದ ಆಂದೋಲನ ಬೃಹತ್ ಚಳವಳಿಯಾಗಿ ಬದಲಾಗಿದೆ ಎಂದು ಪ್ರಧಾನಿ ಮೋದಿ ಅವರ ಎರಡು ಕಾರ್ಯಕ್ರಮಗಳ ಬಗ್ಗೆ ಪ್ರಕಟಣೆ ನೀಡಿರುವ ಬಿಜೆಪಿ ಮಾಧ್ಯಮ ಘಟಕದ ಸಂಚಾಲಕ ಅನಿಲ್ ಬಲೂನಿ ತಿಳಿಸಿದ್ದಾರೆ.

      Prime Minister Narendra Modi interaction with chowkidars

      ಟ್ವಿಟ್ಟರ್‌ನಲ್ಲಿ ಕನಿಷ್ಠ 20 ಲಕ್ಷ ಜನರು ಬೆಂಬಲಕ್ಕೆ ಬಂದಿದ್ದಾರೆ ಮತ್ತು 'ಮೇಂ ಭೀ ಚೌಕಿದಾರ್' ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ವೀಟ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

      'ಹಿನ್ನೆಲೆಯಲ್ಲಿ ಸದ್ದಿಲ್ಲದೆ ಕೆಲಸ ಮಾಡುವ, ದೇಶದ ಅಗೋಚರ ಸ್ಥಂಬಗಳಾದ ಸಾಮಾನ್ಯ ಜನರನ್ನು ಗುರಿಯಾಗಿರಿಸಿಕೊಂಡಿದ್ದ ಈ ಕಾರ್ಯಕ್ರಮ ಈಗಾಗಲೇ ಬೃಹತ್ ಚಳವಳಿಯಾಗಿ ಮಾರ್ಪಟ್ಟಿದೆ. ಮಾರ್ಚ್ 20ರಂದು ನಡೆಸುವ ಚೌಕಿದಾರರೊಂದಿಗಿನ ಸಂವಾದ 'ಅಂತ್ಯೋದಯ' ಮತ್ತು 'ಸಬ್‌ ಕಾ ಸಾತ್ ಸಬ್‌ಕಾ ವಿಕಾಸ್' ವಿಷಯಗಳತ್ತ ಪ್ರಮುಖವಾಗಿ ಬೆಳಕು ಚೆಲ್ಲಲಿವೆ' ಎಂದಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+