ಪ್ರಧಾನಿ ಮೋದಿಗೆ ಜೀವ ಬೆದರಿಕೆ, ಕಂಡು ಕೇಳರಿಯದ ಬಿಗಿ ಭದ್ರತೆ

ನವ ದೆಹಲಿ, ಜೂನ್ 26: ಪ್ರಧಾನಿ ಮೋದಿ ಅವರ ಪ್ರಾಣಕ್ಕೆ ಅಪಾಯ ಇರುವ ಕಾರಣ ಅವರ ಭದ್ರತೆಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಈ ಹಿಂದೆ ಯಾರಿಗೂ ಇರದಂತಹಾ ಭದ್ರತೆಯನ್ನು ಪ್ರಧಾನಿ ಅವರಿಗೆ ಕಲ್ಪಿಸಲಾಗಿದೆ.

ರಾಜೀವ್ ಗಾಂಧಿ ಅವರ ರೀತಿಯಲ್ಲಿಯೇ ಪ್ರಧಾನಿ ಮೋದಿ ಅವರನ್ನು ಕೊಲ್ಲಲು ಮಾವೋವಾದಿಗಳು ಸಂಚು ರೂಪಿಸಿದ್ದು ಇತ್ತೀಚೆಗಷ್ಟೆ ಬಯಲಾದ ಕಾರಣ ಮೋದಿ ಅವರಿಗೆ ಬಹುಹಂತದ ಭದ್ರತೆಯನ್ನು ಗೃಹ ಇಲಾಖೆ ನೀಡುತ್ತಿದೆ.

ಭದ್ರತಾ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದ್ದು, ಎಲ್ಲಾ ರಾಜ್ಯಗಳಿಗೂ ಗೃಹ ಇಲಾಖೆ ಸಂದೇಶ ರವಾನಿಸಿದ್ದು, ಭದ್ರತಾ ನಿಯಮಗಳನ್ನು ಎಲ್ಲಾ ರಾಜ್ಯಗಳು ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶ ನೀಡಿದೆ.

Prime minister Narendra Modi gets highest security

ಸಾರ್ವಜನಿಕ rallyಗಳಲ್ಲಿ ಭಾಗವಹಿಸಿದಾಗ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಿದಂತೆಯೇ ಮೋದಿ ಅವರ ಹತ್ಯೆಗೆ ಸಂಚು ರೂಪಿಸಲಾಗಿದ್ದ ಕಾರಣ ನಕ್ಸಲ್ ಪೀಡಿತ, ಮಾವೋವಾದಿ ಬಾಹುಳ್ಯದ ಪ್ರದೇಶಗಳಲ್ಲಿ ಸಾರ್ವಜನಿಕ rallyಗಳಲ್ಲಿ ಭಾಗವಹಿಸದಂತೆ ಮೋದಿ ಅವರಿಗೆ ಎಚ್ಚರಿಕೆ ನೀಡಲಾಗಿದೆ.

ಇನ್ನುಮುಂದೆ ಶಾಸಕರು ಸಚಿವರು ಕೂಡ ಪ್ರಧಾನಿ ಅವರ ಬಳಿ ಹೋಗಲು ಎನ್‌ಎಸ್‌ಜಿಯಿಂದ ತಪಾಸಣೆಗೆ ಒಳಗಾಗಲೇ ಬೇಕಿದೆ. ಪ್ರಧಾನಿಯವರ ರಾಜ್ಯ ಬೇಟಿಯ ವೇಳೆ ಎಚ್‌ಎಸ್‌ಜಿ ಜೊತೆಗೆ ಅರೆಸೇನಾ ಪಡೆ ಮತ್ತು ಸ್ಥಳೀಯ ಪೊಲೀಸರು ವಿಶೇಷ ಭದ್ರತೆ ಒದಗಿಸಲಿದ್ದಾರೆ.

Prime minister Narendra Modi gets highest security

ವಿವಿಧ ಹಂತಗಳ ಭದ್ರತೆಯನ್ನು ಎನ್‌ಎಸ್‌ಜಿಯು ಪ್ರಧಾನಿ ಅವರಿಗೆ ನೀಡಲಿದ್ದು, ಭದ್ರತಾ ವಿಷಯವಾದ ಕಾರಣ ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+