ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ವರ್ಷಕ್ಕೆ ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್‌ರಿಂದ ಶುಭ ಹಾರೈಕೆ

|
Google Oneindia Kannada News

ನವದೆಹಲಿ, ಜನವರಿ 01: ಹೊಸ ವರ್ಷಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶುಭ ಹಾರೈಸಿದ್ದಾರೆ. ನಿಮಗೆ 2021ರ ಹಾರ್ದಿಕ ಶುಭಾಶಯಗಳು, ಈ ವರ್ಷವು ನಿಮಗೆ ಉತ್ತಮ ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯನ್ನು ನೀಡಲಿ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಹಾಗೆಯೇ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮಾಡಿದ್ದು, ದೇಶವು ಹೊಸ ಭರವಸೆ, ಹೊಸ ಶಕ್ತಿಯೊಂದಿಗೆ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಿ.

ಫೈಜರ್, ಬಯೋಎನ್‌ಟೆಕ್ ಕೊರೊನಾ ಲಸಿಕೆಗಳ ತುರ್ತು ಬಳಕೆಗೆ WHO ಅನುಮತಿಫೈಜರ್, ಬಯೋಎನ್‌ಟೆಕ್ ಕೊರೊನಾ ಲಸಿಕೆಗಳ ತುರ್ತು ಬಳಕೆಗೆ WHO ಅನುಮತಿ

ಕೊರೊನಾ ಸವಾಲಿನ ನಡುವೆ ದೇಶದ ಜನತೆ ಒಗ್ಗಟ್ಟಿನಿಂದ ಮುಂದೆ ಸಾಗಬೇಕು, ಹೊಸ ವರ್ಷವು ಹೊಸತನದ ಆರಂಭಕ್ಕೆ ಒಂದು ಅವಕಾಶವಾಗಿದ್ದು, ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು ಮುನ್ನುಗ್ಗಬೇಕು ಎಂದು ಹೇಳಿದ್ದಾರೆ.

Prime Minister Modi And President Kovind Extends New Year Greetings

ಸಮಾಜದಲ್ಲಿ ಪ್ರೀತಿ, ವಿಶ್ವಾದವನ್ನು ತುಂಬುವ ಪ್ರಯತ್ನಕ್ಕೆ ಅಣಿಯಾಗೋಣ, ದೇಶದ ಸಾಮಾನ್ಯ ಗುರಿಯನ್ನು ತಲುಪಲು ನೆರವಾಗೋಣ, ಆದರೆ ಕೊರೊನಾ ಸಂದರ್ಭದಲ್ಲಿ ಎಲ್ಲರೂ ಒಗ್ಗೂಡಲು ಸಾಧ್ಯವಿಲ್ಲ. ಆದರೆ ದೂರದಿಂದಲೇ ನಿಂತು ದೇಶದ ಅಭಿವೃದ್ಧಿಗೆ ಕೈಜೋಡಿಬೇಕು ಎಂದು ಕರೆ ನೀಡಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯು ಹೊಸ ವರ್ಷಕ್ಕೆ ಹೊಸ ಸುದ್ದಿ ನೀಡಿದೆ. ಫೈಜರ್ ಹಾಗೂ ಬಯೋಎನ್‌ಟೆಕ್ ಕೊರೊನಾ ಲಸಿಕೆಗಳ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮತಿ ನೀಡಿದೆ. ಚೀನಾದಲ್ಲಿ ಕೊರೊನಾವೈರಸ್ ಸೋಂಕು ಕಾಣಿಸಿಕೊಂಡ ಬಳಿಕ ವಿಶ್ವ ಆರೋಗ್ಯ ಸಂಸ್ಥೆ ತುರ್ತು ಬಳಕೆಗೆ ಅನುಮತಿ ಪಡೆದುಕೊಂಡ ಮೊದಲ ಲಸಿಕೆ ಇದಾಗಿದೆ.

ತನ್ನ ತುರ್ತು ಬಳಕೆಯ ಪಟ್ಟಿಯಲ್ಲಿ ವಿವಿಧ ದೇಶಗಳಲ್ಲಿನ ಔಷಧ ನಿಯಂತ್ರಕರಿಗೆ ಲಸಿಕೆ ಆಮದು ಮತ್ತು ವಿತರಣೆಗೆ ಅನುಮೋದನೆ ನೀಡಲು ದಾರಿ ಮಾಡಿಕೊಡುತ್ತದೆ ಎಂದು ಹೇಳಿದೆ. ಕೊರೊನಾ ಲಸಿಕೆಗಳಿಗೆ ಜಾಗತಿಕ ಬಳಕೆಗೆ ಅನುಮತಿ ನೀಡುವ ನಿಟ್ಟಿನಲ್ಲಿ ಇದು ಅತ್ಯಂತ ಸಕಾರಾತ್ಮಕ ಹೆಜ್ಜೆಯಾಗಿದೆ. ಇಂಗ್ಲೆಂಡ್, ಅಮೆರಿಕ, ಕೆನಡಾ ಸೇರಿದಂತೆ ಯುರೋಪ್ ದೇಶಗಳಲ್ಲಿ ಡಿಸೆಂಬರ್ 8 ರಿಂದಲೇ ಈ ಲಸಿಕೆಗೆ ಚಾಲನೆ ನೀಡಲಾಗಿದೆ.

Recommended Video

ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾದಲ್ಲಿ ಹೊಸ ವರ್ಷದ ಆಗಮನ‌ ಮಾಡಿದ್ದು ಹೇಗೆ | Oneindia Kannada

English summary
Prime Minister Modi And President Kovind Extends New Year Greetings ,Wishing you a happy 2021! May this year bring good health, joy and prosperity. May the spirit of hope and wellness prevail
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X