ಮತ್ತೆ ಪೆಟ್ರೋಲ್, ಡಿಸೇಲ್ ದರ 50 ಪೈಸೆ ಏರಿಕೆ
ನವದೆಹಲಿ, ಮಾರ್ಚ್ 27; ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಮತ್ತೆ ಏರಿಕೆ ಮಾಡಿವೆ. ಕಳೆದ 6 ದಿನಗಳಲ್ಲಿ 5ನೇ ಬಾರಿಗೆ ಪೆಟ್ರೋಲ್, ಡೀಸೆಲ್ ದರಗಳು ಏರಿಕೆಯಾಗಿವೆ.
ಭಾನುವಾರ ಪೆಟ್ರೋಲ್ ಮತ್ತು ಡೀಸೆಲ್ ದರಗಳು 50 ಪೈಸೆ ಏರಿಕೆಯಾಗಿದೆ. ಐದು ಬಾರಿ ತೈಲ ಬೆಲೆಗಳಲ್ಲಿ ಏರಿಕೆಯಾಗಿದ್ದು, ಪೆಟ್ರೋಲ್ ಬೆಲೆ ಒಟ್ಟು 3.70 ರೂ. ನಷ್ಟು ಏರಿಕೆ ಕಂಡಿದೆ.
ಇಂದಿನ ದರ ಏರಿಕೆ ಬಳಿಕ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 50 ಪೈಸೆ, ಡೀಸೆಲ್ ಬೆಲೆ 55 ಪೈಸೆ ಏರಿಕೆಯಾಗಿದೆ. ನವದೆಹಲಿಯಲ್ಲಿ ಈಗ ಪೆಟ್ರೋಲ್ ಬೆಲೆ ರೂ. 99.11 ಮತ್ತು ಡೀಸೆಲ್ ಬೆಲೆ 90.42 ಆಗಿದೆ.

ಚೆನ್ನೈ ನಗರದಲ್ಲಿ ಲೀಟರ್ ಪೆಟ್ರೋಲ್ ಬೆಲೆ 104.90 ರೂ. ಮತ್ತು ಲೀಟರ್ ಡೀಸೆಲ್ ಬೆಲೆ 95 ರೂ. ಆಗಿದೆ. ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ದೆ 108.53 ಮತ್ತು ಡೀಸೆಲ್ 93.57 ರೂ. ಆಗಿದೆ.
ಬೆಂಗಳೂರು ನಗರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 104.41 ಮತ್ತು ಡೀಸೆಲ್ ಬೆಲೆ 88.12 ರೂ. ಆಗಿದೆ. ಕರ್ನಾಟಕ ಎಲ್ಲಾ ಜಿಲ್ಲೆಗಳಲ್ಲಿ ಪೆಟ್ರೋಲ್ ದರ 100 ರೂ. ಗಡಿ ದಾಟಿದೆ.
ಉತ್ತರ ಪ್ರದೇಶ ಸೇರಿದಂತೆ 5 ರಾಜ್ಯಗಳ ವಿಧಾನಸಭೆ ಚುನಾವಣೆ ಮುಕ್ತಾಯಗೊಂಡ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಏರಿಯಾಗಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಅದು ಹಾಗೆಯೇ ಆಗಿದ್ದು ಪ್ರತಿದಿನ ಬೆಲೆ ಏರುತ್ತಲೇ ಇದೆ.












Click it and Unblock the Notifications