• search
For Quick Alerts
ALLOW NOTIFICATIONS  
For Daily Alerts

  ನ್ಯಾಯಮೂರ್ತಿಗಳ ನಿಗೂಢ ನಡೆ: ಸಿಡಿದೆದ್ದ ಜಡ್ಜ್ ಗಳ ಬಗ್ಗೆ ಜನರೇನಂತಾರೆ?

  |

  ನವದೆಹಲಿ, ಜನವರಿ 12: ಯಾವುದೇ ವಿಷಯಯವನ್ನು ಪೂರ್ವಗ್ರಹವಿಲ್ಲದೆ, ನಿಷ್ಪಕ್ಷಪಾತವಾಗಿ ವಿಶ್ಲೇಶಿಸುವ, ತೀರ್ಪು ನೀಡುವ ನ್ಯಾಯಾಂಗ ವ್ಯವಸ್ಥೆಯಲ್ಲೇ ಹುಳುಕು ಮೂಡಿದರೆ..? ಅಂಥದೊಂದು ಆರೋಪವನ್ನು ಜವಾಬ್ದಾರಿಯುತ ಸ್ಥಾನದಲ್ಲಿರುವ ನ್ಯಾಯಮೂರ್ತಿಗಳೇ ಮಾಡಿದರೆ..? ದೇಶ ಎಂದೂ ಕಂಡಿರದ ಅಪರೂಪದ, ವಿಚಿತ್ರ ಘಟನೆ ಅದು.

  ಭಾರತದ ಮಟ್ಟಿಗೆ ಅಂಥ ಘಟನೆ ಇಂದು(ಜ.12) ನಡೆದುಬಿಟ್ಟಿದೆ. ಸುಪ್ರೀಂ ಕೋರ್ಟ್ ನ ನಾಲ್ವರು ಘಟಾನುಘಟಿ ನ್ಯಾಯಮೂರ್ತಿಗಳು ನವದೆಹಲಿಯಲ್ಲಿಂದು ಸುದ್ದಿಗೋಷ್ಠಿ ಕರೆಯುವ ಮೂಲಕ, 'ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಎಲ್ಲವೂ ಸರಿಯಿಲ್ಲ' ಎಂಬ ಸೂಚನೆಯನ್ನು ನೀಡಿದ್ದಾರೆ.

  ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಸುದ್ದಿಗೋಷ್ಠಿ ಕರೆದಿದ್ದು ಏಕೆ?

  ನಾಲ್ಕು ತಿಂಗಳ ಹಿಂದೆಯೇ ಈ ನಾಲ್ವರು ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿಗೆ ನ್ಯಾಯಾಂಗದಲ್ಲಿನ ಹುಳುಕಗಳ ಕುರಿತು ಪತ್ರ ಬರೆದಿದ್ದರಾದರೂ, ಆ ಪತ್ರಕ್ಕೆ ಮಿಶ್ರಾ ಕಡೆಯಿಂದ ನಿರೀಕ್ಷಿತ ಪ್ರತಿಕ್ರಿಯೆ ಲಭ್ಯವಾಗಿರಲಿಲ್ಲ.

  ಸೋಹ್ರಾಬುದ್ದಿನ್ ಎನ್ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ನ್ಯಾ.ಬಿ.ಎಚ್.ಲೋಯಾ ಅನುಮಾನಾಸ್ಪದ ಸಾವಿನ ಕುರಿತಂತೆ ಈ ಪತ್ರದಲ್ಲೇನಾದರೂ ಉಲ್ಲೇಖವಿತ್ತಾ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆದರೆ ಮುಖ್ಯನ್ಯಾಯಮೂರ್ತಿಗಳ ಕುರಿತ ಅಸಮಾಧಾನವಂತೂ ಈ ನಾಲ್ವರು ನ್ಯಾಯಮೂರ್ತಿಗಳ ಪತ್ರಿಕಾಗೋಷ್ಠಿಯಿಂದ ಬಯಲಾಗಿದೆ.

  ನ್ಯಾಯಮೂರ್ತಿಗಳ ನಿಗೂಢ ನಡೆ: ಸಿಡಿದೆದ್ದ ಜಡ್ಜ್ ಗಳ ಬಗ್ಗೆ ಜನರೇನಂತಾರೆ

  ದೇಶದಲ್ಲಿ ಇದ್ದಕ್ಕಿದ್ದಂತೆ ಸಂಭವಿಸಿದ ಈ ಬೆಳವಣಿಗೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ.

  ಯಾವ್ಯಾವ ಪ್ರಕರಣ ಏನಾಗಿದೆ ಎಂಬುದು ನಮಗೆ ಗೊತ್ತು!

  ಜಸ್ಟಿಸ್ ಚೆಲಮೇಶ್ವರ್ ಅವರೇ ಧನ್ಯವಾದಗಳು. ಆಧಾರ್, ಸಿಬಿಐ ನಿರ್ಧೇಶಕ, ಜಡ್ಜ್ ಲೋಯಾ ಅವರ ಪ್ರಕರಣಗಳೆಲ್ಲ ಏನಾಗುತ್ತಿವೆ ಎಂಬುದು ನಮಗೆಲ್ಲರಿಗೂ ಗೊತ್ತು. ಯಾವುದೇ ಪ್ರಕರಣದಲ್ಲಿ ನ್ಯಾಯಾಂಗದ ಸಂಪ್ರದಾಯ, ಶಿಷ್ಟಾಚಾರಗಳನ್ನು ಮೀರಿ ಒಬ್ಬ ಮುಖ್ಯನ್ಯಾಯಮೂರ್ತಿ ನ್ಯಾಯಪೀಠದ ಗಾತ್ರವನ್ನು ನಿರ್ಧರಿಸುವುದು ಎಂದರೆ ಅದು ನ್ಯಾಯಾಂಗದ ವಿಡಂಬನೆಯೇ ಸರಿ. ನಿಮ್ಮ ಈ ನಡೆಗೆ ನಾವು ಸದಾ ಧನ್ಯವಾದ ಅರ್ಪಿಸುತ್ತೇವೆ ಎಂದು ದಿವಾ ಎಂಬುವವರು ಟ್ವೀಟ್ ಮಾಡಿದ್ದಾರೆ.

  ಸಂಕ್ರಾಂತಿ ವಿಶೇಷ ಪುಟ

  ಸರ್ವಾಧಿಕಾರ ನಡೆಯುತ್ತಿದೆ

  ಭಾರತದಲ್ಲಿ ಸರ್ವಾಧಿಕಾರ ನಡೆಯುತ್ತಿದೆ. ಅಮಿತ್ ಶಾ ಮತ್ತು ನರೇಂದ್ರ ಮೋದಿಯವರಿಂದಾಗಿ ಪ್ರತಿ ಕ್ಷೇತ್ರವೂ ಪ್ರಭಾವಿತವಾಗುತ್ತಿದೆ. ಅದು ಮೀಡಿಯಾ ಇರಬಹುದು, ಚುನಾವಣಾ ಆಯೋಗ, ನ್ಯಾಯಾಂಗ ಎಲ್ಲವೂ. ಭಾರತವನ್ನು ಕಾಪಾಡಿ. ಇಲ್ಲವೆಂದರೆ ಕಾಲ ಮೀರಿ ಹೋಗಬಹುದು ಎಂದು ಆಕಾಶ್ ಉಚಾನಿ ಎಂಬುವವರು ಟ್ವೀಟ್ ಮಾಡಿದ್ದಾರೆ.

  ಎಂಥ ಹೇಡಿತನ!

  ಜಸ್ಟಿಸ್ ಚೆಲಮೇಶ್ವರ್ ಗೆ ಮುಖ್ಯನ್ಯಾಯಮೂರ್ತಿಯಾಗುವ ಆಸೆಯಿತ್ತು. ಆದರೆ ಈಡೇರಿರಲಿಲ್ಲ. ಅದಕ್ಕಾಗಿ ಅವರು ಈ ಪತ್ರಿಕಾ ಗೋಷ್ಠಿಯಂಥ ಹೇಡಿಕೆಲಸವನ್ನು ಮಾಡುತ್ತಿದ್ದಾರೆ. ಈ ಪತ್ರಿಕಾಗೋಷ್ಠಿ ಏಕೆ? ಇಂಥ ಆರೋಪಗಳಿಗೆ ಯಾವ ಸಾಕ್ಷ್ಯವಿದೆ? ಜಡ್ಜ್ ಗಳಾಗಿ ಇಂಥ ಕೆಲಸ ಮಾಡಬಾರದಿತ್ತು ಎಂದಿದ್ದಾರೆ ಶೋವಿತ್ ಸಿನ್ಹಾ.

  ಇದು ಭಾರತದ ಇತಿಹಾಸದಲ್ಲೇ ಮೊದಲು.

  ಸುಪ್ರೀಂ ಕೋರ್ಟ್ ಕುರಿತ ಆರೋಪಗಳು ಮತ್ತು ಪ್ರಶ್ನೆಗಳು ನಿಜಕ್ಕೂ ಬೇಸರ ತರಿಸುವ ಸಂಗತಿ. ಇದು ಭಾರತದ ಇತಿಹಾಸದಲ್ಲೇ ಒಂದು ಆಘಾತಕಾರಿ ದಿನ. ಈ 4 ನ್ಯಾಯಮೂರ್ತಿಗಳು ಮಾಡಿರುವುದು ಅಸಾಮಾನ್ಯವಾಗಿದ್ದನ್ನು ಎಂದಿದ್ದಾರೆ ಅರಿಬ್ ಮೆಹರ್.

  ಶೋಚನೀಯ ದಿನ

  ಭಾರತ ಬೇಯುತ್ತಿದೆ. ಉತ್ತನ ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟಿನ ಕುರಿತು ಆರೋಪ ಹೊರಿಸುವುದು ನಿಜಕ್ಕೂ ಅತ್ಯಂತ ಶೋಚನೀಯ ಸಂಗತಿ. ನ್ಯಾಯಾಂಗದ ಸ್ವಾತಂತ್ರ್ಯ ಇಂದು ರಾಜಿ ಮಾಡಿಕೊಳ್ಳುತ್ತಿದೆ. ಪ್ರಜಾಪ್ರಭುತ್ವ ಅಪಾಯದಲ್ಲಿದೆ. ದೇಶವೂ ಆಘಾತಕ್ಕೊಳಗಾಗಿದೆ ಎಂಮದು ಆಧಾರ್ ಲಿಂಕಡ್ ಅನಾರ್ಕಿಸ್ಟ್ ಎಂಬ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  In a first in independent India's history and a first for the Supreme Court of India, four judges addressing the media on Jan 12th, appealed to the nation to save their institution if they wanted democracy in the country to survive. Here are few twitter statements on this development

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more