ರಾಷ್ಟ್ರದ ಅಭಿವೃದ್ದಿಗೆ ಎಲ್ಲರೂ ಪಣ ತೊಡೋಣ : ರಾಷ್ಟ್ರಪತಿ ಭಾಷಣ

Recommended Video

      ರಾಷ್ಟ್ರ ಅಭಿವೃದ್ದಿ ಬಗ್ಗೆ ರಾಷ್ಟ್ರಪತಿಗಳ ಭಾಷಣ..! | Oneindia Kannada

      ನವದೆಹಲಿ, ಆಗಸ್ಟ್ 14 : 'ರಾಷ್ಟ್ರದ ಅಭಿವೃದ್ದಿಗೆ ಎಲ್ಲರೂ ಪಣ ತೊಡಬೇಕಿದೆ. ದೇಶದಲ್ಲಿ ನಿರುದ್ಯೋಗ ತೊಲಗಬೇಕು, ಬಡತನ ನಿವಾರಣೆಯಾಗಬೇಕು' ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕರೆ ನೀಡಿದರು.

      72ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ರಾಮನಾಥ್ ಕೋವಿಂದ್ ಮಂಗಳವಾರ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದರು. 'ಆಗಸ್ಟ್ 15 ಪ್ರತಿಯೊಬ್ಬ ಭಾರತೀಯನ ಪಾಲಿಗೆ ಪವಿತ್ರವಾದ ದಿನ. ನಮ್ಮ ತ್ರಿವರ್ಣ ಧ್ವಜ ದೇಶದ ಅಸ್ಮಿತೆಯ ಸಂಕೇತ' ಎಂದು ಬಣ್ಣಿಸಿದರು.

      ದೇಶದ ಜನರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದ ರಾಷ್ಟ್ರಪತಿಗಳು, 'ನಮ್ಮ ಪೂರ್ವಜರ ತ್ಯಾಗ, ಬಲಿದಾನದಿಂದಾಗಿ ನಮಗೆ ಇಂದು ಸ್ವಾತಂತ್ರ್ಯ ಸಿಕ್ಕಿದೆ. ಪೂರ್ವಜರು ಹಾಕಿಕೊಟ್ಟ ಮಾರ್ಗದಲ್ಲಿ ಇಂದು ಸಾಗಬೇಕಿದೆ' ಎಂದರು.

      President Ram Nath Kovind

      ರಾಷ್ಟ್ರಪತಿಗಳ ಭಾಷಣದ ಮುಖ್ಯಾಂಶಗಳು

      * ನಮ್ಮ ರೈತರು ಜನರ ಹಸಿವು ನೀಗಿಸಲು ಆಹಾರವನ್ನು ಉತ್ಪಾದಿಸುತ್ತಾರೆ. ಅವರ ಆದಾಯ ದ್ವಿಗುಣವಾಗಬೇಕಿದೆ. ಅನ್ನದಾತರ ಏಳಿಗೆಗೆ ನಾವು ಶ್ರಮಿಸುವ ಮೂಲಕ ಸ್ವಾತಂತ್ರ್ಯ ಯೋಧರ ಕನಸನ್ನು ನನಸು ಮಾಡಬೇಕಿದೆ.

      * ಒಂದು ಕಡೆ ರೈತರು ಆಹಾರ ಬೆಳೆದು ದೇಶವನ್ನು ಕಾಪಾಡುತ್ತಿದ್ದಾರೆ. ಮತ್ತೊಂದು ಕಡೆ ಸೈನಿಕರು ಪ್ರಾಣವನ್ನು ಪಣಕ್ಕಿಟ್ಟು ದೇಶವನ್ನು ಕಾಪಾಡುತ್ತಿದ್ದಾರೆ. ಅವರ ಕಾರ್ಯವನ್ನು ನಾವು ಕೊಂಡಾಡಬೇಕು.

      * ಮಹಾತ್ಮಾ ಗಾಂಧೀಜಿ ಅವರು ಅಹಿಂಸೆ ಎನ್ನುವ ಅಸ್ತ್ರವನ್ನು ನೀಡಿದ್ದಾರೆ. ಗಾಂಧೀಜಿ ಅವರ ಆಲೋಚನೆಗಳ ಆಳವನ್ನು ನಾವು ಅರ್ಥ ಮಾಡಿಕೊಳ್ಳಬೇಕು.

      * ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಮತ್ತು ಅಕ್ಟೋಬರ್ 2ರ ಗಾಂಧಿ ಜಯಂತಿ ಮಹತ್ವ ಪಡೆದುಕೊಂಡಿದೆ. ಅಕ್ಟೋಬರ್ 2ರಂದು ಗಾಂಧೀಜಿ ಅವರ 150ನೇ ಜನ್ಮದಿನೋತ್ಸವವಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+