For Daily Alerts
ತುರ್ತು ಯುದ್ಧಕ್ಕೆ ವಾಯುಸೇನೆ ಸಿದ್ಧ : ಏರ್ ಚೀಫ್ ಮಾರ್ಷಲ್ ಧನೊಯ್
ನವದೆಹಲಿ, ಅಕ್ಟೋಬರ್ 8: ತಕ್ಷಣದ ಯುದ್ಧಕ್ಕೆ ವಾಯುಸೇನೆ ಸಿದ್ಧವಾಗಿದೆ ಎಂದು ವಾಯುಸೇನೆ ಮುಖ್ಯಸ್ಥ ಬಿಎಸ್ ಧನೊಯ್ ಹೇಳಿದ್ದಾರೆ.
ವಾಯುಸೇನೆ ದಿನಾಚರಣೆ : ಯುದ್ಧವಿಮಾನಗಳ ಶಕ್ತಿ ಪ್ರದರ್ಶನ
ವಾಯು ಪಡೆದ ದಿನದ ಹಿನ್ನಲೆಯಲ್ಲಿ ಮಾತನಾಡಿದ ಏರ್ ಚೀಫ್ ಮಾರ್ಷನ್ ಧನೊಯ್, ವಾಯು ಪಡೆ ದೇಶದ ಭದ್ರತೆಗೆ ಎದುರಾಗುವ ಯಾವುದೇ ಅಪಾಯಗಳನ್ನು ಎದುರಿಸಲು ಸರ್ವ ಸನ್ನದ್ಧವಾಗಿದೆ ಎಂದು ವಿಶ್ವಾಸದ ಮಾತುಗಳನ್ನಾಡಿದ್ದಾರೆ.
"ತಕ್ಷಣ ನೊಟೀಸ್ ನೀಡಿದರೆ ನಾವು ಹೋರಾಡಲು ಸಿದ್ದವಾಗಿದ್ದೇನೆ ," ಎಂದು ಅವರು ಹೇಳಿದ್ದಾರೆ. ಭಾರತೀಯ ಭೂ ಸೇನೆ ಮತ್ತು ನೌಕಾ ಸೇನೆಯೊಂದಿಗೆ ಜತೆ ಜತೆಯಾಗಿ ಕೆಲಸ ಮಾಡಲು ನಾವು ತಯಾರಾಗಿದ್ದೇವೆ ಎಂದು ದನೋಯ್ ತಿಳಿಸಿದ್ದಾರೆ.
ಪಠಾನ್ ಕೋಟ್ ಮೇಲೆ ಉಗ್ರರು ದಾಳಿ ನಡೆಸಿದ ನಂತರ ವಾಯು ಸೇನೆಯ ಎಲ್ಲಾ ಸ್ಟೇಷನ್ ಗಳನ್ನು ಮೇಲ್ದರ್ಜೆಗೇರಿಸಲಾಗಿದ್ದು ಎಲ್ಲಾ ರೀತಿಯ ಪ್ರತಿದಾಳಿ ನಡೆಸಲು ಸರ್ವ ಸನ್ನದ್ಧವಾಗಿವೆ ಎಂದು ವಾಯು ಪಡೆ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.