ಸಮೀಕ್ಷೆ: ರಾಜಸ್ಥಾನದಲಿ ಅರಳಲಿದೆ ಮುದುಡಿದ ತಾವರೆ

ಜೈಪುರ, ಅ 30: ಹಾಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸರಕಾರದ ಭ್ರಷ್ಟಾಚಾರ ಮತ್ತು ಬೆಲೆ ಏರಿಕೆ ಆಡಳಿತ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಶಾಪವಾಗಿ ಪರಿಣಮಿಸುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ, ಚುನಾವಣಾಪೂರ್ವ ಸಮೀಕ್ಷೆ ಕೂಡಾ ಅದನ್ನೇ ಹೇಳುತ್ತಿದೆ.

ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಸಿಂಧ್ಯಾ ನೇತೃತ್ವದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದ್ದು, ಆಡಳಿತ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಹಿನ್ನಡೆಯಾಗಲಿದೆ ಎಂದು ಸಿಎನ್ಎನ್ -ಐಬಿಎನ್- ದಿ ವೀಕ್ - ಸಿಎಸ್ಡಿಎಸ್ ನಡೆಸಿದ ಸಮೀಕ್ಷೆಯಲ್ಲಿ ಹೇಳಲಾಗಿದೆ.

ಸಮೀಕ್ಷೆ ಪ್ರಕಾರ ಶೇ. 51 ಮಂದಿ ವಸುಂಧರಾ ರಾಜೆ ಸಿಂಧ್ಯಾ ಮುಖ್ಯಮಂತ್ರಿ ಆಗಬೇಕೆಂದು ಬಯಸಿದರೆ ಗೆಹ್ಲೋಟ್ ಪರ ಶೇ. 27 ಮತ ಚಲಾಯಿಸಿದ್ದಾರೆ. ಸಮೀಕ್ಷೆಯಲ್ಲಿ ಹೇಳಲಾದ ಪ್ರಮುಖ ಅಂಶವೇನಂದರೆ ಜಾಟ್ಸ್, ಠಾಕೂರ್ ಮತ್ತು ರಜಪೂತ್ ಸಮುದಾಯ ಈ ಬಾರಿ ಕಾಂಗ್ರೆಸ್ ಪರ ಒಲವು ತೋರಿಸದೇ ಇರುವುದು.

Pre poll survey, BJP set to sweep Rajasthan Assembly election

ಅಕ್ಟೋಬರ್ 14ರಿಂದ 21ರ ಅವಧಿಯಲ್ಲಿ 49 ಕ್ಷೇತ್ರಗಳ 196 ಮತಗಟ್ಟೆಯಲ್ಲಿ 4427 ಜನ ಮತದಾರರ ಅಭಿಪ್ರಾಯ ಸಂಗ್ರಹಿಸಿ ಈ ಸಮೀಕ್ಷೆ ನಡೆಸಲಾಗಿದೆ.

ರಾಜಸ್ಥಾನದ ಹೆಚ್ಚಿನ ಕಡೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆಯಿದ್ದು, ಅಸೆಂಬ್ಲಿ ಚುನಾವಣೆ ಡಿಸೆಂಬರ್ ಒಂದರಂದು ನಡೆಯಲಿದ್ದು, ಡಿಸೆಂಬರ್ ಎಂಟರಂದು ಫಲಿತಾಂಶ ಹೊರಬೀಳಲಿದೆ.

ಚುನಾವಣಾಪೂರ್ವ ಸಮೀಕ್ಷೆಯ ಫಲಿತಾಂಶ ಇಂತಿದೆ:
(ಆವರಣದಲ್ಲಿ ಪ್ರಸಕ್ತ ಅಸೆಂಬ್ಲಿಯಲ್ಲಿನ ಪಕ್ಷಗಳ ಬಲಾಬಲ)

ಒಟ್ಟು ಸ್ಥಾನಗಳು : 200
ಬಿಜೆಪಿ - 115 ರಿಂದ 125 (78)
ಕಾಂಗ್ರೆಸ್ - 60 ರಿಂದ 68 ( 96)
ಬಿಎಸ್ಪಿ - 4 ರಿಂದ 8 ( 6)
ಇತರರು - 8 ರಿಂದ 12 (20)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+