ಪ್ರಣವ್ ಮುಖರ್ಜಿ ಸೇರಿ ಮೂವರಿಗೆ ಇಂದು ಭಾರತ ರತ್ನ ಪ್ರದಾನ
ನವದೆಹಲಿ, ಆಗಸ್ಟ್ 08: ಮಾಜಿ ರಾಷ್ಟ್ರಪತಿ ಕಾಂಗ್ರೆಸ್‌ನ ಪ್ರಮುಖ ಮುಖಂಡ ಪ್ರಣವ್ ಮುಖರ್ಜಿ ಅವರಿಗೆ ಇಂದು ಭಾರತ ಸರ್ಕಾರವು ಭಾರತ ರತ್ನ ಗೌರವ ಪ್ರದಾನ ಮಾಡುತ್ತಿದೆ.
ಪ್ರಣವ್ ಮುಖರ್ಜಿ ಅವರ ಜೊತೆಗೆ ಅಸ್ಸಾಂನ ಹಾಡುಗಾರ ಬುಪೇನ್ ಹಜಾರಿಕಾ ಮತ್ತು ಸಾಮಾಜಿಕ ಹೋರಾಟಗಾರ ನಾಂಜಿ ದೇಶಮುಖ ಅವರಿಗೆ ಇಂದು ರಾಷ್ಟ್ರಪತಿಗಳು ಭಾರತದ ದೇಶದ ಅತ್ಯುತ್ತನತ ನಾಗರೀಕ ಪ್ರಶಸ್ತಿ ಭಾರತ ರತ್ನವನ್ನು ನೀಡಲಿದ್ದಾರೆ.
ನಾಂಜಿ ದೇಶಮುಖ ಹಾಗೂ ಅಸ್ಸಾಂ ಹಾಡುಗಾರ ಬುಪೇನ್ ಹಜಾರಿಕಾ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿಯು ದೊರೆಯುತ್ತಿದೆ. ಅವರ ಕುಟುಂಬ ಸದಸ್ಯರು ಇಂದು ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಐದು ದಶಕದಿಂದ ರಾಜಕಾರಣದಲ್ಲಿ ಸಕ್ರಿಯರಾಗಿ ತೊಡಗಿಕೊಂಡಿರುವ 83 ವರ್ಷದ ಪ್ರಣವ್ ಮುಖರ್ಜಿ ಅವರ ಸಾಮಾಜಿಕ, ರಾಜಕೀಯ ಸೇವೆಗಳನ್ನು ಗುರುತಿಸಿ ಅವರಿಗೆ ಭಾರತ ರತ್ನ ಕೊಡಲಾಗುತ್ತಿದೆ.
ಭಾರತ ರತ್ನ ಪ್ರಶಸ್ತಿ ಸ್ವೀಕರಿಸುತ್ತಿರುವ ಐದನೇಯ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಆಗಿದ್ದಾರೆ. ಇದಕ್ಕೂ ಮುನ್ನಾ ಎಸ್.ರಾಧಾಕೃಷ್ಣನ್, ರಾಜೇಂದ್ರ ಪ್ರಸಾದ್, ವಿವಿ ಗಿರಿ, ಝಾಕಿರ್ ಹುಸೇನ್ ಅವರುಗಳು ಭಾರತ ರತ್ನ ಸ್ವೀಕರಿಸಿದ್ದರು.
ಅಸ್ಸಾಂನ ಹಾಡುಗಾರ ಬುಪೇನ್ ಹಜಾರಿಕಾ ಅವರು, ಬಂಗಾಳ, ಬಂದ್ಲಾದೇಶದಲ್ಲಿ ಅತ್ಯಂತ ಖ್ಯಾತ ಹಾಡುಗಾರರು, ಜಾನಪದ ಶೈಲಿಯ ಅವರ ಹಾಡುಗಳು ಅತ್ಯಂತ ಪ್ರಸಿದ್ಧಿ ಪಡೆದಿವೆ. ಹಾಡುಗಳ ಮೂಲಕ ಅವರು ತಂದ ಸಾಮಾಜಿಕ ಬದಲಾವಣೆ ಅವರಿಗೆ ಭಾರತ ರತ್ನ ದೊರಕುವಂತೆ ಮಾಡಿದೆ. ಅವರು 2015 ರಲ್ಲಿ ನಿಧನಹೊಂದಿದ್ದರು. ಪ್ರಣವ್ ಅವರೊಂದಿಗೆ ಇವರಿಗೂ ಸಹ ಇಂದು ಮರಣೋತ್ತರವಾಗಿ ಭಾರತ ರತ್ನ ದೊರೆಯುತ್ತಿದೆ.
ಮಹಾರಾಷ್ಟ್ರದಲ್ಲಿ ಹುಟ್ಟಿದ ಸಾಮಾಜಿಕ ಹೋರಾಟಗಾರ ನಾಂಜಿ ದೇಶ್‌ಮುಖ್ ಅವರು ಸಂಸದರಾಗಿ, ರಾಜ್ಯಸಭಾ ಸದಸ್ಯರಾಗಿ, ಸಾಮಾಜಿಕ ಹೋರಾಟಗಾರರಾಗಿ ಚಿರಪರಿಚಿತರು. ಇವರು ಜನ ಸಂಘದ ಸಂಸ್ಥಾಪಕರಲ್ಲಿ ಒಬ್ಬರು. ಜೊತೆಗೆ ಆರ್‌ಎಸ್‌ಎಸ್ ಸಂಘಟನೆಯ ಪ್ರಮುಖ ಮುಖಂಡರೂ ಆಗಿದ್ದ ಇವರು. ಜೆಪಿ ಆಂದೋಲದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರು 2010 ರಲ್ಲಿ ಮೃತರಾದರು. ಇವರಿಗೂ ಇಂದು ಮರಣೋತ್ತರವಾಗಿ ಭಾರತ ರತ್ನ ನೀಡಲಾಗುತ್ತಿದೆ.












Click it and Unblock the Notifications