ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಕಿರಣ್ ಬೇಡಿ ನೇಮಕ

Posted By:
Subscribe to Oneindia Kannada

ನವದೆಹಲಿ, ಮೇ 22: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಭಾನುವಾರದಂದು ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರನ್ನು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ ಮಾಡಿದ್ದಾರೆ.

ಬಿಜೆಪಿ ನಾಯಕಿ ಕಿರಣ್ ಬೇಡಿ ಅವರು ಈಗ ಉಪ ರಾಜ್ಯಪಾಲೆಯಾಗಿ ಕಾರ್ಯನಿರ್ವಹಿಸಲಿದ್ದಾರೆ. ದೆಹಲಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಜೆಪಿ ಟಿಕೆಟ್ ಪಡೆದು ವಿಧಾನಸಭೆಗೆ ಸ್ಪರ್ಧಿಸಿದ್ದ ಕಿರಣ್ ಬೇಡಿ ಅವರು ಸೋಲು ಕಂಡಿದ್ದರು. ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಅವರು ಜಯ ಗಳಿಸಿ ಸಿಎಂ ಆಗಿ ಅಧಿಕಾರವಹಿಸಿಕೊಂಡಿದ್ದು ಈಗ ಹಳೆ ವಿಚಾರ.[ಸಮಸ್ತ ಭಾರತೀಯರಿಗೆ ಕಿರಣ್ ಬೇಡಿ ಬಹಿರಂಗ ಪತ್ರ]

Kiran Bedi named as Lieutenant Governor of Puducherry

1972ರಲ್ಲಿ ದೇಶದ ಮೊದಲ ಐಪಿಎಸ್ ಮಹಿಳಾ ಅಧಿಕಾರಿ ಎನಿಸಿಕೊಂಡ ಕಿರಣ್ ಬೇಡಿ ಅವರು 35ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ನಂತರ ಸಾಮಾಜಿಕ ಕಳಕಳಿ ಕಾರ್ಯಕ್ರಮ, ಭ್ರಷ್ಟಾಚಾರ ವಿರೋಧಿ ಆಂದೋಲನಗಳಲ್ಲಿ ಪಾಲ್ಗೊಂಡರು. ನಂತರ ಬಿಜೆಪಿ ಸೇರಿ ದೆಹಲಿ ಅಸೆಂಬ್ಲಿಗೆ ಸ್ಪರ್ಧಿಸಿದ್ದರು. ಆದರೆ, ಕೃಷ್ಣಾನಗರ ಕ್ಷೇತ್ರದಲ್ಲಿ ಕಿರಣ್ ಸೋಲು ಕಂಡರು. ಈಗ ಹೊಸ ಜವಾಬ್ದಾರಿಯನ್ನು ಕಿರಣ್ ವಹಿಸಿಕೊಳ್ಳಲಿದ್ದಾರೆ.

ಪುದುಚೇರಿ(ಈ ಹಿಂದಿನ ಪಾಂಡಿಚೇರಿ) ಯಲ್ಲಿ ಇತ್ತೀಚೆಗೆ ವಿಧಾನಸಭಾ ಚುನಾವಣೆ ನಡೆದು ಮೇ 19ರಂದು ಫಲಿತಾಂಶ ಹೊರ ಬಂದಿದೆ. ಕಾಂಗ್ರೆಸ್ 15 ಹಾಗೂ ಮೈತ್ರಿ ಪಕ್ಷ ಡಿಎಂಕೆ 2 ಸ್ಥಾನ ಗಳಿಸಿ 30 ಸ್ಥಾನಗಳ ಅಸೆಂಬ್ಲಿಯಲ್ಲಿ ಅಧಿಕಾರ ಸ್ಥಾಪಿಸಲು ಮುಂದಾಗಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
President Pranab Mukherjee on Sunday appoints Kiran Bedi, as the Lt. Governor of Union Territory Puducherry. Kiran Bedi, the first woman IPS officer, plunged into electoral politics joining the Bharatiya Janata Party as its chief ministerial candidate for 2015 Delhi Assembly elections but lost the battle against AAP's Arvind Kejriwal.
Please Wait while comments are loading...